Advertisement
ಪುತ್ತೂರು ತಾಲೂಕಿನ ಉದ್ಲಡ್ಕ ನಿವಾಸಿ ಕೃಷಿಕ ಕುಶಾಲಪ್ಪ ಹಾಗೂ ಕಸ್ತೂರಿ ದಂಪತಿಯ ಪುತ್ರಿ ತೇಜಶ್ರೀ ಅಪ್ಪಟ ಪ್ರತಿಭಾವಂತೆ. ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಖೋಖೋಹಾಗೂ ಆ್ಯತ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ಅವರು, ಗುರಿಯತ್ತ ದಾಪುಗಾಲಿಡುತ್ತಿದ್ದಾರೆ. ಇಷ್ಟಾಗಿಯೂ
ಎಲೆ ಮರೆಯ ಕಾಯಿಯಂತಿದ್ದಾರೆ.
ಸಾಲಿನಲ್ಲಿ ಹಾಸನದಲ್ಲಿ ನಡೆದ ಖೋ ಖೋ ಪಂದ್ಯಾಟದಲ್ಲಿ ರಾಜ್ಯ ತಂಡವನ್ನು ಅವರು ಪ್ರತಿನಿಧಿಸಿದ್ದಾರೆ. ಆ್ಯತ್ಲೆಟಿಕ್ಸ್
ನಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅಸಂಖ್ಯ ಬಹುಮಾನ ಪಡೆದುಕೊಂಡಿದ್ದಾರೆ. ವಿವಿಧ ಕಡೆಗಳಲ್ಲಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ 400, 800 ಹಾಗೂ 1000 ಮೀ. ಓಟದಲ್ಲಿ ಹಲವು ಬಾರಿ ಗೆಲುವಿನ ಗೆರೆ ಮುಟ್ಟಿ ಮಿಂಚಿದ್ದಾರೆ. ತೇಜಶ್ರೀಗೆ ಬಾಲ್ಯದಿಂದಲೇ ಕ್ರೀಡೆ ಎಂದರೆ ಎಲ್ಲಿಲ್ಲದ ಪ್ರೀತಿ. ಈಗಷ್ಟೇ ಬೆಳಗುತ್ತಿರುವ ಕ್ರೀಡಾ ಜ್ಯೋತಿ ಅವರು. ಕ್ರೀಡೆಯಲ್ಲಿ ಈವರೆಗಿನ ಸಾಧನೆ ಬಗ್ಗೆ ಕೇಳಿದಾಗ, ನನಗೆ ನನ್ನ ಸಾಧನೆಯ ಕುರಿತು ಹೆಮ್ಮೆ ಇದೆ. ನಾನು ಇನ್ನು ಮುಂದೆಯೂ ಉತ್ಕೃಷ್ಟ ಸಾಧನೆ ಮಾಡಿ, ನನ್ನ ಹೆತ್ತವರಿಗೆ ಕೀರ್ತಿ ತರಬೇಕೆಂಬ ಪುಟ್ಟ ಕನಸಿದೆ ಎಂದರು.
ರಕ್ಷಿತಾ ಸಿ.ಎಚ್.
ಉದಯವಾಣಿ ವಿದ್ಯಾರ್ಥಿ ಪತ್ರಕರ್ತ
ಯೋಜನೆಯ ಶಿಕ್ಷಣಾರ್ಥಿ