Advertisement

ಕೊಳವೆ ಪೈಪ್‌ ಗಳಿಂದ ಮನೆಗಳನ್ನು ನಿರ್ಮಿಸುತ್ತಾಳೆ ತೆಲಂಗಾಣದ ಹುಡುಗಿ!

11:57 AM Aug 29, 2021 | Team Udayavani |
ಮನೆ ನಿರ್ಮಿಸುವ ಕಷ್ಟವನ್ನು ಅರಿತು ಅಮ್ಮನಿಂದ 5 ಲಕ್ಷ ರೂ ಸಾಲ ಪಡೆದು ಕೊಳವೆಗಳಿಂದ ಮನೆ ನಿರ್ಮಿಸಿದ ಮಾನಸ. ಕಡಿಮೆ ವೆಚ್ಚದ ವಸತಿ ನಿಲಯಕ್ಕೆ ಉತ್ತಮ ಪರಿಹಾರ
Now pay only for what you want!
This is Premium Content
Click to unlock
Pay with

2019ರ ಅಧ್ಯಯನದ ಪ್ರಕಾರ ಭಾರತ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ. ಆದರೆ ಅದೇ ಅಧ್ಯಯನ ಹೇಳುವ ಪ್ರಕಾರ 63 ದಶಲಕ್ಷಕ್ಕೂ ಹೆಚ್ಚು ಜನರು ವಸತಿ ಸೌಲಭ್ಯಗಳನ್ನು ಹೊಂದಿಲ್ಲ.

Advertisement

ಸಾಮಾನ್ಯವಾಗಿ ಹಳ್ಳಿಗಳ ಕಡೆಯಲ್ಲಿ ಬಡವರು, ಮಧ್ಯಮ ವರ್ಗದವರು ಒಣಹುಲ್ಲಿನ ಗುಡಿಸಲು, ತಾತ್ಕಾಲಿಕ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ ಕೆಲವರು ತಮ್ಮ ಮನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವ ವ್ಯವಸ್ಥೆ ಇದ್ದರೆ ಚೆನ್ನಾಗಿತ್ತು ಎಂದು ಅಂದು ಕೊಳ್ಳುವವರು ಇದ್ದಾರೆ. ನಮ್ಮಲ್ಲಿ ಮಧ್ಯಮರ್ಗದ ಬಹುಪಾಲು ಜನರಲ್ಲಿ ಕಾರ್ಮಿಕರು ಹೆಚ್ಚಾಗಿರುವುದರಿಂದ ಒಂದು ಕಡೆಯಿಂದ ಮತ್ತೂಂದೆಡೆ ಸಾಗಬೇಕಾಗುತ್ತದೆ ಹಾಗಾಗಿ ಇಂತಹ ವ್ಯವಸ್ಥೆ ಬಯಸುವುದು ಸಹಜವೇ.

ಇಂತಹ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿಯೇ ತೆಲಂಗಾಣದ ಬೊಮ್ಮಕಲ್‌ ಗ್ರಾಮದ ನಿವಾಸಿ ಪೆರಲಾ ಮಾನಸಾ ರೆಡ್ಡಿ (23 ವ) ಅವರು ಹಾಂಗ್‌ ಕಾಂಗ್‌ನ ಪೊಡ್‌ ಹೌಸ್‌ ಅನ್ನು ಭಾರತದಲ್ಲಿ ಪರಿಚಯಿಸಿದ್ದಾರೆ. “ಪೊಡ್‌ ಟ್ಯೂಬ್‌ ಮನೆಗಳು’ ಕಡಿಮೆ ವೆಚ್ಚದ ವಸತಿ ನಿಲಯಕ್ಕೆ ಉತ್ತಮ ಪರಿಹಾರವಾಗಿದ್ದು ಇದನ್ನು ಮೊದಲು ಹಾಂಗ್‌ ಕಾಂಗ್‌ನ ಜೇಮ್ಸ್‌ ಲಾ ಸೈಬರ್ಟೆಕ್ಚರ್‌ ವಿನ್ಯಾಸಗೊಳಿಸಿದ್ದರು.

15 ರಿಂದ 20 ದಿನದೊಳಗೆ ನಿರ್ಮಾಣ: ಈ ಕೊಳವೆ ಪೈಪ್‌ ಅನ್ನು ತೆಲಂಗಾಣದ ಉತ್ಪಾದಕರಿಂದ ಇವರ ಅಗತ್ಯಕ್ಕೆ ತಕ್ಕಂತೆ ಹೇಳಿ ಮಾಡಿಸಲಾಗಿದೆ. ಇದು ಅವರವರ ಅನೂಕೂಲಕ್ಕೆ ತಕ್ಕಂತೆ ವೃತ್ತಾಕಾರದಲ್ಲಿ, ಬಳಕೆದಾರರ ಆವಶ್ಯಕತೆಗಳಿಗೆ ಬೇಕಾದ ರೀತಿಯಲ್ಲಿ ನಿರ್ಮಾಣ ಮಾಡಿಕೊಡುತ್ತಾರೆ. ಪಂಚಾಬ್‌ನ ಲವ್ಲಿ ಪ್ರೋಫೆಷನಲ್‌ ಯೂನಿವರ್ಸಿಟಿಯ ಸಿವಿಲ್‌ ಎಂಜಿನಿಯರಿಂಗ್‌ ಪದವಿದರರಾದ ಮಾನಸಾ ಹೇಳುವ ಪ್ರಕಾರ ಈ ರಚನೆ ಗ್ರಾಹಕರಿಗೆ 15ರಿಂದ 20ದಿನದೊಳಗೆ ನಿರ್ಮಾಣವಾಗುತ್ತದೆ. ಅದಲ್ಲದೆ ಇವರು ಸಾಮ್ನವಿ ಕನ್ಸ್ಟ್ರಕ್ಷನ್‌ ಎಂಬ ಹೆಸರಿನ ಸ್ಟಾರ್ಟ್‌ ಆ್ಯಪ್‌ ಅನ್ನು ಸಹ ಪ್ರಾರಂಭಿಸಿದ್ದು ದೇಶಾದ್ಯಂತ ಕಡಿಮೆ ವೆಚ್ಚದ ಮನೆಗಳನ್ನು ನಿರ್ಮಿಸುವ ಭರವಸೆ ಹೊತ್ತಿದ್ದಾರೆ.

ಬೊಮ್ಮಕಲ್‌ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಮಾನಸಾ ತೆಲಂಗಾಣ ಸಮಾಜ ಕಲ್ಯಾಣ ವಸತಿ ಶಿಕ್ಷಣ ಸೊಸೈಟಿಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದಳು. ತಾನು ಬೆಳೆದದ್ದು ಮಧ್ಯಮ ವರ್ಗವಾದ್ದರಿಂದ ತಾನು ಬೆಳೆಯುತ್ತಾ ಸುತ್ತ ಮುತ್ತಲಿನ ಜನ ವಾಸಿಸುವ ರೀತಿಯನ್ನು ಕಂಡಿದ್ದಳು. ಮಳೆಗಾಲದಲ್ಲಿ ಪ್ರವಾಹದಿಂದ, ಬೇಸಗೆಯ ಬಿಸಿ ಇವೆಲ್ಲ ಮನಗಂಡಿದ್ದ ಆಕೆ ಅವರಿಗಾಗಿ ಇಂತಹ ಮನೆ ನಿರ್ಮಿಸಲು ಪಣ ತೊಟ್ಟಳು.

Advertisement

ಜಪಾನ್‌ ಮತ್ತು ಹಾಂಗ್‌ಕಾಂಗ್‌ನಲ್ಲಿ ಕಂಡುಬರುವ ಕಡಿಮೆ ವೆಚ್ಚದ ಮನೆಗಳ ಬಗ್ಗೆ ತಿಂಗಳುಗಟ್ಟಲೆ ಅಧ್ಯಯನ ನಡೆಸಿ ಅನಂತರ ಪೊಡ್‌ ಶೈಲಿಯ ಮನೆ ಮಾಡಲು ಪ್ರೇರಿಪಿತಳಾಗಿ ಕಡಿಮೆ ಜಾಗದಲ್ಲಿ ಸಣ್ಣ ಮನೆ ನಿರ್ಮಿಸುವ ಬಗ್ಗೆ ತಿಳಿದುಕೊಳ್ಳಲು ಆನ್‌ಲೈನ್‌ನಲ್ಲಿ ಹಲವಾರು ಸಂಶೋಧನಾ ಪ್ರಬಂಧಗಳನ್ನು ಓದಿದಳು.

ಇದರಲ್ಲಿ ಬಾತ್‌ರೂಮ್‌ನಿಂದ ಹಿಡಿದು ಅಡುಗೆ ಕೋಣೆ, ಒಂದು ರೂಮ್‌, ಸಿಂಕ್‌ ಹಾಗೆ ಮಲಗಲು ಒಂದು ಕೋಣೆ ಇದೆ. ಇದರ ಉದ್ದ 16 ಅಡಿ, 7 ಅಡಿ ಎತ್ತರ ಹೊಂದಿದೆ. ಇದಕ್ಕೆ ಇವರು ಕಚ್ಚಾವಸ್ತುಗಳನ್ನು ತನ್ನ ಸಂಬಧಿಕರಿಂದ ತೆಗೆದುಕೊಂಡಿದ್ದು ಅಮ್ಮನಿಂದ 5 ಲಕ್ಷ ಸಾಲದ ರೂಪದಲ್ಲಿ ಪಡೆದುಕೊಂಡಿದ್ದಾರೆ.

ಈಗಾಗಲೇ ನೂರಕ್ಕೂ ಹೆಚ್ಚು ಆರ್ಡ್‌ರ್‌ಗಳು ಬಂದಿದ್ದು ಇನ್ನೂ ಹೆಚ್ಚು ಆರ್ಡ್‌ರ್‌ ತೆಗೆದುಕೊಳ್ಳಬೇಕೆನ್ನುವುದು ಇವರ ಗುರಿಯಾಗಿದೆ. ಕಾರ್ಮಿಕರಿಗಾಗಿ ತಯಾರಾದ ಈ ಮನೆ ವಾಸ ಯೋಗ್ಯವಾಗಿದೆಯೇ ಎಂದು ಪರೀಕ್ಷಿಸಲು ನಿರ್ಮಾಣ ತಂಡದ ಕಾರ್ಮಿಕನಿಗೆ 7 ದಿನಗಳ ಕಾಲ ಅಲ್ಲಿಯೇ ವಾಸಿಸಲು ತಿಳಿಸಿದ್ದು, ಅವರು ಆ ವಾಸ್ತವ್ಯವನ್ನು ನೋಡಿ ಖುಷಿ ಪಟ್ಟಿದ್ದು ಇದರಿಂದ ಈ ಮನೆಗಳನ್ನು ಕಾರ್ಮಿಕರಿಗೆ ಮಾಡಿ ಕೊಡಲು ಅವರು ಸಿದ್ಧರಾಗಿದ್ದಾರೆ. ಅಲ್ಲದೆ ಇವರಿಗೆ ಬೇರೆ ಬೇರೆ ಕಡೆಗಳಿಂದ ಆರ್ಡರ್‌ ಬರುತ್ತಿದ್ದು ಕೋವಿಡ್‌ ಕಾರಣದಿಂದಾಗಿ ಇದು ಮುಂದೆ ಹೋಗಿದ್ದು ಅನಂತರ ದಿನಗಳಲ್ಲಿ ತಮ್ಮ ಕೆಲಸವನ್ನು ಮುಂದುವರಿಸಲಿದ್ದಾರೆ.

ಪ್ರೀತಿ ಭಟ್

Advertisement

Udayavani is now on Telegram. Click here to join our channel and stay updated with the latest news.