Advertisement
ನಗರದ ಐಎಂಎ ಭವನದಲ್ಲಿ ರಾಯಚೂರು ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರ ಸಂಘ ಹಾಗೂ ಭಾರತೀಯವೈದ್ಯಕೀಯ ಸಂಘ ಸಿಂಧನೂರು ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ “ಗಂಡಾಂತರ (ಆತಂಕದ) ಗರ್ಭ ಹಾಗೂ ಪ್ರಸೂತಿ ನಿರ್ವಹಣೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂಥ ಕಾರ್ಯಾಗಾರಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಬೇಕು. ಅಂದಾಗ ಮಹಿಳೆಯರಲ್ಲಿನ ಸಂದೇಹಗಳನ್ನು ನಿವಾರಣೆ ಮಾಡಲು ಸಾಧ್ಯ ಎಂದರು.
ಶಾಂತಾ ಶರಣ ಸ್ವಾಗತಿಸಿದರು. ಡಾ| ಪದ್ಮಾ ಪಾಟೀಲ ವಂದಿಸಿದರು. ಹಿರಿಯ ಪ್ರಸೂತಿ ತಜ್ಞ ಡಾ| ಜಗದೀಶ ಮಾದಿನೂರ ಅವರನ್ನು ಸನ್ಮಾನಿಸಲಾಯಿತು. ಸ್ಪೇನ್ ದೇಶದ ಹಿರಿಯ ಸ್ತ್ರೀರೋಗ ತಜ್ಞ ಡಾ| ಮ್ಯಾನುಯೆಲ್ ಫೀಲೋಲ್, ನಾಗ್ಪುರದ ಡಾ| ಆಶಿಶ್ ಕುಬಡೆ, ಬಳ್ಳಾರಿಯ ವಿಮ್ಸ್ ಪ್ರಾಧ್ಯಾಪಕ ಡಾ| ವೀರೇಂದ್ರ ಕುಮಾರ, ಬೆಟ್ಟದೂರು ಆಸ್ಪತ್ರೆಯ ಡಾ| ಜಯಪ್ರಕಾಶ ಪಾಟೀಲ ಹಾಗೂ ಡಾ| ರಾಜು ಗಿರಡ್ಡಿ ಉಪನ್ಯಾಸ ನೀಡಿದರು. ಜಿಲ್ಲೆ ಮಾತ್ರವಲ್ಲದೇ ಕೊಪ್ಪಳ, ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳ ಸ್ತ್ರೀರೋಗ ತಜ್ಞರು ಭಾಗವಹಿಸಿದ್ದರು. ಸ್ತ್ರೀರೋಗ ತಜ್ಞರ ಸಂಘದ
ಅಧ್ಯಕ್ಷೆ ಡಾ| ಶ್ರೀಲತಾ ಪಾಟೀಲ, ಸಿಂಧನೂರು ಐಎಂಎ ಕಾರ್ಯದರ್ಶಿ ಡಾ| ವಿಶ್ವನಾಥ ರೆಡ್ಡಿ ಇತರರು ಉಪಸ್ಥಿತರಿದ್ದರು.