Advertisement

Telangana: ಮಹಿಳೆಯರಿಗೆ ಮಾಸಿಕ 4 ಸಾವಿರ ರೂ.- ರಾಹುಲ್‌ ಗಾಂಧಿ

11:46 PM Nov 02, 2023 | Pranav MS |

ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದ ಮಹಿಳೆಯರಿಗೆ ಮಾಸಿಕ 4 ಸಾವಿರ ರೂ. ಲಾಭವಾಗಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

ಹೈದರಾಬಾದ್‌ನ ಅಂಬಾಟಿಪಳ್ಳಿ ಗ್ರಾಮದಲ್ಲಿ ಮಹಿಳಾ ಸಮಾವೇಶ ವೊಂದರಲ್ಲಿ ಮಾತನಾಡಿದ ರಾಹುಲ್‌, “ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಲೂಟಿ ಮಾಡಿದ ಎಲ್ಲ ಹಣವನ್ನೂ ಕಾಂಗ್ರೆಸ್‌ ನಿಮಗೆ ವಾಪಸ್‌ ಕೊಡಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಮಹಿಳೆಯರ ಖಾತೆಗೆ ಪ್ರತೀ ತಿಂಗಳು 2,500 ರೂ. ಜಮೆ, 500ರೂ.ಗೆ ಎಲ್‌ಪಿಜಿ ಸಿಲಿಂಡರ್‌, ಬಸ್‌ಗಳಲ್ಲಿ ಉಚಿತ ಪ್ರಯಾಣದಿಂದ 1,000 ಉಳಿತಾಯವಾಗಲಿದೆ. ಒಟ್ಟಾರೆಯಾಗಿ ರಾಜ್ಯದ ಮಹಿಳೆಯರಿಗೆ ಮಾಸಿಕ 4,000ರೂ. ಲಾಭವಾಗಲಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next