ಹೈದರಾಬಾದ್ : ತೆಲಂಗಾಣ ಸರ್ಕಾರ ಗುರುವಾರದಿಂದ ಒಂದು ಕೋಟಿ ಬತುಕಮ್ಮ ಸೀರೆಗಳನ್ನು ವಿತರಿಸಲು ಸಜ್ಜಾಗಿದೆ. ತೆಲಂಗಾಣ ಜವಳಿ ಮತ್ತು ಕೈಮಗ್ಗ ಸಚಿವ ಕೆ.ಟಿ. ರಾಮರಾವ್ ಅವರು ಬುಧವಾರ ಅಧಿಕೃತ ಪ್ರಕಟಣೆಯಲ್ಲಿ ರಾಜ್ಯ ಸರ್ಕಾರವು ನೇಕಾರರನ್ನು ಬೆಂಬಲಿಸುವ ಮತ್ತು ಬತುಕಮ್ಮ(ನವರಾತ್ರಿ ಸಂದರ್ಭ) ಹಬ್ಬದ ಸಮಯದಲ್ಲಿ ಮಹಿಳೆಯರಿಗೆ ಸಣ್ಣ ಉಡುಗೊರೆಯನ್ನು ನೀಡುವ ಉದಾತ್ತ ಸದುದ್ದೇಶದೊಂದಿಗೆ 2017 ರಲ್ಲಿ ಉಪಕ್ರಮವನ್ನು ಪ್ರಾರಂಭಿಸಿತು ಎಂದಿದ್ದಾರೆ.
ಇದನ್ನೂ ಓದಿ: ಗೆಹ್ಲೋಟ್ ಅಥವಾ ತರೂರ್ ಅಧ್ಯಕ್ಷರಾದರೂ ರಾಹುಲ್ ರ ಕೈಗೊಂಬೆ: ಬಿಜೆಪಿ
ಕಳೆದ ವರ್ಷಕ್ಕೆ ಹೋಲಿಸಿದರೆ, ಜವಳಿ ಇಲಾಖೆಯು ಬತುಕಮ್ಮ ಸೀರೆಗಳಲ್ಲಿ ಹೆಚ್ಚಿನ ವಿನ್ಯಾಸ ಮತ್ತು ಬಣ್ಣಗಳು ಮತ್ತು ವೆರೈಟಿಗಳನ್ನು ಹೊರತಂದಿದೆ.ಈ ಯೋಜನೆಗಾಗಿ ರಾಜ್ಯ ಸರ್ಕಾರ ಸುಮಾರು 340 ಕೋಟಿ ರೂ.ವ್ಯಯಿಸಲಿದೆ.ಆಹಾರ ಭದ್ರತಾ ಕಾರ್ಡ್ ಹೊಂದಿರುವ ರಾಜ್ಯದ ಪ್ರತಿಯೊಬ್ಬ ಮಹಿಳೆಗೂ ಬತುಕಮ್ಮ ಸೀರೆ ಸಿಗಲಿದೆ ಎಂದು ಸಚಿವ ಕೆಟಿಆರ್ ಹೇಳಿದರು.
ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ಮಹಿಳಾ ಪ್ರತಿನಿಧಿಗಳಿಂದ ಅಭಿಪ್ರಾಯ ಕೇಳಲಾಯಿತು. ಅತ್ಯುತ್ತಮ ಗುಣಮಟ್ಟ ಮತ್ತು ವಿನ್ಯಾಸದ ಸೀರೆಗಳನ್ನು ತಯಾರಿಸಲು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ವಿನ್ಯಾಸಕರ ಬೆಂಬಲವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
2017 ರಲ್ಲಿ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ (ಈ ವರ್ಷವೂ ಸೇರಿದಂತೆ) ಸುಮಾರು 5.81 ಕೋಟಿ ಸೀರೆಗಳನ್ನು ವಿತರಿಸಲಾಗಿದೆ.
ಬತುಕಮ್ಮ ಎಂಬುದು ಹೂವಿನ ಹಬ್ಬವಾಗಿದ್ದು, ಇದನ್ನು ರಾಜ್ಯದಾದ್ಯಂತ ಆಚರಿಸಲಾಗುತ್ತದೆ, ಇದರಲ್ಲಿ ಹೂವುಗಳನ್ನು ಜೋಡಿಸಲಾಗುತ್ತದೆ ಮತ್ತು ಪದವು ಹೆಣ್ತನವನ್ನು ಪ್ರತಿನಿಧಿಸುವ ‘ಜೀವನದ ಹಬ್ಬ’ ಎಂದರ್ಥ.