Advertisement
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲೇ ಮೊದಲ ಬಾರಿಗೆ ಸಹಕಾರಸಂಘಗಳ ಚಟುವಟಿಕೆಗಳನ್ನು ಗಣಕೀಕರಣಗೊಳಿಸುವ ಕಾರ್ಯದಲ್ಲಿ ಮಾಡಿರುವ ಸಾಧನೆ, ಎಟಿಎಂ ಬಳಕೆ, ಮೊಬೈಲ್ ಬ್ಯಾಂಕಿಂಗ್, ಇ-ಶಕ್ತಿ ಅನುಷ್ಠಾನ ಮತ್ತಿತರ ತಾಂತ್ರಿಕತೆ ಅಳವಡಿಕೆಯಲ್ಲಿ ಮಾಡಿರುವ ಸಾಧನೆಗಾಗಿ ನಬಾರ್ಡ್ ಈ ಪ್ರಶಸ್ತಿ ನೀಡಿದೆ ಎಂದು ತಿಳಿಸಿದರು.
Related Articles
Advertisement
ಬ್ಯಾಂಕ್‌ನಲ್ಲೇ ಹೆಚ್ಚು ಸೌಲಭ್ಯ: ಆಡಳಿತ ಮಂಡಳಿಯ ನಿರಂತರ ಪ್ರಯತ್ನ, ಸಿಬ್ಬಂದಿಯ ಪರಿಶ್ರಮ, ಸಾಲ ವಿತರಣೆ ಜತೆಗೆ ಠೇವಣಿ ಸಂಗ್ರಹ, ಸಾಲ ವಸೂಲಾತಿಗೆ ಕೈಗೊಂಡ ಕ್ರಮಗಳು ಈಗಾಗಲೇ ಪ್ರಶಂಸೆಗೆಪಾತ್ರವಾಗಿವೆ. ಸಹಕಾರ ಬ್ಯಾಂಕ್ ಒಂದರಲ್ಲಿ ವಾಣಿಜ್ಯ ಬ್ಯಾಂಕನ್ನು ಮೀರಿಸುವ ರೀತಿಯಲ್ಲಿ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಮೂಲಕ ನೆಫ್ಟ್, ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವುದರ ಜತೆಗೆ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ತಮ್ಮ ಮನೆ ಬಾಗಿಲಲ್ಲೇ ಹಣ ತಲುಪಿಸಲು ಕೈಗೊಂಡಿರುವ ಮೊಬೈಲ್ ಬ್ಯಾಂಕಿಂಗ್ ವಾಹನ ಸೌಲಭ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಠೇವಣಿದಾರರಿಗೂ ಹಣ ವಾಪಸ್ ಮಾಡಲಾಗದ ಸ್ಥಿತಿ ತಲುಪಿದ್ದ ಬ್ಯಾಂಕ್ ಇಂದು ಸಾವಿರಾರು ಕೋಟಿರೂ. ವಹಿವಾಟು ನಡೆಸುವ ಮೂಲಕ ಪಾರದರ್ಶಕ ವಹಿವಾಟಿಗೂ ಸಾಕ್ಷಿಯಾಗಿದ್ದು, ಗಣಕೀಕರಣ ಕಾರ್ಯ ಜ.15 ರೊಳಗೆ ಪೂರ್ಣಗೊಳ್ಳಲು ಇತ್ತೀಚೆಗೆ ನಡೆದಸಭೆಯಲ್ಲಿ ಕಟ್ಟಪ್ಪಣೆ ನೀಡಲಾಗಿದೆ ಎಂದು ವಿವರಿಸಿದರು.
ಒಟ್ಟಾರೆಯಾಗಿ ಡಿಸಿಸಿ ಬ್ಯಾಂಕ್ ಕುರಿತು ವಿನಾಕಾರಣ ಟೀಕೆ ಮಾಡುತ್ತಿದ್ದವರಿಗೆ ಈಗ ಸಂದಿರುವ ಈ ಗೌರವ ಸೂಕ್ತ ಉತ್ತರ ನೀಡಿದಂತಿದೆ ಎಂದು ತಿಳಿಸಿದರು.