Advertisement

ತೆಲಂಗಾಣದಲ್ಲಿ”ತಾಳೆ ಕ್ರಾಂತಿ’ಆರಂಭ; ಸರ್ಕಾರದ ಉತ್ತೇಜನ, ಅಧಿಕ ಆದಾಯವೇ ಕಾರಣ

06:47 PM Aug 03, 2022 | Team Udayavani |

ಹೈದರಾಬಾದ್‌: ಪಕ್ಕದ ತೆಲಂಗಾಣ ರಾಜ್ಯದಲ್ಲೀಗ ತಾಳೆ ಕ್ರಾಂತಿ ಆರಂಭವಾಗಿದೆ. ಅಲ್ಲಿನ ರೈತರು, ಹೆಚ್ಚೆಚ್ಚು ತಾಳೆ ಸಸಿಗಳನ್ನು ನೆಡಲು ಆರಂಭಿಸಿದ್ದಾರೆ. ಸಾಂಪ್ರದಾಯಿಕವಾಗಿ ತಾವು ಬಿತ್ತನೆ ಮಾಡಿಕೊಂಡು ಬಂದಿದ್ದ ಫ‌ಸಲುಗಳ ಆಲೋಚನೆಯನ್ನು ಬದಿಗೊತ್ತಿ ತಮ್ಮ ಜಮೀನಿನ ಬಹುಪಾಲು ಭಾಗವನ್ನು ತಾಳೆ ಸಸಿ ನೆಡಲು ಮೀಸಲಿಡುತ್ತಿದ್ದಾರೆ.

Advertisement

ಇದ್ದಕ್ಕಿದ್ದಂತೆ ಆಗುತ್ತಿರುವ ಈ ಬದಲಾವಣೆಗೆ ಅಲ್ಲಿನ ಸರ್ಕಾರ, ತಾಳೆ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಿರುವುದೇ ಕಾರಣ. ಮುಂಬರುವ ದಶಕಗಳಲ್ಲಿ ತೆಲಂಗಾಣವನ್ನು ತಾಳೆ ಎಣ್ಣೆಯ ತವರನ್ನಾಗಿಸಲು ನಿರ್ಧರಿಸಿರುವ ಅಲ್ಲಿನ ರಾಜ್ಯ ಸರ್ಕಾರ, ಹೆಚ್ಚಿನ ಪ್ರೋತ್ಸಾಹ ನೀಡಲಾರಂಭಿಸಿದೆ. ಇದಕ್ಕಾಗಿ ಸಬ್ಸಿಡಿ ಯೋಜನೆ ಜಾರಿಗೊಳಿಸಲಾಗಿದೆ. ಇತರ ಬೆಳೆಗಳಿಗೆ ಹೋಲಿಸಿದರೆ ಬಂಪರ್‌ ಲಾಭ ತಂದುಕೊಡುವಂಥ ತಾಳೆ ಎಣ್ಣೆಯ ಕಡೆಗೆ ರೈತರೂ ಒಲವು ತೋರುತ್ತಿದ್ದಾರೆ.

ಲಾಭ ಎಷ್ಟು?
ಒಂದು ಎಕರೆಗೆ ತಾಳೆ ಹಾಕಿಸಿದರೆ ಅದು ಒಂದು ವರ್ಷದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚು ಆದಾಯ ತಂದುಕೊಡುತ್ತದೆ. ಅದೇ ಒಂದು ಎಕರೆಯಲ್ಲಿ ಭತ್ತ ಬೆಳೆದರೆ 40 ಸಾವಿರ ರೂ. ಕೂಡ ಬರುವುದು ಅನುಮಾನ ಎಂಬುದು ಅಲ್ಲಿನ ರೈತರ ಅಭಿಮತ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next