ಕಲಬುರಗಿ: ಯಾವುದೇ ಒಂದು ದೇಶ ಅಭಿವೃದ್ಧಿಯಾಗಲು ಆದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಅವಲಂಬಿಸಿದೆ. ಅಮೆರಿಕಾ, ರಷ್ಯಾ, ಜಪಾನನಂತಹ ಮುಂದುವರಿದ ರಾಷ್ಟ್ರಗಳು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ. ಏಕೆಂದರೆ ಅಲ್ಲಿ ತಂತ್ರಜ್ಞಾನ ಸಾಕಷ್ಟು ಪ್ರಗತಿಯಾಗಿದೆ. ಹೀಗಾಗಿ ಯಾವುದೇ ದೇಶ
ವೇಗವಾಗಿ ಅಭಿವೃದ್ಧಿಯಾಗಲು ತಂತ್ರಜ್ಞಾನದ ಪ್ರಗತಿ ಹೊಂದಬೇಕಾದ್ದು ಅಗತ್ಯ ಎಂದು ಉಪನ್ಯಾಸಕ ಎಚ್ .ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆ ಬಸವೇಶ್ವರ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ನೀಡಿ, ಪ್ರತಿಯೊಂದು ದೇಶ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ.
ಹಳೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ಹಳೆ ತಂತ್ರಜ್ಞಾನ ಬಳಸುವುದರಿಂದ ಹಣ, ಸಮಯ, ಶ್ರಮ ಎಲ್ಲ ಹೆಚ್ಚಿಗೆ ಬೇಕಾಗುತ್ತದೆ. ಅದರ ಜತೆಗೆ ಬರುವ ಲಾಭ ತುಂಬಾ ಕಡಿಮೆಯಿರುತ್ತದೆ. ಅಂದರೆ ಹೆಚ್ಚಿನ ಪರಿಶ್ರಮಕ್ಕೆ ಕಡಿಮೆ ಲಾಭ ಪಡೆದಂತಾಗುತ್ತದೆ.
ಅಷ್ಟೇ ಅಲ್ಲದೇ ಮಾರುಕಟ್ಟೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡಿರುವವರ ಪೈಪೋಟಿ ಎದುರಿಸಬೇಕಾಗುವುದು. ಆದ್ದರಿಂದ ಅಭಿವೃದ್ಧಿ ಪಥದಲ್ಲಿ ಸಾಗಲು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಡಾ| ಅಂಬಾರಾಯ ಹಾಗರಗಿ, ಪ್ರಾಚಾರ್ಯ ಮಂಜುನಾಥ ಬರೂಡೆ, ಉಪನ್ಯಾಸಕರಾದ ಪ್ರೀತಿ ನರೋಣಾ, ಸಂಗೀತಾ ನೀಲೂರೆ, ನಾಗಜ್ಯೋತಿ ದೊಡ್ಡಮನಿ ಇದ್ದರು.