ಲಕ್ನೋ: ಎಲ್ಲ ಹಿಂದೂ ಯುವಕರ ಹಾಗೆ ನನನಗೂ ಬಾಲ್ಯದಲ್ಲಿ ಅಯೋಧ್ಯೆಗೆ ಭೇಟಿ ನೀಡಬೇಕೆಂಬ ಉತ್ಕಟ ಇಚ್ಛೆ ಇತ್ತು. ಅದು ಇಂದು ಉತ್ತರಪ್ರದೇಶದ ಯುವಮೋರ್ಚಾ ಕಾರ್ಯಕರ್ತರಿಂದ ಈಡೇರಿದೆ ಎಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಗುರುವಾರ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಯುವಮೋರ್ಚಾ ಸಂಘಟಿಸಿರುವ ‘ಯುವ ಸಂಗಮ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ತೇಜಸ್ವಿ ಸೂರ್ಯ ಅಯೋಧ್ಯೆಗೆ ತೆರಳಿದ್ದು, ಅವರನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ಯುವಮೋರ್ಚಾ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು.
ಗುರುವಾರ ಸಂಜೆ ಸರಯೂ ನದಿ ದಂಡೆಯಲ್ಲಿ ಸರಯೂ ಆರತಿ ಕಾರ್ಯಕ್ರಮದಲ್ಲೂ ತೇಜಸ್ವಿ ಸೂರ್ಯ ಪಾಲ್ಗೊಳ್ಳಲಿದ್ದಾರೆ.
‘ರಾಮನ ಪವಿತ್ರ ಭೂಮಿಯನ್ನು ನೋಡಲು, ಅನ್ವೇಷಿಸಲು ನಾನು ಕಾತುರದಿಂದ ಕಾಯುತ್ತಿದ್ದೇನೆ’ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
Related Articles
ಯೋಗಿ ಆದಿತ್ಯನಾಥ್ ಅವರು ಅಧಿಕಾರ ಸ್ವೀಕಾರ ಮಾಡಿದಂದಿನಿಂದ ಉತ್ತರಪ್ರದೇಶದಲ್ಲಿ ಅಭೂತಪೂರ್ವ ಅಭಿವೃದ್ಧಿಯಾಗಿದೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ನಲ್ಲಿ ಬರೆದಿದ್ದಾರೆ.