Advertisement

ಚರ್ಚೆಗೆ ಗ್ರಾಸವಾದ ತೇಜಸ್ವಿನಿ ಟ್ವೀಟ್‌

06:14 PM Apr 08, 2019 | Lakshmi GovindaRaju |

ಬೆಂಗಳೂರು: ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಸ್ಟ್ರಾ ಇಲ್ಲದೆ ಎಳನೀರು ಕುಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಅದಮ್ಯ ಚೇತನ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್‌ ಅವರು ಮಾಡಿರುವ ಟ್ವೀಟ್‌ ಚರ್ಚೆಗೆ ಗ್ರಾಸವಾಗಿದೆ.

Advertisement

ತೇಜಸ್ವಿನಿ ಅವರು ಶನಿವಾರ “ನಿಖಿಲ್‌ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ. ಕಾರಣ ಏನೇ ಇರಲಿ. ಇದನ್ನು ನಾವೆಲ್ಲಾ ಕಲೀಲೇಬೇಕು. ಯಾಕೆ ಗೊತ್ತಾ? ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಎಳನೀರು ಕುಡಿದು ಬಿಸಾಡ್ತಿವಿ. ಈ ಸ್ಟ್ರಾಗಳನ್ನು ಮರುಸಂಸ್ಕರಣೆ ಮಾಡಲಾಗುವುದಿಲ್ಲ. ನೀರಿಗೋ, ಕಾಡಿಗೋ, ಭೂಮಿಗೋ ಸೇರಿ ಮೂಕಪ್ರಾಣಿಗಳಿಗೆ ತೊಂದರೆ. ಸ್ಟ್ರಾ ಉಪಯೋಗ ಬಿಟ್ಟಾಕೋಣ’ ಎಂದು ಟ್ವೀಟ್‌ ಮಾಡಿದ್ದಾರೆ.

ನಿಖಿಲ್‌ ಬಗ್ಗೆ ಏಕ ವಚನದಲ್ಲಿ ಉಲ್ಲೇಖ, ಆಕ್ಷೇಪ, ಸಮರ್ಥನೆ, ಪರಿಸರ ಕಾಳಜಿ ಬಗ್ಗೆ ಮೆಚ್ಚುಗೆ, ಸ್ವಾಗತಾರ್ಹ ಅಭಿಪ್ರಾಯವನ್ನು ಟ್ವಿಟ್ಟಿಗರು ವ್ಯಕ್ತಪಡಿಸಿದ್ದಾರೆ. ಭಾನುವಾರ ಮತ್ತೂಂದು ಟ್ವೀಟ್‌ ಮಾಡಿರುವ ತೇಜಸ್ವಿನಿಯವರು, “ಪ್ಲಾಸ್ಟಿಕ್‌ ಸ್ಟ್ರಾ ವಿರೋಧದ ನಮ್ಮ ಹೋರಾಟ ಇಂದು ನಿನ್ನೆಯದಲ್ಲ. ಚುನಾವಣೆ ಗಿಮಿಕ್‌ ಅಂತೂ ಖಂಡಿತ ಅಲ್ಲ.

ಪ್ರತಿನಿತ್ಯ 60 ಕೋಟಿ ಸ್ಟ್ರಾಗಳನ್ನು ನಾವು ಬಿಸಾಕುತ್ತಿದ್ದೇವೆ. “ಸ್ಟ್ರಾ ಬಳಸದ’ ನಮ್ಮ ನಿರ್ಧಾರಕ್ಕೆ, ಕೆಲ ಸೊನ್ನೆಗಳನ್ನು ಕಡಿಮೆ ಮಾಡುವ ಶಕ್ತಿ ಇದೆ. ಈ ಮಾಹಿತಿಯನ್ನು ಹೆಚ್ಚು ಜನರಿಗೆ ತಿಳಿಸಿ’ ಎಂದು ಟ್ವೀಟ್‌ ಮಾಡಿದ್ದಾರೆ. ಜತೆಗೆ “ಬಳಸಿ ಬಿಸಾಡುವ ಸ್ಟ್ರಾ’ ಹೆಸರಿನ ಪೋಸ್ಟ್‌ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next