Advertisement

ತೆಲಂಗಾಣದಲ್ಲಿ ಭಾರಿ ಪ್ರವಾಹ: ಜೀವ ಉಳಿಸಿಕೊಳ್ಳಲು ಗಂಟೆಗಳ ಕಾಲ ಮರವೇರಿ ಕುಳಿತ ವ್ಯಕ್ತಿ

10:18 AM Jul 28, 2023 | Team Udayavani |

ತೆಲಂಗಾಣ: ತೆಲಂಗಾಣದ ಖಮ್ಮಂ ಜಿಲ್ಲೆಯಿಂದ ಭಾರೀ ಪ್ರವಾಹ ಮುಂದುವರೆದಿದ್ದು ಈ ನಡುವೆ ವ್ಯಕ್ತಿಯೊಬ್ಬ ಮರದ ಮೇಲೆ ಗಂಟೆಗಟ್ಟಲೆ ಕುಳಿತು ಜೀವ ಉಳಿಸಿಕೊಂಡಿರುವ ವಿಡಿಯೋವೊಂದು ಹೊರಬಿದ್ದಿದೆ.

Advertisement

ಘಟನೆ ಜಲಗಾಮ ನಗರದಲ್ಲಿ ನಡೆದಿದ್ದು ಗ್ರಾಮದ ಸುತ್ತಲೂ ಪ್ರವಾಹದ ನೀರು ತುಂಬಿ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ, ಈ ವೇಳೆ ಕೆಲ ಮನೆಯವರು ತಮ್ಮ ತಮ್ಮ ಜೀವ ಉಳಿಸಿಕೊಳ್ಳಲು ಮನೆಯ ಟಾರಸಿ ಮೇಲೆ ಹತ್ತಿ ನಿಂತಿದ್ದಾರೆ. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮರವೇರಿದ್ದನೆ ಆದರೆ ಪ್ರವಾಹದ ನೀರಿನ ಪ್ರಮಾಣ ಹೆಚ್ಚಾಗಿತ್ತು ಈ ವೇಳೆ ಮರವೇರಿದ ವ್ಯಕ್ತಿಯನ್ನು ಸುಮಾರು ಎರಡು ಮೂರು ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಲಾಯಿತು.

ತೆಲಂಗಾಣದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ವೆಂಕಟಾಪುರ ಮಂಡಲದ ಲಕ್ಷ್ಮೀದೇವಿಪೇಟೆ ಗ್ರಾಮದಲ್ಲಿ 64.9 ಸೆಂ.ಮೀ ಮಳೆಯಾಗಿದ್ದು, ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಅಲ್ಲದೆ ಕೆಲ ಗ್ರಾಮಗಳು ಪ್ರವಾಹದ ನೀರಿನಿಂದ ಮುಳುಗಡೆಯಾಗಿದೆ. ಹೆಚ್ಚಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದು ಇನ್ನೂ ಕೆಲವರು ಮನೆಯ ಟಾರಸಿ ಮೇಲೆ ನಿಂತು ರಕ್ಷಣೆ ಪಡೆದಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next