Advertisement
ಇದನ್ನೂ ಓದಿ:ವಿಶ್ವನಾಥ್ ಅವರೇ, ನೀವು ಸತ್ಯಸಂಧರ ರೀತಿ ಮಾತಾಡಬೇಡಿ: ಪ್ರತಾಪ್ ಸಿಂಹ
Related Articles
Advertisement
ಶನಿವಾರ ತೇಜಸ್ ಎಕ್ಸ್ ಪ್ರೆಸ್ ಎರಡು ಟ್ರಿಪ್ ಗಳ ವಿಳಂಬದಿಂದಾಗಿ ಐಆರ್ ಸಿಟಿಸಿ 1574 ಪ್ರಯಾಣಿಕರಿಗೆ ಒಟ್ಟು 3,93,500 ರೂಪಾಯಿ (ಪ್ರತಿ ಪ್ರಯಾಣಿಕರಿಗೆ 250 ರೂ.) ಪರಿಹಾರದ ಹಣವನ್ನು ಮರು ಪಾವತಿಸಲಾಗಿದೆ. ಅಷ್ಟೇ ಅಲ್ಲ ಭಾನುವಾರ ತೇಜಸ್ ಎಕ್ಸ್ ಪ್ರೆಸ್ ಒಂದು ಗಂಟೆಗಳ ಕಾಲ ವಿಳಂಬವಾಗಿದ್ದಕ್ಕೆ 561 ಪ್ರಯಾಣಿಕರಿಗೆ ತಲಾ 150 ರೂಪಾಯಿಯಂತೆ ಪರಿಹಾರದ ಹಣವನ್ನು ಪಾವತಿಸಲಾಗಿದೆ ಎಂದು ವರದಿ ವಿವರಿಸಿದೆ.
2019ರ ಆಗಸ್ಟ್ 4ರಂದು ವಿಮಾನ ಮಾದರಿ ಸೌಲಭ್ಯಗಳನ್ನೊಳಗೊಂಡ ತೇಜಸ್ ಎಕ್ಸ್ ಪ್ರೆಸ್ ರೈಲನ್ನು ಲಕ್ನೋ ಮತ್ತು ದೆಹಲಿ ನಡುವೆ ಮೊದಲ ಬಾರಿಗೆ ಸಂಚರಿಸಲು ಚಾಲನೆ ನೀಡಲಾಗಿತ್ತು. ಶೇ.99.9ರಷ್ಟು ನಿಗದಿತ ಸಮಯಕ್ಕೆ ರೈಲು ಸಂಚಾರ ಮತ್ತು ತಲುಪುವುದನ್ನು ನಿರ್ವಹಿಸಲಾಗುತ್ತಿದೆ ಎಂದು ಐಆರ್ ಸಿಟಿಸಿ ಹೇಳಿದೆ.
ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಎರಡು ಗಂಟೆಗಳಷ್ಟು ವಿಳಂಬವಾಗಿರುವುದು. ಒಂದು ವೇಳೆ ರೈಲು ಆಗಮಿಸುವುದು ವಿಳಂಬವಾದರೆ ಭಾರೀ ಮೊತ್ತದ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.