Advertisement
ವೈದ್ಯೆಯ ಮೇಲೆ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಶುಕ್ರವಾರ ತಡರಾತ್ರಿ ಮೊಹಮ್ಮದ್ ಅರೀಫ್, ಜೋಲ್ಲು ಶಿವ, ಜೋಲ್ಲು ನವೀನ್ ಮತ್ತು ಚಿಂಟಾಕುಂಟಾ ಚೆನ್ನಕೇಶವಲು ಎಂಬಾತ ಸೇರಿ ನಾಲ್ವರನ್ನು ಬಂಧಿಸಿದ್ದರು.
Related Articles
Advertisement
ಟೋಲ್ ಪ್ಲಾಝಾ ಸಮೀಪ ನಿಲ್ಲಿಸಿದ್ದ ಸ್ಕೂಟಿಯನ್ನು ತೆಗೆದುಕೊಂಡು ಹೋಗಲು 9ಗಂಟೆ ರಾತ್ರಿಗೆ ವೈದ್ಯೆ ಸ್ಥಳಕ್ಕೆ ಆಗಮಿಸಿದ್ದಳು. ಈ ಸಂದರ್ಭದಲ್ಲಿ ಆರೀಫ್, ನಿನ್ನ ಸ್ಕೂಟಿ ಪಂಕ್ಚರ್ ಆಗಿದೆ ಎಂದು ಹೇಳಿದ್ದ. ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದ. ಸ್ಕೂಟಿ ಟಯರ್ ಗೆ ಪಂಕ್ಚರ್ ಹಾಕಿಸಿಕೊಂಡು ಬರುವಂತೆ ಶಿವನ ವಾಹನದಲ್ಲಿ ಕಳುಹಿಸಿಕೊಟ್ಟಿದ್ದ ಎಂದು ಹೇಳಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಮತ್ತೊಂದು ವಾಹನಕ್ಕಾಗಿ ಸಂತ್ರಸ್ತೆ ಕಾಯುತ್ತಿದ್ದ ವೇಳೆ ಆರೀಫ್ ಮತ್ತು ಇತರ ಮೂವರು ಆಕೆಯನ್ನು ಬಲವಂತವಾಗಿ ಹಿಡಿದು ಮುಖ್ಯರಸ್ತೆಯಿಂದ ದೂರ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು ಎಂದು ಹೇಳಿದರು.
ಸಂತ್ರಸ್ತೆ 9.45ರ ಹೊತ್ತಿಗೆ ಸಹೋದರಿಗೆ ಕರೆ ಮಾಡಿ, ತನ್ನ ಸ್ಕೂಟಿ ಪಂಕ್ಚರ್ ಆಗಿದ್ದು..ಯಾರೋ ತನಗೆ ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾರೆ. ಅವರು ಪಂಕ್ಚರ್ ಹಾಕಿಸಲು ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದಾರೆ. ತನಗೆ ಭಯವಾಗುತ್ತಿದೆ ಇಲ್ಲಿ ಸುತ್ತಮುತ್ತ ಲಾರಿ ಡ್ರೈವರ್ಸ್ ಇದ್ದಿರುವುದಾಗಿ ಆತಂಕ ವ್ಯಕ್ತಪಡಿಸಿದ್ದರಂತೆ. ಆಗ ಆಕೆ ವಾಹನ ಬಿಟ್ಟು ಟೋಲ್ ಪ್ಲಾಝಾದ ಬಳಿ ಬಂದು ಬೇರೆ ವಾಹನದಲ್ಲಿ ಬರುವಂತೆ ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ. ನಂತರ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ವರದಿ ತಿಳಿಸಿದೆ. ನಾಲ್ವರಲ್ಲಿ ಮೊಹಮ್ಮದ್ ಆರೀಫ್ ಲಾರಿ ಚಾಲಕನಾಗಿದ್ದು, ಉಳಿದ ಮೂವರು ಲಾರಿ ಕ್ಲೀನರ್ಸ್ ಆಗಿದ್ದಾರೆ ಎಂದು ವರದಿ ತಿಳಿಸಿದೆ.