ಹೈದರಾಬಾದ್: ಮಹಿಳೆಯೊಬ್ಬರು ತನಗೆ ಕಚ್ಚಿದ ಹಾವನ್ನೇ ಕೊಂದು ಬಳಿಕ ಅದನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದು ಆಸ್ಪತ್ರೆಗೆ ದಾಖಲಾದ ಘಟನೆಯೊಂದು ಜಿಲ್ಲೆಯ ವೆಂಕಟಾಪುರಂ ನೂಗೂರು ಮಂಡಲದ ಮುಕುನೂರುಪಾಲೆಂ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಏನಿದು ಘಟನೆ:
ಮುಳುಗು -ವೆಂಕಟಾಪುರ ಮಂಡಲದ ಮುಕುನೂರುಪಾಲೆಂ ಗ್ರಾಮದ ನಿವಾಸಿ ಶಾಂತಮ್ಮ ಅವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಅದರಂತೆ ಹಳ್ಳಿಯೊಂದರಲ್ಲಿ ಕೆಲಸಕ್ಕೆ ಹೋಗಿದ್ದ ಶಾಂತಮ್ಮ ಅವರಿಗೆ ಹಾವೊಂದು ಕಚ್ಚಿದೆ ಕೂಡಲೇ ಎಚ್ಚೆತ್ತ ಅವರು ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ ಆದರೆ ಇದರ ನಡುವೆ ಶಾಂತಮ್ಮ ಅವರಿಗೆ ಒಂದು ಪ್ರಶ್ನೆ ಮೂಡಿದೆ ಆಸ್ಪತ್ರೆಯಲ್ಲಿ ವೈದ್ಯರು ಯಾವ ಹಾವು ಕಚ್ಚಿರುವುದು ಎಂದು ಕೇಳಿದರೆ ಯಾವ ಹಾವು ಎಂದು ಹೇಳುವುದು ಎಂದು ತಿಳಿದ ಅವರು ಕೂಡಲೇ ತನ್ನ ಜೊತೆಗಿದ್ದ ಸಹೋದ್ಯೋಗಿಗಳ ಸಹಾಯದಿಂದ ಹಾವನ್ನು ಕೊಂದು ಅದನ್ನು ಹಿಡಿದುಕೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ.
ಆಸ್ಪತ್ರೆಗೆ ಬಂದ ಮಹಿಳೆಯನ್ನು ಕಂಡ ವೈದ್ಯರು ಒಮ್ಮೆ ಬೆಚ್ಚಿ ಬಿದ್ದಿದ್ದಾರೆ, ಯಾಕೆಂದರೆ ಮಹಿಳೆಯ ಕೈಯಲ್ಲಿ ಹಾವು ಇರುವುದನ್ನು ಕಂಡು ಗಾಬರಿಗೊಂಡ ಆಸ್ಪತ್ರೆ ಸಿಬಂದಿ ಕೂಡಲೇ ಮಹಿಳೆಯ ಚಿಕಿತ್ಸೆಗೆ ಮುಂದಾಗಿದ್ದಾರೆ. ಮಹಿಳೆಯ ಸಮಯಪ್ರಜ್ಞೆ, ವೈದ್ಯರು ನೀಡಿದ ಸೂಕ್ತ ಚಿಕಿತ್ಸೆಯಿಂದ ಶಾಂತಮ್ಮ ಬದುಕುಳಿದಿದ್ದಾರೆ.
ಮಹಿಳೆಯ ಕೈಯಲ್ಲಿ ಹಾವು ಕಂಡು ಹೆದರಿದ ವೈದ್ಯರು ಬಳಿಕ ಮಹಿಳೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ, ಹಾವು ಕಡಿತಕ್ಕೊಳಗಾದರು ದೃತಿಗೆಡದೆ ಧೈರ್ಯವಾಗಿ ಚಿಕಿತ್ಸೆಗೆ ಒಳಗಾಗಿದ್ದರಿಂದ ಮಹಿಳೆ ಬದುಕುಳಿದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ