Advertisement
ನಗರದ ಸಬ್‌ಜೈಲಿನಲ್ಲಿರುವ ಸೆಷನ್ಸ್ ಪ್ರಕರಣದ ವಿಚಾರಣಾಧಿಧೀನ ಕೈದಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಗಂಗಾಧರ ಅವರು ವಿಚಾರಣೆ ನಡೆಸಿದರು. ಕೈದಿಗಳನ್ನು ಭದ್ರತೆಯಲ್ಲಿ ನ್ಯಾಯಾಲಯಗಳಿಗೆ ಹಾಜರು ಪಡಿಸಬೇಕು. ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿ ಲಭ್ಯವಿಲ್ಲದಿದ್ದಾಗ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾ ಗುವುದಿಲ್ಲ. ಇದರಿಂದಾಗಿ ವಿಚಾರಣೆಗೆ ತೊಂದರೆಯಾಗುತ್ತಿದೆ. ಕೆಲವೊಮ್ಮ ಸಾಕ್ಷಿಗಳನ್ನು ಸಹ ಹಾಜರುಪಡಿಸಲು ತೊಂದರೆಯಾದಾಗ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದು. ಇದರಿಂದ ನ್ಯಾಯಾಲಯದ ಸಮಯ ಉಳಿತಾಯವಾಗಿ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬಹುದಾಗಿದೆ.
Advertisement
ತಂತ್ರಜ್ಞಾನ ಸದ್ಬಳಕೆ; ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಲಿಂದಲೇ ಕೈದಿಗಳ ವಿಚಾರಣೆ
01:55 PM Jun 19, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.