Advertisement

ಕೋವಿಡ್ ಭೀತಿಯ ನಡುವೆಯೂ ವಿಜಯನಗರ ಕಾಲುವೆಗಳ ದುರಸ್ತಿಗೆ ತೆಲಂಗಾಣದ ಕಾರ್ಮಿಕರು

08:42 AM May 18, 2020 | keerthan |

ಗಂಗಾವತಿ: ಕೋವಿಡ್-19 ರೋಗದ  ಭಯದ ಮಧ್ಯೆದಲ್ಲೂ ತಾಲೂಕಿನ ದೇವಘಾಟ ಹತ್ತಿರ ಇರುವ ಪುರಾತನ ವಿಜಯನಗರ ಕಾಲುವೆ ದುರಸ್ತಿ ಕಾರ್ಯಕ್ಕೆ ತೆಲಂಗಾಣ ರಾಜ್ಯ ಮಹೆಬೂಬ ನಗರ ಜಿಲ್ಲೆಯ ಕೂಲಿಕಾರ್ಮಿಕರನ್ನು ಬಳಕೆ ಮಾಡಲಾಗುತ್ತಿದೆ.

Advertisement

ಕಳೆದ ವರ್ಷ ಜೂನ್ ತಿಂಗಳಲ್ಲಿ ಗಂಗಾವತಿ ಹೊಸಪೇಟೆ ಕಂಪ್ಲಿ ಕೊಪ್ಪಳ ತಾಲೂಕಿನಲ್ಲಿ ಹರಿಯುವ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯ ಆರಂಭವಾಗಿದೆ. ಈ ಕಾಮಗಾರಿ ಈಗಾಗಲೇ ಶೇ.60ರಷ್ಟು ಮುಗಿದಿದೆ. ತೆಲಂಗಾಣ ರಾಜ್ಯದ ಕಾರ್ಮಿಕರು ಹೊಸಪೇಟೆ, ಮುನಿರಾಬಾದ್ ನಲ್ಲಿ ಕಾಲುವೆ ಕೆಲಸ ಮುಗಿಸಿ ಕಳೆದ ಶನಿವಾರ ರಾತ್ರಿ ದೇವಘಾಟ ಹತ್ತಿರ ಕಾಲುವೆ ಕೆಲಸಕ್ಕೆ ಸುಮಾರು 70 ಕುಟುಂಬದ ಸದಸ್ಯರು ಚಿಕ್ಕಮಕ್ಕಳು ಆಗಮಿಸಿದ್ದು ಕೋವಿಡ್-19 ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ಪರೀಕ್ಷೆ ನಡೆದಿಲ್ಲ.

ವೈದ್ಯಕೀಯ ಪರೀಕ್ಷೆ ಇಲ್ಲ:ವಿಜಯನಗರ ಕಾಲುವೆ ಕಾಮಗಾರಿ ಮಾಡಲು ತೆಲಂಗಾಣ ರಾಜ್ಯದ ಮಹೆಬೂಬನಗರ ಜಿಲ್ಲೆಯ ಪಾಲ್ಯಂ, ಚಿನ್ನಂಮದ್ದೂರು ನಾಗರಕರ್ನೂಲ್ ಗ್ರಾಮಗಳಿಂದ ಆಗಮಿಸಿದ್ದು ಹೊಸಪೇಟೆ ಮುನಿರಾಬಾದ ನಲ್ಲಿ ರಾಯಬಸವಣ್ಣ ಕಾಲುವೆ ದುರಸ್ತಿ ಕಾರ್ಯ ಮಾಡಿ ದೇವಘಾಟ ಕಾಲುವೆ ದುರಸ್ತಿ ಕಾರ್ಯಕ್ಕೆ ಆಗಮಿಸಿದ್ದು ಕೋವಿಡ್-19 ವೈದ್ಯಕೀಯ ಪರೀಕ್ಷೆ ನಡೆಸಿಲ್ಲ ಎಂದು ನರಸಯ್ಯ ತಿಳಿಸಿದ್ದಾರೆ

ನೋಂದಣಿಯಾಗಿದೆ: ವಿಜಯನಗರ ಕಾಲುವೆ ಶಾಶ್ವತ ದುರಸ್ತಿ ಕಾರ್ಯ ನಾಡಲು ತೆಲಂಗಾಣ ರಾಜ್ಯದಿಂದ ಕಳೆದ ಡಿಸೆಂಬರ್ ನಲ್ಲಿ ಕೂಲಿಕಾರ್ಮಿಕರು ಆಗಮಿಸಿದ್ದು ಮುನಿರಾಬಾದ ಗ್ರಾ.ಪಂ.ನಲ್ಲಿ ನೋಂದಣಿ ಮಾಡಲಾಗಿದೆ. ಗಂಗಾವತಿ ವೈದ್ಯಕೀಯ ಪರೀಕ್ಷೆಯಾಗಿಲ್ಲ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ವೈದ್ಯಕೀಯ ಪರೀಕ್ಷೆ ಕುರಿತು ಮನವಿ ಮಾಡಲಾಗುತ್ತದೆ ಕಾಮಗಾರಿ ಮೇಲ್ವಿಚಾರಕ ರತ್ನಾಕರ ಉದಯವಾಣಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next