Advertisement

ಮದುವೆಗೆ ಹೆತ್ತವರ ಅನುಮತಿ ಸಿಗದ್ದಕ್ಕೆ ಯುವ ಜೋಡಿ ಆತ್ಮಹತ್ಯೆ

06:04 PM Aug 14, 2018 | Team Udayavani |

ಕೋಟ, ರಾಜಸ್ಥಾನ : ತಮ್ಮ ಮದುವೆಗೆ ಹೆತ್ತವರ ಅನುಮತಿ ಸಿಗಲಾರೆಂಬ ಕಾರಣಕ್ಕೆ ಹದಿಹರೆಯದ ಜೋಡಿಯೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಝಲವಾರ್‌ ಜಿಲ್ಲೆಯ ಗಿರಿಧಾರ್‌ಪುರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಆತ್ಮಹತ್ಯೆ ಮಾಡಿಕೊಂಡ ಯುವ ಜೋಡಿಯ ಶವ ಗಿರಿಧಾರ್‌ಪುರದ ಹೊಲವೊಂದರಲ್ಲಿ ಬಿದ್ದುಕೊಂಡಿದ್ದುದು ಪತ್ತೆಯಾಗಿದೆ. ಆದರೆ ಯಾವುದೇ ಡೆತ್‌ ನೋಟ್‌ ಸಿಕ್ಕಿಲ್ಲ ಎಂದು ಝಲಾರ್‌ಪಠಾನ್‌ ಪೊಲೀಸ್‌ ಠಾಣೆಯ ಎಸ್‌ಐ ಜಗದೀಶ್‌ ಮೀಣ ತಿಳಿಸಿದ್ದಾರೆ. 

ಈ ಯುವ ಜೋಡಿ ನಿನ್ನೆ ಸೋಮವಾರ ತಮ್ಮ ಮನೆಯಿಂದ ಓಡಿ ಹೋಗಿತ್ತು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next