ನವದೆಹಲಿ: ಜನಪ್ರಿಯ ಅಪ್ಲಿಕೇಶನ್ ಟೆಲಿಗ್ರಾಂ, 2021 ರಲ್ಲಿ ಬರೋಬ್ಬರಿ 63 ಮಿಲಿಯನ್ ಡೌನ್ ಲೋಡ್ ಆಗುವ ಮೂಲಕ ಅತೀ ಹೆಚ್ಚು ಡೌನ್ ಲೋಡ್ ಆದ ಆ್ಯಪ್ ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಈ ಕುರಿತಾಗಿ ಸೆನ್ಸರ್ ಟವರ್ ಸಂಸ್ಥೆ ವರದಿಯೊಂದನ್ನು ನೀಡಿದ್ದು. ಪ್ಲೇ-ಸ್ಟೋರ್ ನಲ್ಲಿ ಅತೀ ಹೆಚ್ಚು ಡೌನ್ ಲೋಡ್ ಆದ ಆ್ಯಪ್ ಗಳ ಪಟ್ಟಿಯಲ್ಲಿ ಟೆಲಿಗ್ರಾಂ ಸ್ಥಾನ ಪಡೆದಿದೆ. ಈ ಹಿಂದೆ ಡೌನ್ ಲೋಡ್ ವಿಚಾರವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ 9ನೇ ಸ್ಥಾನದಲ್ಲಿದ್ದ ಟೆಲಿಗ್ರಾಂ ಇದೀಗ ಅಗ್ರ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇನ್ನು ಆ್ಯಪಲ್ ಸ್ಟೋರ್ ನಲ್ಲಿಯೂ ಅತೀ ಹೆಚ್ಚು ಡೌನ್ ಲೋಡ್ ಆಗಿರುವ ಆ್ಯಪ್ ಗಳ ಪೈಕಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ನಾಳೆ ಚಾಲನೆಗೊಳ್ಳಲಿದೆ ರಾಯಚೂರಿನ ಮೊದಲ ನೀರಾ ಮಳಿಗೆ
ಟೆಲಿಗ್ರಾಂ ವಿಶ್ವದಾದ್ಯಂತ ಬರೋಬ್ಬರಿ 63 ಮಿಲಿಯನ್ ಡೌನ್ ಲೋಡ್ ಗಳನ್ನು ಪಡೆದುಕೊಂಡಿದ್ದು, ಈ ಪೈಕಿ ಭಾರತದಲ್ಲಿಯೇ ಶೇ 24 ರಷ್ಟು ಮಂದಿ ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. ಶೇ. 10 ರಷ್ಟು ಜನರು ಇಂಡೋನೇಶಿಯನ್ನರಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಹೊರತುಪಡಿಸಿ ಅತೀ ಹೆಚ್ಚು ಡೌನ್ ಲೋಡ್ ಆದ ಆ್ಯಪ್ ಗಳಲ್ಲಿ ಟಿಕ್ ಟಾಕ್ 2ನೇ ಸ್ಥಾನ ಪಡೆದಿದೆ.
ವಾಟ್ಸ್ ಅಪ್ ನೂತನ ನಿಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಹಲವಾರು ಬಳಕೆದಾರರು ಟೆಲಿಗ್ರಾಂ, ಸಿಗ್ನಲ್ ಸೇರಿದಂತೆ ಹಲವು ಆ್ಯಪ್ ಗಳತ್ತ ಮುಖಮಾಡಿದ್ದರು.
ಇದನ್ನೂ ಓದಿ: ಬಿಜೆಪಿ ಯುವ ಮುಖಂಡರಿಗೆ ಸೋಶಿಯಲ್ ಮೀಡಿಯಾ ಪಾಠ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ