Advertisement

ITF ಪಂದ್ಯಾವಳಿಯ ತಯಾರಿಯಲ್ಲಿದ್ದ ಪಾಕ್ ಯುವ ಟೆನಿಸ್ ಆಟಗಾರ್ತಿ ಹೃದಯಾಘಾತದಿಂದ ಮೃತ್ಯು

10:49 AM Feb 15, 2024 | Team Udayavani |

ಇಸ್ಲಾಮಾಬಾದ್: ಪಾಕಿಸ್ತಾನದ ಯುವ ಟೆನಿಸ್ ಆಟಗಾರ್ತಿ ಜೈನಾಬ್ ಅಲಿ ನಖ್ವಿ(17) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Advertisement

ಐಟಿಎಫ್ ಜೂನಿಯರ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಜೈನಾಬ್ ಬಂದಿದ್ದರು. ಫೆಬ್ರವರಿ 12 ರಂದು, ಅಭ್ಯಾಸ ಮುಗಿಸಿ ಹೋಟೆಲ್ ಕೋಣೆಗೆ ಬಂದಾಗ

ಸೋಮವಾರ ನಖ್ವಿ ಅವರು ITF ಜೂನಿಯರ್ ಪಂದ್ಯಾವಳಿಯ ಮೊದಲು ಅಭ್ಯಾಸ ಪಂದ್ಯದಲ್ಲಿ ಆಡಿದ ಬಳಿಕ ಹೋಟೆಲ್ ಕೋಣೆಗೆ ತೆರಳಿದ್ದ ವೇಳೆ ಕುಸಿದು ಬಿದ್ದಿದ್ದಾರೆ, ಈ ವೇಳೆ ಜೊತೆಗಿದ್ದ ಆಕೆಯ ಅಜ್ಜಿ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ ಬಳಿಕ ಅಲ್ಲಿದ್ದ ಮಂದಿ ಆಕೆಯನ್ನು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಅಷ್ಟೋತ್ತಿಗಾಗಲೇ ಆಕೆ ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

ಜೈನಾಬ್ ಮಹಿಳಾ ಟೆನಿಸ್ ನಲ್ಲಿ ಅತ್ಯಂತ ಭರವಸೆಯ ಆಟಗಾರ್ತಿಯಾಗಿದ್ದರು ಮತ್ತು ಐಟಿಎಫ್ ಜೂನಿಯರ್ ಸ್ಪರ್ಧೆಯಲ್ಲಿ ಗೆಲ್ಲಲು ಉತ್ಸಾಹದಿಂದ ಶ್ರಮಿಸುತ್ತಿದ್ದರು” ಎಂದು ಪಾಕಿಸ್ತಾನದ ಹಿರಿಯ ಟೆನಿಸ್ ಫೆಡರೇಶನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ನಖ್ವಿ ಅವರ ಮೃತದೇಹವನ್ನು ಕುಟುಂಬವು ಕರಾಚಿಗೆ ಕೊಂಡೊಯ್ದಿದೆ ಎಂದು ಮೂಲಗಳು ತಿಳಿಸಿವೆ.

Advertisement

ಈ ಘಟನೆಗೆ ಸಂಬಂಧಿಸಿದಂತೆ, ಪಾಕಿಸ್ತಾನ ಟೆನಿಸ್ ಫೆಡರೇಶನ್ ಅಧ್ಯಕ್ಷ ಐಸಾಮ್ ಉಲ್ ಹಕ್ ಖುರೇಷಿ, ಸೆನೆಟರ್ ಸಲೀಂ ಸೈಫುಲ್ಲಾ ಖಾನ್ ಮತ್ತು ಮಾಜಿ ಪಿಟಿಎಫ್ ಅಧ್ಯಕ್ಷರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Honey-Trapped: ರಾಯಭಾರ ಕಚೇರಿ ನೌಕರನಿಂದ ಸೇನೆಯ ಗೌಪ್ಯ ಮಾಹಿತಿ ಪಾಕ್‌ಗೆ ಹಂಚಿಕೆ

Advertisement

Udayavani is now on Telegram. Click here to join our channel and stay updated with the latest news.

Next