Advertisement

ನಿಮ್ಮ ಮಕ್ಕಳು ಫೋನ್ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಗೆ ತಿಳಿಯಬಹುದು..? ಇಲ್ಲಿದೆ ಮಾಹಿತಿ

09:42 PM May 13, 2021 | Team Udayavani |

ಹದಿಹರೆಯದ ವಯಸ್ಸಿನವರು ತಂತ್ರಜ್ಞಾನದೊಂದಿಗೆ ಎಷ್ಟು  ಸಂಬಂಧವನ್ನು ಹೊಂದಿದ್ದಾರೆ ಎಂಬುದನ್ನು ವಿಶೇಷವಾಗಿ ಹೇಳಬೇಕೆಂದಿಲ್ಲ.  ಸದಾ ಗೇಮ್ಸ್ ಅಪ್ಲಿಕೇಶನ್‌ ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್‌ ಗಳಲ್ಲಿ ತೊಡಗಿಕೊಂಡಿರುವ ಯುವ ಸಮುದಾಯ ಇಂದು ಎಲ್ಲವೂ ವರ್ಚುವಲ್ ಮೀಟಿಂಗ್ ನಲ್ಲೆ ನಡೆಸಿಕೊಳ್ಳುವಷ್ಟು ಬೆಳೆದು ನಿಂತಿದ್ದಾರೆ ಮತ್ತು ಅವರಿಗೆ ತಂತ್ರಜ್ಞಾನವೂ ಅಷ್ಟೇ ಬೆಂಬಲ ನೀಡಿದೆ.

Advertisement

2016 ರ ಕಾಮನ್ ಸೆನ್ಸ್ ಮೀಡಿಯಾ ವರದಿಯ ಫಲಿತಾಂಶಗಳು, 50% ಹದಿಹರೆಯದವರು ಮೊಬೈಲ್ ಗಳಿಗೆ “ವ್ಯಸನಿಯಾಗಿದ್ದಾರೆ” ಎಂದು ವರದಿ ಮಾಡಿದೆ. ಆದರೆ ಸಮೀಕ್ಷೆಯಲ್ಲಿ 59% ಪೋಷಕರು ಮಕ್ಕಳು ತಂತ್ರಜ್ಞಾನಕ್ಕೆ ವ್ಯಸನಿಯಾಗಿದ್ದಾರೆಂದು ನಂಬಿದ್ದಾರೆ. ಈ ಸಮೀಕ್ಷೆಯು 72% ಹದಿಹರೆಯದವರು ಮತ್ತು 48% ಪೋಷಕರು ಟೆಕ್ಸ್ಟ್ ಗಳು, ಸೋಶಿಯಲ್ ನೆಟ್‌ ವರ್ಕಿಂಗ್ ಸಂದೇಶಗಳು ಮತ್ತು ಇತರ ಅಧಿಸೂಚನೆಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಅಗತ್ಯವನ್ನು ಹೊಂದಿದ್ದಾರೆಂದು ತೋರಿಸಿದೆ. 69 ಪ್ರತಿಶತ ಪೋಷಕರು ಮತ್ತು 78% ಹದಿಹರೆಯದವರು ಮೊಬೈಲ್ ಫೋನ್ ನೊಂದಿಗೆ ನಿತಂತರವಾಗಿ ಕನಿಷ್ಠ ಗಂಟೆಗೂ ಹೆಚ್ಚು ಕಾಲ ಕಳೆಯುತ್ತಾರೆ ಎಂದು ತಿಳಿಸಿದೆ.

ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಮುಂಜಾಗ್ರತಾ ಕ್ರಮಕ್ಕೆ ಹವಾಮಾನ ಇಲಾಖೆ ಸೂಚನೆ

2018 ರ ಪ್ಯೂ ರಿಸರ್ಚ್ ವರದಿಯು 45% ಹದಿಹರೆಯದ ವಯಸ್ಸಿನವರು ಇಂಟರ್ನೆಟ್ ಅನ್ನು “ನಿರಂತರವಾಗಿ ಬಳಸುತ್ತಾರೆ” ಎಂದು ಹೇಳಿದೆ. ಮತ್ತು 44 ಪ್ರತಿಶತದಷ್ಟು ಜನರು ದಿನಕ್ಕೆ ಎಚ್ಚು ಕಾಲ ಆನ್ ಲೈನ್ ನಲ್ಲಿ ಇರುತ್ತಾರೆ ಎಂದು ತಿಳಿಸಿದೆ. ಈ ವರದಿಯ ಪ್ರಕಾರ, ಹದಿಹರೆಯದ ಹುಡುಗಿಯರಲ್ಲಿ 50 ಪ್ರತಿಶತ ಹದಿಹರೆಯದ ಹುಡುಗರಿಗೆ ಹೋಲಿಸಿದರೆ, ಶೇಕಡಾ 50 ರಷ್ಟು ಹದಿಹರೆಯದ ಹುಡುಗಿಯರು “ಆಲ್ ಮೋಸ್ಟ್ ಕನ್ಸ್ಟ್ಯಾಂಟ್ಲಿ” ಆನ್‌ ಲೈನ್ ಬಳಕೆದಾರರಾಗಿದ್ದಾರೆ ಎಂದು ಹೇಳಿದೆ.

ಸೆಲ್ ಫೋನ್ ಮತ್ತು ಇಂಟರ್ನೆಟ್ ವ್ಯಸನದ ಲಕ್ಷಣಗಳನ್ನು ಗುರುತಿಸುವುದು ಹೇಗೆ..?

Advertisement

ಫ್ರಾಂಟಿಯರ್ಸ್ ಇನ್ ಸೈಕಿಯಾಟ್ರಿಯಲ್ಲಿ ಪ್ರಕಟವಾದ 2016 ರ ವರದಿಯು ಸಮಸ್ಯಾತ್ಮಕ ಸ್ಮಾರ್ಟ್‌ಫೋನ್ ಬಳಕೆಯನ್ನು ಅಳೆಯಲು ಕಂಪಲ್ಸಿವ್ ಜೂಜು ಮತ್ತು ಮಾದಕ ದ್ರವ್ಯಗಳ ಡಿಎಸ್‌ಎಂ -5 ಮಾನದಂಡಗಳನ್ನು ಬಳಸುವಂತೆ ಸೂಚಿಸುತ್ತದೆ. ಸಮಸ್ಯಾತ್ಮಕ ಸ್ಮಾರ್ಟ್‌ ಫೋನ್ ಬಳಕೆಯನ್ನು ಅಡಿಕ್ಶನ್ ಅಥವಾ ಚಟ  ಎಂದು ವ್ಯಾಖ್ಯಾನಿಸಲಾಗಿಲ್ಲವಾದರೂ, ಇದನ್ನು ವರ್ತನೆಯ ಅಸ್ವಸ್ಥತೆ ಎಂದು ಮೌಲ್ಯಮಾಪನ ಮಾಡಬಹುದು ಎಂದು ಹೇಳಿದೆ.

*ನಿಷೇಧಿತ ಪ್ರದೇಶಗಳಲ್ಲಿ ಅಥವಾ ಅಪಾಯಕಾರಿ ಸಂದರ್ಭಗಳಲ್ಲಿ  ಬಳಕೆ (ಉದಾ. ಚಾಲನೆ ಮಾಡುವಾಗ ಸಂದೇಶ ಕಳುಹಿಸುವುದು)

*ಕುಟುಂಬದ ಹೊರತಾಗಿಯೂ ಅತಿಯಾದ ಫೋನ್ ಬಳಕೆ.

*ನಿದ್ರಾಹೀನತೆ ಅಥವಾ ನಿದ್ರೆಯ ತೊಂದರೆ. ಡಿಸ್ಫೊರಿಕ್ (ದುಃಖ) ಮನಸ್ಥಿತಿ.

*ಫೋನ್ ಕೈಯಲ್ಲಿಲ್ಲವಾದರೇ ಹೆಚ್ಚಿನ ಆತಂಕ ಅಥವಾ ಬೇಸರ.

*ಫೋನ್ ಬಳಸಲು ಸಾಧ್ಯವಾಗದಿದ್ದಾಗ ಆತಂಕದ ಭಾವನೆಗಳು.

ಫೋನ್ ಎಡಿಕ್ಶನ್ ಗೆ ಒಳಗಾದ ನಿಮ್ಮ ಮಕ್ಕಳು ಹೇಗೆ ವರ್ತಿಸುತ್ತಾರೆ. ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದ್ದಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ.

ಫೋನ್ ಬಳಸಲು ಸಾಧ್ಯವಾಗದಿದ್ದಾಗ ನಿಮ್ಮ ಮಕ್ಕಳು ಕೋಪಗೊಳ್ಳುತ್ತಾರೆ, ಆತಂಕಕ್ಕೊಳಗಾಗುತ್ತಾರೆಯೇ?

ಸ್ಮಾರ್ಟ್‌ಫೋನ್ ಬಳಸಲು ಪಠ್ಯ ವಿಚಾರಗಳನ್ನು ಬಿಟ್ಟುಬಿಡುತ್ತಾರೆಯೇ ಅಥವಾ ತಪ್ಪಿಸುತ್ತಾರೆಯೇ?

ವೈಯಕ್ತಿಕ ಆರೈಕೆ (ನೈರ್ಮಲ್ಯ), ಸ್ನೇಹ, ಕುಟುಂಬ ಸಂಬಂಧಗಳು ಅಥವಾ ಶಾಲಾ ಕೆಲಸಗಳಿಗೆ ಸ್ಮಾರ್ಟ್‌ಫೋನ್ ಬಳಕೆಯಿಂದ ಋಣಾತ್ಮಕ ಪರಿಣಾಮ ಬೀರುತ್ತಿದೆಯೇ ?

ನಿದ್ರೆಯ ವಿಚಾರಕ್ಕೆ ಸ್ಮಾರ್ಟ್‌ ಫೋನ್ ಬಳಕೆ ಅಡ್ಡಿಯಾಗುತ್ತದೆಯೇ?

ಆಹಾರ ಪದ್ಧತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿವೆಯೇ?

ಮನಸ್ಥಿತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿವೆಯೇ?

ಇಂತಹ ಕೆಲವು ಪ್ರಶ್ನೆಗಳನ್ನು ನಿಮಗೆ ನೀವು ಕೇಳಿಕೊಂಡಾಗ ನಿಮ್ಮ ಮಕ್ಕಳು ಫೋನ್ ಅಡಿಕ‍್ಶನ್ ಅಥವಾ ವ್ಯಸನಕ್ಕೆ ಒಳಗಾಗಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ದೊರಕಬಹುದಾಗಿದೆ.

ಇದನ್ನೂ ಓದಿ : ಪ್ಲಾಸ್ಮಾ ಥೆರಪಿಯಿಂದ ಸೋಂಕಿತರು ಗುಣಮುಖರಾಗುತ್ತಿದ್ದಾರೆಯೇ..? : ತಜ್ಞರು ಹೇಳಿದ್ದೇನು..?

Advertisement

Udayavani is now on Telegram. Click here to join our channel and stay updated with the latest news.

Next