Advertisement

ಮಳೆ ಹಾನಿ ಪರಿಶೀಲಿಸಿದ ತಹಶೀಲ್ದಾರ್

01:52 PM Sep 01, 2022 | Team Udayavani |

ಚಿಂಚೋಳಿ: ತಾಲೂಕಿನ ಹಲಕೋಡ ಗ್ರಾಮದಲ್ಲಿ ರವಿವಾರ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ತಹಶೀಲ್ದಾರ್‌ ಅಂಜುಮ ತಬಸುಮ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಕೋಡ ಗ್ರಾಮದಲ್ಲಿ ಒಟ್ಟು 25 ಮನೆಗಳಿಗೆ ಮಳೆ ನೀರು ನುಗ್ಗಿದೆ ಎಂದು ಗ್ರಾಮಸ್ಥರು ಕಂದಾಯ ನಿರೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಮೂರು ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಇನ್ನುಳಿದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಹೇಳಿದರು.

ಹೆಸರು ಹಾಗೂ ದವಸ ಧಾನ್ಯಗಳು, ದಿನಸಿ ಆಹಾರ ಹಾನಿಯಾಗಿದೆ. ಚರಂಡಿ ನೀರು ಕೆಲವು ಮನೆಗಳಿಗೆ ನುಗ್ಗಿದೆ. ಚರಂಡಿಯನ್ನು ಶುಚಿಗೊಳಿಸಬೇಕೆಂದು ಜಟ್ಟೂರ ಪಿಡಿಒಗೆ ಸೂಚಿಸಲಾಗಿದೆ. ಸಣ್ಣದಾಗಿ ಸಿಡಿ ನಿರ್ಮಿಸಬೇಕೆಂದು ಪಿಆರ್‌ಇ, ಎಇಇಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next