Advertisement
ಇದ್ದಕ್ಕಿದ್ದಂತೆ ಆಗುತ್ತಿರುವ ಈ ಬದಲಾವಣೆಗೆ ಅಲ್ಲಿನ ಸರ್ಕಾರ, ತಾಳೆ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಿರುವುದೇ ಕಾರಣ. ಮುಂಬರುವ ದಶಕಗಳಲ್ಲಿ ತೆಲಂಗಾಣವನ್ನು ತಾಳೆ ಎಣ್ಣೆಯ ತವರನ್ನಾಗಿಸಲು ನಿರ್ಧರಿಸಿರುವ ಅಲ್ಲಿನ ರಾಜ್ಯ ಸರ್ಕಾರ, ಹೆಚ್ಚಿನ ಪ್ರೋತ್ಸಾಹ ನೀಡಲಾರಂಭಿಸಿದೆ. ಇದಕ್ಕಾಗಿ ಸಬ್ಸಿಡಿ ಯೋಜನೆ ಜಾರಿಗೊಳಿಸಲಾಗಿದೆ. ಇತರ ಬೆಳೆಗಳಿಗೆ ಹೋಲಿಸಿದರೆ ಬಂಪರ್ ಲಾಭ ತಂದುಕೊಡುವಂಥ ತಾಳೆ ಎಣ್ಣೆಯ ಕಡೆಗೆ ರೈತರೂ ಒಲವು ತೋರುತ್ತಿದ್ದಾರೆ.
ಒಂದು ಎಕರೆಗೆ ತಾಳೆ ಹಾಕಿಸಿದರೆ ಅದು ಒಂದು ವರ್ಷದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚು ಆದಾಯ ತಂದುಕೊಡುತ್ತದೆ. ಅದೇ ಒಂದು ಎಕರೆಯಲ್ಲಿ ಭತ್ತ ಬೆಳೆದರೆ 40 ಸಾವಿರ ರೂ. ಕೂಡ ಬರುವುದು ಅನುಮಾನ ಎಂಬುದು ಅಲ್ಲಿನ ರೈತರ ಅಭಿಮತ.