Advertisement
ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ : ಕುದ್ರುಬೈಲು ಪರಿಸರದಲ್ಲಿ ನೆರೆ ನೀರಿನ ಪ್ರಮಾಣ ಏರಿಕೆಯಾಗಿ ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ ಇಲ್ಲಿನ ಕುದ್ರುಮನೆ ನಿವಾಸಿಗಳಾದ ನಾಗೇಶ್ ದೇವಾಡಿಗ ಅವರು ಕುಟುಂಬ ಸದಸ್ಯರಾದ ಸೀತಾರಾಮ ದೇವಾಡಿಗ, ವಸಂತಿ ದೇವಾಡಿಗ, ಸಾಧು, ನಿಶಾಂತ್, ನಿತೀಶ್, ಪಾರ್ವತಿ ಹಾಗೂ ಕುಟುಂಬ ಸದಸ್ಯರನ್ನು ಬೋಟ್ ಸಹಾಯದಿಂದ ಹಾಗೂ ತಮ್ಮ ಮನೆಯ ಜಾನುವಾರುಗಳನ್ನು ನೆರೆ ನೀರಿನಲ್ಲಿಯೇ ಸುರಕ್ಷಿತ ಸ್ಥಳಾಂತರಗೊಳಿಸಲಾಗಿದೆ.
Related Articles
ತೆಕ್ಕಟ್ಟೆ: ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ತೂರು ಗ್ರಾಮದ ಹೊಗೆಸಾಲು ಪರಿಸರ ಸಂಪೂರ್ಣ ಜಲಾವೃತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ನಿವಾಸಿಗಳನ್ನು ಜು.6 ರಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮುತ್ತು ಪೂಜಾರಿ ಅವರ ಮನೆಯ ಸುತ್ತಲೂ ಅಪಾರ ಪ್ರಮಾಣದಲ್ಲಿ ಮಳೆನೀರು ಸುತ್ತುವರಿದು ಅಪಾಯದ ಮಟ್ಟ ಎದುರಾಗಿರುವ ಪರಿಣಾಮ ಕುಟುಂಬ ಸದಸ್ಯರಾದ ಆಶಾಲತಾ ಹಾಗೂ ಅಥರ್ವ, ತನುಶ್ರೀ ಅವರನ್ನು ಬೋಟ್ ಸಹಾಯದಿಂದ ನೆರೆ ಪೀಡಿತರನ್ನು ಸುರಕ್ಷಿತ ತೀರ ಪ್ರದೇಶದೆಡೆಗೆ ಸ್ಥಳಾಂತರಿಸಲಾಯಿತು. ಜಾನುವಾರುಗಳನ್ನು ನೆರೆ ನೀರಿನ ಮೂಲಕವೇ ತೀರ ಪ್ರದೇಶದೆಡೆಗೆ ಸಾಗಿಸಲಾಗಿದೆ. ಆವೃತ್ತವಾಗಿದ್ದು, ಕೆದೂರು ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ಶೆಟ್ಟಿ ಉಳೂ¤ರು, ಗ್ರಾಮಲೆಕ್ಕಿಗ ದೀಪಿಕಾ ಶೆಟ್ಟಿ ಹಾಗೂ ಸ್ಥಳೀಯರು ಹಾಜರಿದ್ದರು.
Advertisement
ರಕ್ಷಣಾ ಕಾರ್ಯಕ್ಕೆ ಸ್ಥಳೀಯರ ಸಾಥ್ : ರಕ್ಷಣಾ ಕಾರ್ಯದಲ್ಲಿ ಸ್ಥಳೀಯರಾದ ಪ್ರತಾಪ್ ಶೆಟ್ಟಿ ಉಳ್ತೂರು, ಸಂದೇಶ್ ಶೆಟ್ಟಿ ಉಳ್ತೂರು, ಕೃಷ್ಣ ಪೂಜಾರಿ ತೆಕ್ಕಟ್ಟೆ, ಕುಂದಾಪುರ ಅಗ್ನಿಶಾಮಕ ದಳದ ಠಾಣಾಧಿಕಾರಿ ವಿ.ಸುಂದರ್, ಸಿಬಂದಿಗಳಾದ ರವೀಂದ್ರ ದೇವಾಡಿಗ, ನಾಗರಾಜ ಪೂಜಾರಿ, ಮುಸ್ತಾಫ, ಸಚಿನ್, ಅಭಿಷೇಕ್ ಹಾದಿಮನಿ, ಸಮೀರ್ ಅವರು ಶ್ರಮಿಸಿದ್ದಾರೆ.