ಚಿತ್ರದುರ್ಗ: ಇಂದು ಹೆಚ್ಚು ಚಾಲ್ತಿಯಲ್ಲಿರುವ ಟೆಲಿಮೆಡಿಸನ್ ಯೋಜನೆ ಅತ್ಯಮೂಲ್ಯವಾಗಿದೆ ಎಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಹೇಳಿದರು.
ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ವಿಶ್ವಮಾನವ ಗ್ರಾಮೀಣ ಕ್ಲಿನಿಕ್, ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ಸಹಯೋಗದಲ್ಲಿ ಸೀಬಾರದಲ್ಲಿ ಆಯೋಜಿಸಿದ್ದ ಟೆಲಿಮೆಡಿಸಿನ್, ರಕ್ತದ ಮಾದರಿ ಸಂಗ್ರಹ ಮತ್ತು ಆಸ್ಪತ್ರೆಯ ಮಾಹಿತಿ ಹಾಗೂ ಮಾರ್ಗದರ್ಶನ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರಗಳಲ್ಲಿ ನಮ್ಮ ದೇಶ ಪ್ರಗತಿ ಹೆಮ್ಮೆ ಪಡುವತೆ ಇದೆ. ಈ ವಿಚಾರಗಳುಎಲ್ಲಾ ಸಾರ್ವಜನಿಕರ ಗಮನಕ್ಕೆ ಬರುವಂತೆ ನಾವು ಮಾಡಬೇಕಿದೆ. ಈ ಯೋಜನೆಗಳು ಸಫಲವಾದರೆ ಸಾರ್ಥಕತೆ ಬರುತ್ತದೆ ಎಂದರು.
ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ. ತುಳಸಿ ರಂಗನಾಥ್ ಮಾತನಾಡಿ, ಸರ್ಕಾರದಿಂದ ಗ್ರಾಮೀಣ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ದೊರೆಯುವ ಆರೋಗ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಸರ್ಕಾರ ಟೆಲಿಮೆಡಿಸನ್ ಯೋಜನೆ ಜಾರಿಗೊಳಿಸುತ್ತಿದ್ದು, ಈ ಕೇಂದ್ರದ ಹತ್ತಿರವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈ ಟೆಲಿಮೆಡಿಸನ್ ಜ್ಞಾನವನ್ನು ಸಾರ್ವಜನಿಕರಿಗೆ ತಲುಪಿಸಲು ಸೂಚಿಸುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ನರಸಿಂಹರಾಜು ಮಾತನಾಡಿ, ವಿಶ್ವಮಾನವ ಸಾಂಸ್ಕೃತಿಕ ವಿದ್ಯಾಸಂಸ್ಥೆಯಿಂದ ನೀಡುವಆರೋಗ್ಯ ಸೌಲಭ್ಯಗಳು ಹಾಗೂ ಶಿಕ್ಷಣ ಸೌಲಭ್ಯಗಳನ್ನು ಶ್ಲಾಘಿಸಿದರು.
ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಅಧಿಧೀಕ್ಷಕ ಡಾ.ನಾಗರಾಜ ಶೇಟ್ ಮಾತನಾಡಿ, ಯೆನೆಪೋಯ ಆಸ್ತತ್ರೆಯ ಯೋಜನೆಗಳು, ಸೌಲಭ್ಯಗಳು ಹಾಗೂ ಟೆಲಿಮೆಡಿಸಿನ್ ಕುರಿತು ವಿವರಿಸಿದರು.
ವಿಶ್ವಮಾನವ ಸಂಸ್ಥೆ ಅಧ್ಯಕ್ಷ ಟಿ.ಎಚ್. ಬುಡೇನ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಗೀತಾ, ಏ.ಎಚ್. ಎರಿಮನೆ, ರಾಣಿಬೆನ್ನೂರು ಟೆಲಿಮೆಡಿಸಿನ್ ಉಸ್ತುವಾರಿ ಎಂ.ನೀಲಕಂಠದೇವ, ಸಾಹಿತಿ ಷರೀಫಾಬಿ ಮತ್ತಿತರರಿದ್ದರು.