Advertisement

ಸಚಿನ್ ರಿಂದ ಪ್ರಶಸ್ತಿ ಪಡೆದ 14ರ ಬಾಲಕನಿಗೆ ಮೂರು ವರ್ಷ ನಿಷೇಧ

09:35 AM Jan 18, 2019 | Team Udayavani |

ಮುಂಬೈ: ತಂಡದಲ್ಲಿ ಅಶಿಸ್ತಿನ ವರ್ತನೆ ತೋರಿದ ಕಾರಣದಿಂದ ಮುಂಬೈನ 14ರ ಬಾಲಕನನ್ನು ಮೂರು ವರ್ಷಗಳ ಕಾಲ ಕ್ರಿಕೆಟ್ ನಿಂದ ನಿಷೇಧ ಹೇರಿದ ಘಟನೆ ನಡೆದಿದೆ.

Advertisement

ಮುಶೀರ್ ಖಾನ್ ನಿಷೇಧ ಶಿಕ್ಷೆಗೆ ಒಳಪಟ್ಟ ಆಟಗಾರ. ಈತ ಮುಂಬೈ ಅಂಡರ್ 16 ತಂಡದ ನಾಯಕ. ತಂಡದ ಸಹ ಆಟಗಾರರೊಂದಿಗೆ ಅಶಿಸ್ತಿನ ವರ್ತನೆ ತೋರಿದ ಕಾರಣದಿಂದ ಮುಂಬೈ ಕ್ರಿಕಟ್ ಅಸೋಸಿಯೇಶನ್ ಮುಂದಿನ ಮೂರು ವರ್ಷಗಳ ಕಾಲ ನಿಷೇಧ ಮಾಡಿದೆ.

ಎಡಗೈ ಸ್ಪಿನ್ನರ್ ಆಗಿರುವ ಮುಶೀರ್ ಖಾನ್, 2013ರಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರಿಂದ ವಿಶೇಷ ಪ್ರಶಸ್ತಿ ಪಡೆದಿದಿದ್ದಾರೆ. 


‘ ನಾವು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಈ ಕ್ರಮ ಕೈಗೊಂಡಿದ್ದೇವೆ. ಶಿಸ್ತು ಉಲ್ಲಂಘನೆಯಾಗಿದ್ದರಿಂದ ನಾವು ನಿಷೇಧ ಶಿಕ್ಷೆ ನೀಡಿದ್ದೇವೆ’. ಎಂದು ಮುಂಬೈ ಕ್ರಿಕೆಟ್ ನ ಕಾರ್ಯದರ್ಶಿ ಉಮೇಶ್ ಖಾನ್ವಿಲ್ಕರ್ ತಿಳಿಸಿದ್ದಾರೆ. ಮುಂಬೈ ಕ್ರಿಕೆಟ್ ನ ಈ ನಿರ್ಧಾರದ ಬಗ್ಗೆ ಸಾಕಷ್ಟು ವಿರೋಧವೂ ಕೇಳಿ ಬರುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next