Advertisement

ತೆಲಂಗಾಣ: ರಣ ಭೀಕರ ಅಪಘಾತ;5 ಸಾವು, 6 ಮಂದಿಗೆ ಗಾಯ

03:24 PM Aug 23, 2017 | |

ಹೈದರಾಬಾದ್‌ : ತೆಲಂಗಾಣದ ವಾಂಖೀಡಿ ಮಂಡಲ್‌ನ ಬೆಂಡಾರಾ ಹೊರವಲಯದಲ್ಲಿ ಬುಧವಾರ ಬೆಳಗ್ಗೆ  ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿ, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ರಸ್ತೆ ತಿರುವೊಂದರಲ್ಲಿ ಆಟೋ ರಿಕ್ಷಾಕ್ಕೆ ಗುರುತು ಪತ್ತೆಯಾಗದ ಅಪರಿಚಿತ ಘನವಾಹನ ಡಿಕ್ಕಿಯಾಗಿದ್ದು ಐವರು ದಾರಣವಾಗಿ ಸಾವನ್ನಪ್ಪಿದ್ದಾರೆ. ಡಿಕ್ಕಿಯಾದ ರಭಸಕ್ಕೆ 100 ಮೀಟರ್‌ ದೂರದಷ್ಟು ರಿಕ್ಷಾವನ್ನು ಎಳೆದೊಯ್ದಿದೆ. ರಿಕ್ಷಾ ಸಂಪೂರ್ಣ ಛಿದ್ರ ಛಿದ್ರಗೊಂಡು ಒಳಗಿದ್ದವರು ಒಂದೊಂದು ದಿಕ್ಕಿಗೆ ಎಸೆಯಲ್‌ಪಟ್ಟಿದ್ದರು. 

ಮೃತ ದುರ್‌ದೈವಿಗಳು ಸಂತೆಗೆ ತೆರಳಿ ವಾಪಾಸಾಗುತ್ತಿದ್ದರು  ಎಂದು ವರದಿಯಾಗಿದೆ. ಮೃತರು ಮೊರ್ಲೆ ಸಂತೋಷ್‌(18),ತಿರುಪತಿ (22),ವೇದ್‌ಮಾ ಅಂಬಾರಾವ್‌ (25) ರಮೇಶ್‌ (14) ಎಂದು ತಿಳಿದು ಬಂದಿದ್ದು, ಇನ್ನೋರ್ವನ ಗುರುತು ಪತ್ತೆಯಾಗಬೇಕಷ್ಟೇ.ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಮಂಚೇರಿಯಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next