Advertisement

ಕ್ಯಾಮೆರಾ ಮೇಲೆ ತೇಜಸ್ವಿ ಕಣ್ಣು

12:15 PM Sep 09, 2017 | |

“ನಾಲ್ಕೈದು ಸಲವಾದರೂ ಕಾರ್ವಾಲೋ ಓದಿದ್ದೆ. ಆಗಿನ್ನೂ ತೇಜಸ್ವಿಯವರ ಪರಿಚಯವಿರಲಿಲ್ಲ.  ಅವರು ಕುವೆಂಪು ಅವರ ಮಗ ಅಂತಾನೂ ಗೊತ್ತಿರಲಿಲ್ಲ. ಆ ಸಮಯದಲ್ಲೇ ಅವರು ನನಗೆ ತುಂಬಾ ಇಷ್ಟವಾಗಿದ್ದರು. ಪರಿಸರ, ನೆಲ ಜಲ ಕುರಿತು ಬರೀ ಮಾತಾಡೋರ ಮಧ್ಯೆ ಇವರೊಬ್ಬರು ವಿಶೇಷವಾಗಿ ಕಾಣಿಸಿದ್ದರು. ಅವರನ್ನ ಫ‌ಸ್ಟ್‌ ಟೈಮ್‌ ನೋಡಿದ್ದು 1985- 86ರಲ್ಲಿ ಮೈಸೂರಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಾಗ. ಆಮೇಲೆ ತೊಂಬತ್ತರ ದಶಕದಲ್ಲಿ ವೀರಪ್ಪನ್‌ ಕಾಡು(ಕೊಳ್ಳೇಗಾಲದ ಕರಿಕಲ್‌ ಕಾಡು) ಗಣಿಗಾರಿಕೆಯಿಂದ ಹಾಳಾಗ್ತಾ ಇದೆ ಅಂತ ಕೇಸ್‌ ಹಾಕಿದೆ. ಆ ಸಂಬಂಧ ಸಹಿ ಹಾಕಿಸಿಕೊಳ್ಳೋಕೆ ತೇಜಸ್ವಿ ಹತ್ರ ಹೋಗಿದ್ದೆ. ನಾನು ಅವರನ್ನ ಮುಖತಃ ಭೇಟಿಯಾಗಿದ್ದು ಅದೇ ಮೊದಲು. ಹೀಗೆ ನಮ್ಮ ಒಡನಾಟ ಶುರುವಾಯಿತು.

Advertisement

2000ರ ಸಮಯದಲ್ಲಿ ನಾನು ಮೂಡಿಗೆರೆಯಲ್ಲಿದ್ದೆ. ಆವಾಗ ತಾನೇ ಪರಿಚಯಸ್ಥರ ಮೂಲಕ ಅಮೆರಿಕದಿಂದ ಒಂದು ಸೋನಿ ಡಿಎಸ್‌ಎಲ್‌ಆರ್‌ ಕ್ಯಾಮೆರಾನಾ ತರಿಸಿಟ್ಟುಕೊಂಡಿದ್ದೆ. ಒಂದಿನ ಕಟ್ಟಿಂಗ್‌ ಮಾಡಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ತೇಜಸ್ವಿಯವರು ನಮ್ಮನೆಗೆ ಬಂದರು. ಅದೂ ಇದೂ ಮಾತಾಡಿ ಎದ್ದು ಹೊರಟರು. 

ಅಷ್ಟರಲ್ಲಿ ಮೂಲೇಲಿಟ್ಟಿದ್ದ ಕ್ಯಾಮೆರಾ ಅವರ ಕಣ್ಣಿಗೆ ಬಿದ್ದಿದೆ. ಅವರು ಅದನ್ನು ಕೈಗೆತ್ತಿಕೊಂಡವರೇ ಕುತೂಹಲದಿಂದ ಪರೀಕ್ಷಿಸತೊಡಗಿದರು. ಅದರ ಮ್ಯಾನುವಲ್‌ ಪುಸ್ತಕದ ಪುಟಗಳನ್ನು ತಿರುವಿ “ಈ ಕ್ಯಾಮೆರಾ ನಿನ್‌ ಹತ್ರ ಇದ್ರೆ ವೇಸ್ಟು, ನಾನು ತಗೊಂಡು ಹೋಗ್ತಿàನಿ’ ಅಂತ ನೇತುಹಾಕ್ಕೊಂಡು ಹೋಗೇ ಬಿಟ್ರಾ.  

ಆಮೇಲೆ ಅದರಲ್ಲಿ ಸುಮಾರು ನೂರಿನ್ನೂರು ಫೋಟೋಗಳನ್ನು ತೆಗೆದರು. ಆ ಪೋಟೋಗಳ ಮಾರಾಟ ಮತ್ತು ಪ್ರದರ್ಶನದಿಂದ ಒಂದಷ್ಟು ಲಾಭ ಸಿಕ್ಕಾಗ ಸ್ವಲ್ಪ ಭಾಗವನ್ನು ನಂಗೂ ಕೊಡೋಕೆ ಬಂದಿದ್ದರು. ನಾನು ಬೇಡವೆಂದು ನಯವಾಗಿ ನಿರಾಕರಿಸಿದಾಗ ಅವರು ತಮ್ಮ ಎಂದಿನ ಒರಟು, ಆತ್ಮೀಯ ದನಿಯಲ್ಲಿ “ತಗೊಳ್ಳಯ್ನಾ ಇದರಲ್ಲಿ ನಿನ್ನ ಶ್ರಮಾನೂ ಇದೆ’ ಅಂದರು.

ಈಶ್ವರ್‌ ಪ್ರಸಾದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next