Advertisement

ಜಿಗಿ ಜೇಡಕ್ಕೆ ಅಂತಾರಾಷ್ಟ್ರೀಯ ಮನ್ನಣೆ

07:28 AM Apr 23, 2019 | mahesh |

ಮಂಗಳೂರು: ದಕ್ಷಿಣ ಭಾರತದ ಎರಡು ಪಟ್ಟಿಗಳ ಜಿಗಿಯುವ ಜೇಡವಾದ ‘ಟೆಲಮೋನಿಯ ಡಿಮಿಡಿಯಾಟಾ’ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ವನ್ಯಜೀವಿ ಸಂಶೋಧನೆಯಲ್ಲಿ ತೊಡಗಿರುವ ಸಂಶೋಧಕ ಜಾವೇದ್‌ ಅಹ್ಮದ್‌ ನೇತೃತ್ವದಲ್ಲಿ ಮೂಡುಬಿದಿರೆ ಮೂಲದ ಪರಿಸರವಾದಿ, ಶಸ್ತ್ರಚಿಕಿತ್ಸಕ ಮತ್ತು ವನ್ಯಜೀವಿ ಉತ್ಸಾಹಿ ಕೃಷ್ಣ ಮೋಹನ್‌, ನೈಸರ್ಗಿಕವಾದಿ ಬಿರ್ಡೆರ್‌, ಜೇಡಶಾಸ್ತ್ರಜ್ಞೆ ರಾಜಶ್ರೀ ಖಲಾಪ್‌, ನೈಸರ್ಗಿಕ ಮತ್ತು ಮ್ಯಾಕ್ರೊ ವನ್ಯಜೀವಿ ಛಾಯಾಚಿತ್ರಗ್ರಹಣ ಉತ್ಸಾಹಿ ಸೋಮನಾಥ್‌ ಕುಂಬಾರ್‌ ಅವರು ಸಿದ್ಧಪಡಿಸಿದ ಸಂಶೋಧನ ಲೇಖನ ಈಗ ಅಂತಾರಾಷ್ಟ್ರಿಯವಾಗಿ ಪ್ರಭಾವ ಹೊಂದಿರುವ ವೈಜ್ಞಾನಿಕ ಜರ್ನಲ್ ‘ಪೆಕ್ಯಾಮಿಯಾ’ನಲ್ಲಿ ಪ್ರಕಟವಾಗಿದೆ.

Advertisement

ಎರಡು ಪಟ್ಟಿಯ ಜಿಗಿ ಜೇಡವು ಮತ್ತೂಂದು ಪ್ರಭೇದದ ಜೇಡವನ್ನು ತಿನ್ನುವ ದೃಶ್ಯಗಳನ್ನು ಸೋಮನಾಥ್‌ ಬಿ. ಕುಂಬಾರ್‌ ಚಿತ್ರೀಕರಿಸಿದ್ದರು. ಈ ತಂಡವು ಜಂಪಿಂಗ್‌ ಜೇಡಗಳ ಮೇಲೆ ಜಾಗತಿಕ ಮಟ್ಟದಲ್ಲಿ ಸಂಶೋಧನೆ ಮಾಡುತ್ತಿರುವ ಡಾ| ಡೇವಿಡ್‌ ಇ. ಹಿಲ್ ಮತ್ತು ಇಂಟರ್‌ನ್ಯಾಶನಲ್ ಯೂನಿಯನ್‌ ಫಾರ್‌ ಕನ್ಸರ್ವೇಶನ್‌ ಆಫ್‌ ನೇಚರ್‌ ಸಹಯೋಗದಲ್ಲಿ ಕೆಲಸ ಮಾಡುವ ತಜ್ಞರಾದ ಡಾ| ರಿಚರ್ಡ್‌ ಜೆ. ಪಿಯರ್ಸ್‌ ಅವರ ಸಹಯೋಗವನ್ನು ಪಡೆದುಕೊಂಡಿತ್ತು.

ಫೆಕ್ಯಾಮಿಯಾ’ ಪತ್ರಿಕೆಯಲ್ಲಿ ಪ್ರಕಟ
ಜಂಪಿಂಗ್‌ ಜೇಡಗಳು ಜೇಡ ಕುಟುಂಬದ ಸಾಲ್ಟಿಡಿಡೆಗೆ ಸೇರಿವೆ. ಸುಲಭವಾಗಿ ಗುರುತು ಹಿಡಿಯಬಲ್ಲ ಸಾಮಾನ್ಯ ಜೇಡವಾಗಿದ್ದರೂ ಇದರ ಬಗ್ಗೆ ಸರಿಯಾಗಿ ಅಧ್ಯಯನ ಮಾಡಲಾಗಿಲ್ಲ. ಈ ಸಂಶೋಧನೆಯ ವಿಸ್ತೃತ ವರದಿಯನ್ನು 2019ರ ಮಾ. 25ರ ‘ಫೆಕ್ಯಾಮಿಯಾ’ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಭಾರತೀಯ ಜೇಡಗಳ ಅಧ್ಯಯನದಲ್ಲಿ ಆಸಕ್ತರಾಗಿರುವ ರಾಜಶ್ರೀ ಖಲಾಪ್‌ ಅವರು ರಜೆಯ ವೇಳೆ ಮನೆಯ ಸುತ್ತಮುತ್ತಲಿರುವ ಉದ್ಯಾನದಲ್ಲಿ ಎರಡು ಪಟ್ಟೆಗಳ ಜಿಗಿಯುವ ಜೇಡದ ಸೂಕ್ಷ್ಮ ಹಿಮ್ಮೆಟ್ಟುವಿಕೆಯನ್ನು ಚಿತ್ರೀಕರಿಸಿದ್ದರು. ಜೇಡಗಳ ಜೀವನ ಬಗ್ಗೆ ಸಾಮಾನ್ಯ ತಿಳಿವಳಿಕೆ ಮತ್ತು ಅಧ್ಯಯನ ಕೊರತೆ ಇದೆ ಎಂದು ಗೊತ್ತಾದ ಮೇಲೆ ಖಲಾಪ್‌ ಅವರು ರಜೆಯಲ್ಲಿ ಕೊಂಕಣ ಕರಾವಳಿಯ ತನ್ನ ಮನೆಗೆ ಹೋದಾಗ ಇದರ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿದರು.

ವಿಸ್ತೃತ ಅಧ್ಯಯನ

Udayavani is now on Telegram. Click here to join our channel and stay updated with the latest news.

Next