ಬರೇಲಿ (ಉತ್ತರಪ್ರದೇಶ): ಮನುಕುಲವೇ ನಾಚುವಂತಹ ಅಂತ್ಯಂತ ಹೇಯ ಕೃತ್ಯವೊಂದು ನಡೆದಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹದಿ ಹರೆಯದ ಬಾಲಕಿಯ ಮೇಲೆ ಆಸ್ಪತ್ರೆಯ ಸಿಬಂದಿಯೊಬ್ಬ ಇತರ ನಾಲ್ವರೊಂದಿಗೆ ಸೇರಿ ಗ್ಯಾಂಗ್ ರೇಪ್ ಎಸಗಿದ್ದಾರೆ.
ಶನಿವಾರ ರಾತ್ರಿ ಈ ಕಳವಳಕಾರಿ ಘಟನೆ ನಡೆದಿದ್ದು, 5 ದಿನಗಳ ಹಿಂದೆ ಬಾಲಕಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿದ್ದಳು.
ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಆಸ್ಪತ್ರೆಯ ಸಿಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತರ ನಾಲ್ವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಆಸ್ಪತ್ರೆಯ ಐಸಿಯುನಲ್ಲಿ ಬಾಲಕಿಯೊಬ್ಬಳೇ ಇದ್ದ ವೇಳೆ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಐಸಿಯು ಹೊರಗೆ ಕುಳಿತಿದ್ದ ಸಂತ್ರಸ್ತ ಬಾಲಕಿಯ ಅಜ್ಜಿ ಐವರು ಕೃತ್ಯ ಎಸಗುತ್ತಿರುವುದನ್ನು ನೋಡಿದ್ದಾರೆ. ಈ ವೇಳೆ ಬಾಲಕಿಗೆ ಇಂಜೆಕ್ಷನ್ ಪ್ರಜ್ಞೆ ತಪ್ಪಿಸಲು ಯತ್ನಿಸಿದ್ದಾರೆ. ವಿರೋಧಿಸಲು ಹೋದ ಅಜ್ಜಿಯನ್ನು ಕಟ್ಟಿಹಾಕಿ ಅಟ್ಟಹಾಸ ಮೆರೆದಿದ್ದಾರೆ.
ಅಜ್ಜಿ ಕೂಡಲೇ ಕೂಗಿಕೊಂಡು ಆಸ್ಪತ್ರೆಯಲ್ಲಿದ್ದ ವೈದ್ಯರು ಮತ್ತು ಇತರ ಸಿಬಂದಿಗಳಿಗೆ ವಿಷಯ ತಿಳಿಸಿದ್ದಾರೆ.