Advertisement
ಪ್ರಾದೇಶಿಕ ಪಕ್ಷಗಳ ಪಾರುಪತ್ಯವೇ ಜೋರಾಗಿರುವ ದಕ್ಷಿಣ ಭಾರತ ರಾಜ್ಯಗಳಲ್ಲಿ ಬಿಜೆಪಿ ಪ್ರವೇಶಕ್ಕೆ ಕರ್ನಾಟಕ ಹೆಬ್ಟಾಗಿಲು. ಎರಡನೇ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ರಚಿಸುವ ಮೂಲಕ ಪಕ್ಷ ಇನ್ನಷ್ಟು ಬಲ ವಾಗಿ ನೆಲೆಯೂರಲು ಕಸರತ್ತು ನಡೆಸಿದೆ. ಹಾಗಾಗಿ ಸಹಜವಾಗಿಯೇ ಪಕ್ಷದ ವರಿಷ್ಠರು ಕರ್ನಾಟಕಕ್ಕೆ ಹಂತ ಹಂತವಾಗಿ ಪ್ರಾತಿನಿಧ್ಯ ನೀಡಲಾರಂಭಿಸಿದ್ದಾರೆ. ರಾಜ್ಯದಲ್ಲಿ ದಾಖಲೆ ಸಂಖ್ಯೆಯ 25 ಸಂಸದರು ಆಯ್ಕೆಯಾಗಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೇಂದ್ರ ಸಂಪುಟದಲ್ಲೂ ರಾಜ್ಯದ ಮೂವರು ಸಚಿವರಿದ್ದು, (ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಇತ್ತೀಚೆಗೆ ಮೃತಪಟ್ಟಿದ್ದಾರೆ), ಪ್ರಮುಖ ಖಾತೆಗಳನ್ನೂ ನೀಡಿ ಆದ್ಯತೆ ಕೊಡಲಾಗಿದೆ. ಸರಕಾರದಲ್ಲಿ ಮಾತ್ರವಲ್ಲದೆ, ಪಕ್ಷದಲ್ಲೂ ರಾಜ್ಯದವರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಕರ್ನಾಟಕ ರಾಷ್ಟ್ರ ಮಟ್ಟದಲ್ಲೂ ಸಂಘಟನೆಗೆ ಕೊಡುಗೆ ನೀಡಲು ಅವಕಾಶ ಕೊಟ್ಟಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳಿದ್ದು, ಈಗಿನಿಂದಲೇ ಸಂಘಟನೆ ಬಲಪಡಿಸಿಕೊಳ್ಳಲು ಹೊಸ ಜವಾಬ್ದಾರಿ ವಹಿಸಿದಂತೆ ತೋರುತ್ತಿದೆ.
Related Articles
Advertisement
ಆಯ್ಕೆ ಹಿಂದಿರುವ ಅಂಶ: ಸಂಘಟನೆ ಹಿನ್ನೆಲೆ, ಹೋರಾಟ, ಸಂಘಟನ ಚಾತುರ್ಯದ ಜತೆಗೆ ಒಕ್ಕಲಿಗ ಸಮುದಾಯದ ಸಿ.ಟಿ. ರವಿ ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಕೇಳಿಬಂದಿತ್ತು. ಅಲ್ಲದೇ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷದ ನಾನಾ ಜವಾಬ್ದಾರಿ ನಿರ್ವಹಣೆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಈಗಾಗಲೇ ಗುರುತಿಸಿಕೊಂಡವರು. ಕಾಂಗ್ರೆಸ್ ಒಕ್ಕಲಿಗ ಸಮು ದಾಯದ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ಹೊತ್ತಿನಲ್ಲೇ ಮೊದಲ ಬಾರಿಗೆ ಒಕ್ಕಲಿಗ ಸಮುದಾಯ ನಾಯಕರೊಬ್ಬರಿಗೆ ಬಿಜೆಪಿ ಪ್ರಮುಖ ಜವಾಬ್ದಾರಿ ವಹಿಸಿದೆ. ಈಗಾಗಲೇ ಡಿ.ವಿ. ಸದಾನಂದ ಗೌಡ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯುವಜನ ಸೆಳೆತದತ್ತ ಚಿತ್ತ: ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ರಾಷ್ಟ್ರಾದ್ಯಂತ ಯುವಜನರ ಸಂಘ ಟನೆಯ ಹೊಣೆ ವಹಿಸಲಾಗಿದೆ. ಸಮರ್ಥವಾಗಿ ವಿಚಾರ, ಅಭಿಪ್ರಾಯಗಳನ್ನು ಮಂಡಿಸುತ್ತ ಹೊಸ ತಲೆ ಮಾರಿನ ಸಮೂಹ ಮಾಧ್ಯಮಗಳ ಪರಿಣಾಮಕಾರಿ ಬಳಕೆ ಮೂಲಕ ರಾಷ್ಟ್ರಾದ್ಯಂತ ಗಮನ ಸೆಳೆಯುವ ಭರ ವಸೆ ಮೂಡಿಸಿರುವ ಯುವ ಸಂಸದರಿಗೆ ಪಕ್ಷದ ವರಿ ಷ್ಠರು ಮಹತ್ವದ ಜವಾಬ್ದಾರಿಯನ್ನೇ ನೀಡಿದ್ದಾರೆ. ತೇಜಸ್ವಿ ಸೂರ್ಯ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯ ದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಅನಂತ ಕುಮಾರ್ ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿ ಯಾಗಿ ಆಯ್ಕೆಯಾಗಿದ್ದ ತೇಜಸ್ವಿ ಸೂರ್ಯಗೆ ಈಗಲೂ ಅಚ್ಚರಿ ಹುಟ್ಟಿಸುವ ಹೊಣೆಗಾರಿಕೆ ನೀಡಲಾಗಿದೆ.
ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ಹಂಚಿಕೆ ಆ ಪಕ್ಷದ ಆಂತರಿಕ ವಿಚಾರವಾದರೂ ದೀರ್ಘಾವಧಿಯಲ್ಲಿ ಅದು ರಾಜ್ಯಕ್ಕೆ ಲಾಭ ತಂದುಕೊಡುವ ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಾಯಕತ್ವ ರೂಪುಗೊಳ್ಳಲು ಸಿಗುವ ಅವಕಾಶ ಎಂಬುದನ್ನು ಮರೆಯುವಂತಿಲ್ಲ. ಅನಂತಕುಮಾರ್ ರಾಷ್ಟ ಮಟ್ಟದಲ್ಲಿ ಬೆಳೆಸಿಕೊಂಡ ಪ್ರಭಾವದಿಂದ ರಾಜ್ಯಕ್ಕೆ ಸಾಕಷ್ಟು ನೆರವಾಗಿರುವುದನ್ನು ಬಿಜೆಪಿ ಮಾತ್ರವಲ್ಲದೇ ಅನ್ಯ ಪಕ್ಷಗಳು ನಾಯಕರು ಒಪ್ಪುತ್ತಾರೆ. ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದರಿಂದ ರಾಷ್ಟ್ರೀಯ ನಾಯಕರೊಂದಿಗೆ ನಿರಂತರವಾಗಿ ಒಡನಾಟ ಬೆಳೆಯುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವಿನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಅನುಕೂಲವಾಗಲಿದೆ. ಅದಕ್ಕೆ ಅನಂತ ಕುಮಾರ್ ಅವರ ಕಾರ್ಯವೈಖರಿಯೇ ಮಾದರಿ. ಹಾಗೆಯೇ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯ ದರ್ಶಿ ಬಿ.ಎಲ್.ಸಂತೋಷ್ ಅವರ ಕಾರಣಕ್ಕೂ ರಾಜ್ಯ ಬಿಜೆಪಿಗೆ ನಾನಾ ರೀತಿಯ ಪ್ರಯೋಜನ, ಆದ್ಯತೆ ಸಿಗುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.
ಹೋರಾಟಕ್ಕಿಂತ ಸಂಘಟನೆಗೆ ಒತ್ತು: ಕೇಂದ್ರ ಹಾಗೂ ರಾಜ್ಯದಲ್ಲಿ ಸುಸ್ಥಿರ ಬಿಜೆಪಿ ಸರಕಾರಗಳಿವೆ. ಇದು ಸಂಘಟನ ಕಾರ್ಯಕ್ಕೆ ವರದಂತೆ ಶಾಪವೂ ಹೌದು. ಹಾಗಾಗಿ ರಾಷ್ಟ್ರೀಯ ಪದಾಧಿಕಾರಿಗಳಿಗೆ ಹೋರಾಟ, ಸಂಘರ್ಷದ ಚಟುವಟಿಕೆಗಳಿಗಿಂತ ಸಂಘಟನೆಗೆ ಒತ್ತು ನೀಡುವ ಹೊಣೆಗಾರಿಕೆ ಹೆಚ್ಚಾಗಿರುತ್ತದೆ. ಎರಡೂ ಕಡೆ ಪಕ್ಷದ ಸರಕಾರವೇ ಅಧಿಕಾರದಲ್ಲಿದೆ ಎಂದು ಮೈಮರೆತರೆ ಪಕ್ಷದ ಬೇರುಗಳು ಸಡಿಲ ವಾಗುವ ಅಪಾಯವಿರುತ್ತದೆ. ಬದಲಿಗೆ ಪಕ್ಷ ಸಂಘಟನೆ ದುರ್ಬಲವಾಗಿರುವ ಕಡೆ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹೆಚ್ಚಿರುವ ಕಡೆ ಪಕ್ಷದ ಸಿದ್ಧಾಂತ ಪ್ರತಿ ಪಾದಿಸಿ ಯುವಜನತೆ ಸೇರಿದಂತೆ ಎಲ್ಲ ಸಮು ದಾಯವರಿಗೆ ಮನವರಿಕೆ ಮಾಡಿಕೊಡ ಬೇಕಾಗುತ್ತದೆ. ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಕೇಡರ್ ವ್ಯವಸ್ಥೆ ಗಟ್ಟಿಗೊಳಿಸಿ ಸಂಘಟನೆ ಬಲಪಡಿಸಬೇಕಾಗುತ್ತದೆ.
ಹೊಸ ರಕ್ತಕ್ಕೆ ಅವಕಾಶ: ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಮುರಳೀಧರ ರಾವ್, ರಾಮ ಮಾಧವ್ ಅವರನ್ನು ಜವಾಬ್ದಾರಿಯಿಂದ ಮುಕ್ತ ಗೊಳಿಸಲಾಗಿದ್ದು, ಮುಂದೆ ಅವರ ಸೇವೆಯನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡ ಬೇಕಿದೆ. ಒಟ್ಟಾರೆ ರಾಷ್ಟ್ರೀಯ ಪದಾಧಿಕಾರಿಗಳ ನೇಮಕ ವನ್ನು ಗಮನಿಸಿದರೆ ಉಪಾಧ್ಯಕ್ಷರ ಪೈಕಿ ಕೆಲವರನ್ನು ಮುಂದುವರಿಸಿರುವುದು ಹೊರತುಪಡಿಸಿದರೆ ಹೊಸ ರಕ್ತ, ಹೊಸ ಮುಖಕ್ಕೆ ಅವಕಾಶ ನೀಡಿರುವುದು ಸ್ಪಷ್ಟ. ದೇಶದಲ್ಲಿ ಯುವಜನತೆಯನ್ನು ಸೆಳೆದು ಪಕ್ಷದ ಖಾಯಂ ಬೆಂಬಲಿಗರ ಪಡೆಯನ್ನು ಕಟ್ಟುವ ಜವಾಬ್ದಾರಿಯನ್ನು ಯುವ, ಹೊಸ ಸೇನಾನಿಗಳಿಗೆ ವಹಿಸಲಾಗಿದೆ. ಒಬ್ಬ ವ್ಯಕ್ತಿ ಕೇಂದ್ರಿತವಾಗಿ ಪಕ್ಷವನ್ನು ಬೆಳೆಸುವುದರಿಂದ ಕೆಲವು ರಾಜ್ಯಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಅರಿ ತಿರುವ ಬಿಜೆಪಿ ವರಿಷ್ಠರು ಎರಡನೇ ಹಂತದ ನಾಯ ಕರನ್ನು ರೂಪಿಸುವ ಕಾರ್ಯಕ್ಕೆ ಈಗಲೇ ಒತ್ತು ನೀಡಿ ದ್ದಾರೆ. ತಮ್ಮದೇ ಸರಕಾರ ಕೇಂದ್ರದಲ್ಲಿರುವುದರಿಂದ ಹೋರಾಟವಿಲ್ಲದ ಹೊತ್ತಿನಲ್ಲಿ ಸಂಘಟನೆಗೆ ಒತ್ತು ನೀಡಲು ಹೊಸ ಪಡೆಯನ್ನು “ಸಮರಾಭ್ಯಾಸ’ಕ್ಕೆ ಅಣಿ ಗೊಳಿಸಿದ್ದಾರೆ.
– ಎಂ. ಕೀರ್ತಿಪ್ರಸಾದ್