Advertisement

ಕೊನೆಗೂ ಸಿಕ್ಕಿಬಿದ್ದ ‘ತೆಲಂಗಾಣ ವೀರಪ್ಪನ್‌’

03:55 AM May 14, 2019 | Team Udayavani |
ಹೈದರಾಬಾದ್‌: ತೆಲಂಗಾಣದಲ್ಲಿ ದಶಕಗಳಿಂದ ತನ್ನದೇ ಗ್ಯಾಂಗ್‌ ಕಟ್ಟಿಕೊಂಡು ಮರಗಳ ಕಳ್ಳಸಾಗಣೆ ಮಾಡುತ್ತಿದ್ದ, ತೆಲಂಗಾಣದ ವೀರಪ್ಪನ್‌ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಯೆಡ್ಲ ಶ್ರೀನಿವಾಸ್‌ ಅಲಿಯಾಸ್‌ ಶ್ರೀನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೆಡ್ಡಪಲ್ಲಿ ಜಿಲ್ಲೆಯ ರಾಮಗುಂಡ ಎಂಬಲ್ಲಿ ಆತ ಮತ್ತು ಆತನ ಇಬ್ಬರು ಆಪ್ತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಮರಿ ವೀರಪ್ಪನ್‌ನ 20 ವರ್ಷಗಳ ಅಟ್ಟಹಾಸಕ್ಕೆ ತೆರೆಬಿದ್ದಿದೆ.

ಆಂಧ್ರಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರಗಳಲ್ಲೂ ವ್ಯಾಪ್ತಿಸಿತ್ತು. ಈತನ ಉಪಟಳದಿಂದ ಮಂಚೇರಿಯಲ್, ಮಂಥಾನಿ ಹಾಗೂ ಚೆನ್ನೂರ್‌ನಲ್ಲಿನ ದಟ್ಟ ಅರಣ್ಯ ಪ್ರಾಂತ್ಯದ ಸಸ್ಯ ಸಂಕುಲವೇ ವಿನಾಶದ ಅಂಚಿಗೆ ಬಂದು ತಲುಪಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next