Advertisement

ಟೆಕ್ನೋ ಕಾಮನ್‌ ಐ ಮೊಬೈಲ್‌ ಬಿಡುಗಡೆ

11:58 AM Jan 23, 2018 | |

ನವದೆಹಲಿ: ಟ್ರಾನ್ಸಿಷನ್‌ ಇಂಡಿಯಾ ಸಂಸ್ಥೆಯ ಟೆಕ್ನೋ ಮೊಬೈಲ್‌ ನೂತನ ಕ್ಯಾಮರಾ ಕೇಂದ್ರಿತ “ಕಾಮನ್‌ ಐ’ ಸರಣಿಯ ಪ್ರೀಮಿಯಂ ಸ್ಮಾರ್ಟ್‌ಫೋನ್‌  ಅನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಫೋನ್‌ ಅನಾವರಣ ಕಾರ್ಯಕ್ರಮದಲ್ಲಿ ಟ್ರಾನ್ಸಿಷನ್‌ ಹೋಲ್ಡಿಂಗ್ಸ್‌ನ ಉಪಾಧ್ಯಕ್ಷ ಲಿನ್‌ ಕ್ವಿನ್‌ ಮಾತನಾಡಿ,  ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ. ಅದರಲ್ಲೂ ಫೋನ್‌ ಮಾರುಕಟ್ಟೆ ಭಾರತದಲ್ಲಿ ಒಳ್ಳೆಯ ಅಭಿವೃದ್ಧಿ ಕಂಡಿದೆ. 

Advertisement

ಇಂದು ಥಿಂಕ್‌ ಗ್ಲೋಬಲಿ, ಆ್ಯಕ್ಟ್ ಲೋಕಲಿ ತತ್ವದಡಿ ಕಾಮನ್‌-ಐ ಸ್ಮಾರ್ಟ್‌ ಫೋನ್‌ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಇಲ್ಲಿನ ಮಾರು ಕಟ್ಟೆಯಲ್ಲಿರುವ  ಟಾಪ್‌ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಫೋನ್‌ ಮುಂದಿನ ದಿನಗಳಲ್ಲಿ ಸ್ಥಾನ ಪಡೆಯಲಿದೆ ಎಂದರು. ಟ್ರಾನ್ಸಿಷನ್‌ ಇಂಡಿಯಾ ಮಾರುಕಟ್ಟೆ ಹಿರಿಯ  ಉಪಾಧ್ಯಕ್ಷ ಗೌರವ್‌ ಟಿಕೂ ಮಾತನಾಡಿ, ಭಾರತೀಯ ಗ್ರಾಹಕರನ್ನು ದೃಷ್ಟಿಯಲ್ಲಿರಿಸಿಕೊಂಡು ಕಾಮನ್‌-ಐ ಫೋನ್‌ ಅನ್ನು ರೂಪಿಸಲಾಗಿದೆ.

ಕಡಿಮೆ  ಬೆಲೆಯಲ್ಲಿ ಎಲ್ಲ ಆಧುನಿಕ ಸೌಕರ್ಯಗಳುಳ್ಳ ಅತ್ಯುತ್ತಮ ಫೋನ್‌ ಇದಾಗಿದೆ. ಟೆಕ್ನೋ ಫುಲ್‌ ಡಿಸ್‌ಪ್ಲೇವುಳ್ಳ 13 ಮೆಗಾಪಿಕ್ಸಲ್‌ ಫ್ರಂಟ್‌ ಮತ್ತು ರಿಯರ್‌  ಕ್ಯಾಮೆರಾವುಳ್ಳ ಫೋನ್‌ ಬೆಲೆ ಕೇವಲ 8,990 ರೂ. 3ಜಿಬಿ ರ್ಯಾಮ್‌ ಮತ್ತು 32 ಜಿಬಿ ರೊಮ್‌, 3050 ಎಂಎಹೆಚ್‌ ಬ್ಯಾಟರಿ, 1.3 ಜಿಹೆಚ್‌ಜೆಡ್‌ ಕ್ವಾಡ್‌  ಕೋರ್‌ ಪ್ರೊಸೆಸ್ಸರ್‌ ಇದಕ್ಕಿದೆ. ಶಾಂಪೇನ್‌ ಗೋಲ್ಡ್‌, ಮಿಡ್‌ನೈಟ್‌ ಬ್ಲಾಕ್‌ ಹಾಗೂ ಸಿಟಿ ಬ್ಲೂ ಬಣ್ಣಗಳಲ್ಲಿ ದೊರೆಯಲಿದೆ. ಫೆಬ್ರವರಿ ಮೊದಲ ವಾರದಿಂದ  ದೇಶಾದ್ಯಂತ 30 ಸಾವಿರ ರಿಟೈಲ್‌ ಮಳಿಗೆಗಳಲ್ಲಿ ಲಭ್ಯವಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next