Advertisement

ತೆಲಂಗಾಣ, ರಾಜಸ್ಥಾನ: ಇಂದು ಮತದಾನ

06:00 AM Dec 07, 2018 | |

ಹೈದರಾಬಾದ್‌/ಜೈಪುರ: ಐದು ರಾಜ್ಯಗಳ ವಿಧಾನಸಭೆಯ ಹೈವೋಲ್ಟೆಜ್‌ ಚುನಾವಣ ಕದನ ಅಂತಿಮ ಹಂತ ತಲುಪಿದೆ. ಶುಕ್ರವಾರ ದಕ್ಷಿಣದ ತೆಲಂಗಾಣ ಮತ್ತು ಪಶ್ಚಿಮ ಭಾಗದ ರಾಜಸ್ಥಾನ ವಿಧಾನ ಸಭೆಗೆ ಮತದಾನ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ಬುಧವಾರ ಸಂಜೆಯಷ್ಟೇ ಬಹಿರಂಗ ಪ್ರಚಾರ ಅಂತ್ಯವಾಗಿತ್ತು.

Advertisement

ತೆಲಂಗಾಣದಲ್ಲಿ 2.80 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಮುಖ್ಯಮಂತ್ರಿ ಕೆಸಿಆರ್‌ ಅವರು ಅವಧಿಗೆ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿದ್ದು, ಮತ್ತೂಮ್ಮೆ ಸರಕಾರ ರಚನೆಯ ಕನಸು ಹೊತ್ತಿದ್ದಾರೆ. ಇದೇ ಮೊದಲ ಬಾರಿಗೆ ವಿವಿಪ್ಯಾಟ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಓರ್ವ ತೃತೀಯ ಲಿಂಗಿ ಅಭ್ಯರ್ಥಿ ಸಹಿತ 1,821 ಕಣದಲ್ಲಿದ್ದಾರೆ. 

ರಾಜಸ್ಥಾನದಲ್ಲಿ 199 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮುಖ್ಯ ಮಂತ್ರಿ ವಸುಂಧರಾ ರಾಜೇ, ರಾಜೇಂದ್ರ ರಾಥೋಡ್‌, ಅನಿತಾ ಭಾಂಡೆಲ್‌, ಕಾಂಗ್ರೆಸ್‌ ನಾಯಕ ರಾದ ಅಶೋಕ್‌ ಗೆಹೊಟ್‌, ಸಚಿನ್‌ ಪೈಲಟ್‌, ರಾಮೇಶ್ವರ್‌ ಲಾಲ್‌ ಸಹಿತ 2,274 ಅಭ್ಯರ್ಥಿ ಗಳು ಕಣದಲ್ಲಿದ್ದಾರೆ. ಡಿ. 11ರಂದು ಫ‌ಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next