Advertisement

ಉದ್ಯಾನಗಳಲ್ಲಿ ತೇಜಸ್ವಿ ಮತ ಬೇಟೆ

12:16 AM Apr 08, 2019 | Lakshmi GovindaRaju |

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಭಾನುವಾರ ಉದ್ಯಾನಗಳು, ಮನೆ-ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

Advertisement

ಗೋವಿಂದರಾಜನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕ ವಿ. ಸೋಮಣ್ಣ, ರವೀಂದ್ರ ಅವರೊಂದಿಗೆ ತೇಜಸ್ವಿ ಸೂರ್ಯ ಬೆಳಗ್ಗೆ 6.30ರಿಂದಲೇ ಮತಯಾಚನೆಯಲ್ಲಿ ತೊಡಗಿದರು.

ಎಂಸಿ ಲೇಔಟ್‌ ಪಾರ್ಕ್‌, ಉದಯ ಸ್ಕೂಲ್‌ ಬಳಿಯ ಪಾರ್ಕ್‌, ನಚಿಕೇತ ಪಾರ್ಕ್‌, ಸುಬ್ಬಣ್ಣ ಗಾರ್ಡನ್‌, ಮಾರೇನಹಳ್ಳಿ, ವಿಜಯನಗರ ಮುಖ್ಯರಸ್ತೆ, ಹೊಸಹಳ್ಳಿ , ಹಂಪಿನಗರಗಳಲ್ಲಿನ ಪ್ರಮುಖ ಬೀದಿಗಳಲ್ಲಿ ಮತ ಬೇಟೆ ನಡೆಸಿದರು.

ನಂತರ ಹಂಪಿನಗರದ ಸಂಕಷ್ಟ ಹರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಪಾದಯಾತ್ರೆಯಲ್ಲಿ ಶಾಸಕ ವಿ. ಸೋಮಣ್ಣ, ರವೀಂದ್ರ , ಉಮೇಶ್‌ ಶೆಟ್ಟಿ , ಅರುಣ್‌ ಸೋಮಣ್ಣ, ಬಿಬಿಎಂಪಿ ಸದಸ್ಯರು, ಸ್ಥಳೀಯ ನಾಯಕರು, ಕಾರ್ಯಕರ್ತರು ಸಾಥ್‌ ನೀಡಿದರು.

ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ಈ ಚುನಾವಣೆಯು ದೇಶದ ಮುಂದಿನ ಐವತ್ತು ವರ್ಷಗಳ ಭವಿಷ್ಯವನ್ನು ನಿರ್ಧರಿಸಲಿದೆ. ದೇಶದ್ರೋಹ ಕಾಯ್ದೆಯ ಮರುಚಿಂತನೆ ಕಾಂಗ್ರೆಸ್‌ ನ ಪ್ರಣಾಳಿಕೆ ನಾಚಿಕೆಗೇಡು ಎಂದರು.

Advertisement

“ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರಿಗೇ ಭಯ ಮೂಡಿಸಿದ್ದಾರೆ. ಹಾಗಾಗಿ, ದೇಶದ ನೇತೃತ್ವ ಯಾರಿಗೆ ನೀಡಬೇಕು ಎಂಬುದನ್ನು ನೀವೇ ನಿರ್ಧರಿಸಿ. ನವ ಬೆಂಗಳೂರಿನ ಹೊಸಕಟ್ಟಡವನ್ನು ನರೇಂದ್ರ ಮೋದಿಯವರ ಜೊತೆಗೂಡಿ ನಿರ್ಮಿಸಬೇಕಿದೆ’ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಶಾಸಕ ವಿ. ಸೋಮಣ್ಣ, ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳು ನನಗೆ ಎರಡು ಕಣ್ಣುಗಳು. ನಾಳೆ ಈ ಎರಡೂ ಕ್ಷೇತ್ರಗಳಲ್ಲಿನ ಚುನಾವಣಾ ಪ್ರಚಾರದಲ್ಲಿ ತೇಜಸ್ವಿನಿ ಅನಂತ ಕುಮಾರ್‌ ಕೂಡ ಭಾಗ ವಹಿಸಲಿದ್ದಾರೆ ಎಂದರು.

ವಿದೇಶಗಳಲ್ಲಿ ಅದರಲ್ಲೂ ಪಾಕಿಸ್ತಾನದ ಅಧಿಕಾರಿಗಳು ಸಹ ಮೋದಿ ಅವರಂತಹ ನಾಯಕತ್ವ ಬಯಸುತ್ತಿದ್ದಾರೆ. ಬೆಂಗಳೂರನ್ನು ವಿಶ್ವ ದರ್ಜೆಗೆ ಸೇರಿಸಲು ಮೋದಿ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅನಂತಕುಮಾರ್‌ ಅವರ ಅನುಪಸ್ಥಿತಿಯಲ್ಲಿ ಅವರ ಕನಸುಗಳನ್ನು ನನಸು ಮಾಡಲು ತೇಜಸ್ವಿ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next