Advertisement

ಅಸೆಂಬ್ಲಿ ವಿಸರ್ಜನೆ ಸದ್ಯಕ್ಕಿಲ್ಲ ;ತೆಲಂಗಾಣ ಸಿಎಂ ಸ್ಪಷ್ಟನೆ

09:26 AM Sep 03, 2018 | |

ಹೈದರಾಬಾದ್‌: ತೆಲಂಗಾಣ ಮುಖ್ಯ ಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ವಿಧಾನಸಭೆ ವಿಸರ್ಜಿಸಿ ಅವಧಿಪೂರ್ವ ಚುನಾವಣೆಗೆ ಹೋಗಲಿದ್ದಾರೆ ಎಂಬ ಊಹಾಪೋಹಗಳಿಗೆ ಸ್ವತಃ ಕೆಸಿಆರ್‌ ಅವರೇ ರವಿವಾರ ತೆರೆಎಳೆದಿದ್ದಾರೆ. ಸದ್ಯಕ್ಕೆ ವಿಧಾನಸಭೆ ವಿಸರ್ಜಿಸಲ್ಲ, ಮುಂದಿನ ದಿನಗಳಲ್ಲಿ ಆ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Advertisement

ತೆಲಂಗಾಣ ರಾಜ್ಯ ರಚನೆಯಾಗಿ 4 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರವಿವಾರ ಹೈದರಾಬಾದ್‌ನ ಹೊರ ವಲಯದ  ಕೊನಗಾರ ಕಾಲನ್‌ನಲ್ಲಿ ನಡೆದ ಬೃಹತ್‌ ರ್ಯಾಲಿಯಲ್ಲಿ ಮಾತನಾಡಿದ ಸಿಎಂ ಕೆಸಿಆರ್‌, “ನಾನು ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗುತ್ತೇನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಟಿಆರ್‌ಎಸ್‌ನ ಎಲ್ಲ ಸದಸ್ಯರೂ ನನಗೆ ತೆಲಂಗಾಣದ ಭವಿಷ್ಯವನ್ನು ನಿರ್ಧರಿ ಸಲು ಅವಕಾಶ ನೀಡಿದ್ದಾರೆ. ಹೀಗಾಗಿ, ತೆಲಂಗಾಣ, ಟಿಆರ್‌ಎಸ್‌ ಮತ್ತು ಜನರ ಹಿತಾಸಕ್ತಿಯನ್ನು ಪರಿಗಣಿಸಿ ಏನೇ ನಿರ್ಧಾರ ಕೈಗೊಳ್ಳುವುದಿದ್ದರೂ ಆ ಬಗ್ಗೆ ಮೊದಲೇ ತಿಳಿಸುತ್ತೇನೆ’ ಎಂದಿದ್ದಾರೆ. ಈ ಮೂಲಕ ಸದ್ಯಕ್ಕೆ ಅವಧಿಪೂರ್ವ ಚುನಾವಣೆಗೆ ಹೋಗುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದರೂ, ಮುಂದೆ ಅಂಥ ನಿರ್ಧಾರ ಕೈಗೊಳ್ಳಲೂಬಹುದು ಎಂಬ ಸುಳಿವು ನೀಡಿದ್ದಾರೆ.
ರ್ಯಾಲಿಗೂ ಮುನ್ನ ತೆಲಂಗಾಣ ಸಂಪುಟ ಸಭೆ ನಡೆದಿದ್ದು, ಅಲ್ಲಿ ಕೆಸಿಆರ್‌ ಅವರು ವಿಧಾನಸಭೆ ವಿಸರ್ಜನೆ ಕುರಿತು ಘೋಷಿಸ ಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಅಲ್ಲೂ ಅವರು ಯಾವುದೇ ಸುಳಿವು ನೀಡಿರಲಿಲ್ಲ. ಇದೇ ವೇಳೆ, ಸೆ.6ಕ್ಕೆ ಮತ್ತೂಂದು ಸಂಪುಟ ಸಭೆ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನುಡಿದಂತೆ ನಡೆದಿದ್ದೇನೆ: ಇದೇ ವೇಳೆ, ತಮ್ಮ ಸರಕಾರದ ಸಾಧನೆಗಳನ್ನು ಜನರ ಮುಂದಿಟ್ಟ ಕೆಸಿಆರ್‌, ನಾವು ನುಡಿದಂತೆ ನಡೆದಿದ್ದೇವೆ ಎಂದಿದ್ದಾರೆ. ವಿವಿಧ ಸಮು ದಾಯಗಳಿಗೆ ಸ್ವಾಭಿಮಾನ ಕಟ್ಟಡ ನಿರ್ಮಿ ಸಲು 70 ಎಕರೆ ಜಾಗ ಮತ್ತು 70 ಕೋಟಿ ರೂ.ಗಳನ್ನು ನೀಡಿದ್ದೇವೆ. ಮುಂದಿನ ಚುನಾವಣೆಗೆ ಮುನ್ನ ಭಗೀರಥ ಯೋಜನೆ ಯಡಿ ಎಲ್ಲ ಕುಟುಂಬಗಳಿಗೂ ಕುಡಿಯುವ ನೀರು ಪೂರೈಕೆ ಮಾಡದೇ ಇದ್ದರೆ, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸು ವುದಿಲ್ಲ ಎಂದಿದ್ದೆ. ದೇಶದ ಯಾವುದೇ ಸಿಎಂಗೂ ಇಂಥ ಆಶ್ವಾಸನೆ ನೀಡುವ ಧೈರ್ಯವಿಲ್ಲ. ಆದರೆ, ನಾನು ಆ ಆಶ್ವಾಸನೆ ಯನ್ನು ಪೂರೈಸಿದ್ದೇನೆ ಎಂದಿದ್ದಾರೆ.

ತಮಿಳುನಾಡಿನಂತಾಗಬೇಕು: ಇದೇ ವೇಳೆ, ತೆಲಂಗಾಣವೂ ತಮಿಳುನಾಡಿ ನಂತಾಗಬೇಕು. ಅಂದರೆ, ಉತ್ತರ ಭಾರತದ ಪಕ್ಷಗಳನ್ನು ಸೋಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಹಾಗೂ ಪ್ರಾದೇಶಿಕ ಪಕ್ಷಕ್ಕೆ ಮನ್ನಣೆ ನೀಡಬೇಕು ಎಂದು ಚಂದ್ರಶೇಖರ್‌ ರಾವ್‌ ಕರೆ ನೀಡಿ ದ್ದಾರೆ. ಇದಕ್ಕೂ ಮೊದಲು ನಡೆದ ಸಂಪುಟ ಸಭೆಯಲ್ಲಿ ಆಶಾ ಕಾರ್ಯಕರ್ತರ ವೇತನ ಹೆಚ್ಚಳ, ಅರ್ಚಕರ ನಿವೃತ್ತಿ ವಯಸ್ಸಿನ ಮಿತಿ ಏರಿಕೆ, ರೈತರಿಗೆ ಹಣಕಾಸು ನೆರವು ಸೇರಿ ದಂತೆ ಭರಪೂರ ಕೊಡುಗೆಗಳನ್ನು ಘೋಷಿಸಿದ್ದರು.

2 ಸಾವಿರ ಎಕರೆ ಪ್ರದೇಶದಲ್ಲಿ ರ್ಯಾಲಿ
ಹೈದರಾಬಾದ್‌ನಿಂದ 25 ಕಿ.ಮೀ. ದೂರದ ರಂಗರೆಡ್ಡಿ ಜಿಲ್ಲೆಯಲ್ಲಿ ನಡೆದ ಟಿಆರ್‌ಎಸ್‌ನ ಬೃಹತ್‌ ರ್ಯಾಲಿಗೆ ಜನ ಸಾಗರವೇ ಹರಿದುಬಂದಿತ್ತು.ಸುಮಾರು 2 ಸಾವಿರ ಎಕರೆ ಪ್ರದೇಶ ದಲ್ಲಿ ಈ ರ್ಯಾಲಿ ನಡೆದಿದ್ದು, ಇದನ್ನು “ಎಲ್ಲ ಸಭೆಗಳ ಮಹಾತಾಯಿ’ ಎಂದೇ ಬಣ್ಣಿಸಲಾಗಿತ್ತು. ತೆಲಂಗಾಣ ರಾಜ್ಯ ರಚನೆಯಾಗಿ 4 ವರ್ಷ ಪೂರ್ಣ ಗೊಂಡ ಕಾರಣ ಈ ಪ್ರಗತಿ ನಿವೇದನಾ ಸಭಾವನ್ನು ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next