ಹೈದರಾಬಾದ್ : ತೆಲಂಗಾಣ ಸರ್ಕಾರ ಬಾಥುಕಮ್ಮಾ ಹಬ್ಬದ ವೇಳೆ ಬಡ ಮಹಿಳೆಯರಿಗಾಗಿ ಉಚಿತವಾಗಿ ನೀಡಿದ ಸೀರೆ ವಿತರಣೆ ವೇಳೆ ಮಹಿಳೆಯರ ಮಧ್ಯೆ ಭಾರೀ ಜಗಳ ನಡೆದಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋ ನೋಡಿ
ಸೈದಾಬಾದ್‌ನಲ್ಲಿ ಸೀರೆ ವಿತರಣೆ ಮಹಿಳೆಯರು ಸೀರೆಗಳ ಆಯ್ಕೆ ವಿಚಾರದಲ್ಲಿ ಭಾರಿ ಜಗಳ ಮಾಡಿಕೊಂಡಿದ್ದು, ಕೆಲವರು ಚಪ್ಪಲಿಗಳಿಂದ ಬಡಿದಾಡಿಕೊಂಡರೆ ,ಇನ್ನು ಕೆಲವರು ಮಹಿಳೆಯೊಬ್ಬಳ ಕುಪ್ಪಸವನ್ನೆ ಬಿಚ್ಚಿದ ಘಟನೆ ನಡೆದಿದೆ. ಭಾರಿ ಜಗಳ ಬಿಡಿಸಲು ಪೊಲೀಸರೂ ಹರಸಾಹಸ ಪಡಬೇಕಾಯಿತು.
ಸೀರೆಗಳು ಕಳಪೆ ಗುಣಮಟ್ಟದ್ದು ಎಂದು ಫಲಾನುಭವಿ ಮಹಿಳೆಯರು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸೀರೆ ಪಡೆದ ಮಹಿಳೆ ‘ಈ ಸೀರೆ ಮುಖ್ಯಮಂತ್ರಿಗಳ ಮಗಳು ಉಟ್ಟುಕೊಂಡು ಬಾಥುಕಮ್ಮಾ ಹಬ್ಬಕ್ಕೆ ನೃತ್ಯ ಮಾಡುತ್ತಾರಾ’ ಎಂದು ಪ್ರಶ್ನಿಸಿದರು. ಇನ್ನೊಬ್ಬಾಕೆ ‘ಮುಖ್ಯಮಂತ್ರಿ ಮಗಳಿಗೆ ಸೀರೆ ತೆಗೆದುಕೊಳ್ಳಲು 50 ರೂಪಾಯಿ ಕೊಡಲಿ’ ಎಂದರು.
ಇನ್ನುಕೆಲವರು ಸೀರೆಗಳನ್ನು ಬಹಿರಂಗವಾಗಿ ಸುಟ್ಟು ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಟಿ ಸಚಿವ ರಾಮ್ ರಾವ್ ಅವರು ಇದು ಕಾಂಗ್ರೆಸ್ ಮಾಡಿರುವ ಹುನ್ನಾರ ಎಂದರು.
‘ಜಾತಿ ಧರ್ಮ ಭೇದ ವಿಲ್ಲದೆ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪೊಲಿಯಸ್ಟರ್ ಸೀರೆಗಳನ್ನು ಸೂರತ್‌ನಿಂದ ತರಿಸಲಾಗಿತ್ತು. ಮತ್ತು ಸಿರಿಸಿಲ್ಲಾದಲ್ಲಿ ಉತ್ಪಾದಿಸಲಾದ ಸೀರೆಗಳನ್ನು ನೀಡಲಾಗಿತ್ತು. ಸೂರತ್ ಸೀರೆಗೆ 200 ರೂಪಾಯಿ ದರವಾದರೆ, ಸಿರ್‌ಸಿಲ್ಲಾ ಸೀರೆಗೆ 224 ರೂಪಾಯಿ ದರ , 50 ರೂಪಾಯಿ ಸೀರೆ ನಾವು ವಿತರಿಸಿಲ್ಲ’ ಎಂದು ರಾಜ್ಯದ ಟೆಕ್ಸ್‌ಟೈಲ್ ಕಮಿಷನರ್ ಶೈಲಜಾ ರಾಮ ಐಯ್ಯರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.