ವಿಜಯಪುರ: ವಿದ್ಯಾರ್ಥಿಗಳು ತಾಂತ್ರಿಕ ವಿಷಯದಲ್ಲಿ ನೈಪುಣ್ಯತೆ ಬೆಳೆಸಿಕೊಳ್ಳುವ ಜೊತೆಗೆ ಸದಾ ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕು ಎಂದು ಬಾಗಲಕೋಟೆ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ| ಎಸ್.ಎನ್. ಕುರಬೆಟ್ ಹೇಳಿದರು.
ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆ ತಾಂತ್ರಿಕ ಮೆಕ್ಯಾನಿಕಲ್ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ತಾಂತ್ರಿಕ ಪ್ರಬಂಧ ಮಂಡನೆ, ಪ್ರೊಜೆಕ್ಟ್ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಡಿ ಕಲಿ ತತ್ವದ ಮೂಲಕ ಪ್ರತಿಯೊಂದನ್ನು ಕಾರ್ಯಗತಗೊಳಿಸಬೇಕು. ಕೇವಲ ಪುಸ್ತಕ ಒದುವುದರಿಂದ ತಾಂತ್ರಿಕ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವಿಲ್ಲ. ಪ್ರಾಯೋಗಿಕ ರಚನೆ ಕಡೆಗೆ ಸದಾ ಗಮನ ಹರಿಸಬೇಕು. ಸ್ವಂತಿಕೆ ಉಪಯೋಗಿಸಿಕೊಂಡು ಹೊಸದನ್ನು ಸೃಷ್ಟಿಸಲು ಸದಾ ಮಿಡಿಯುತ್ತಿರಬೇಕು. ಬದುಕು ರೂಪಿಸಿಕೊಳ್ಳಲು ಇದು ಸಹಕಾರಿ ಆಗಬಲ್ಲದು. ಸಿಕ್ಯಾಬ್ ಶಿಕ್ಷಣ ಸಂಸ್ಥೆ ರಾಷ್ಟ್ರಮಟ್ಟದ ಪ್ರದರ್ಶನ ಏರ್ಪಡಿಸಿ ಉತ್ತಮ ಕಾರ್ಯ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಕ್ಯಾಬ್ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ಎಸ್.ಜೆ. ಅರವಿಕರ ಮಾತನಾಡಿ, ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಹೊಸದನ್ನು ಕಂಡು ಹಿಡಿಯಲು ಶ್ರಮಿಸಬೇಕು. ಇಂದಿನ ಕಾಲದಲ್ಲಿ ಸಾಕಷ್ಟು ಅವಕಾಶಗಳಿದ್ದು, ಸೃಜನಶೀಲತೆ ಪ್ರದರ್ಶಿಸಲು ವೇದಿಕೆಗಳು ಸಿದ್ಧವಾಗಿವೆ. ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ನಾವಿನ್ಯತೆ ಕಡೆಗೆ ಮನ ಮಿಡಿಯುತ್ತಿರಬೇಕು ಎಂದರು.
ವಿಭಾಗದ ಮುಖ್ಯಸ್ಥ ಡಾ| ಸೈಯದ್ ಅಬ್ಟಾಸ್ ಅಲಿ, ಸಂಯೊಜಕ ಆಸೀಫ್ ದೊಡಮನಿ ಮಾತನಾಡಿದರು. ಉಪ ಪ್ರಾಂಶುಪಾಲ ಡಾ| ನುರುಲ್ಲಾ ಶರೀಫ್, ಶಶಿರ ಕೆಂಗನಾಳ, ಸಚಿನ ಪಾಂಡೆ, ಎಸ್.ಟಿ. ಇನಾಮದಾರ, ಪ್ರೊ| ಎಸ್.ಎಸ್. ಸಾದತ್, ಪ್ರೊ| ಗುರು ಬಡಿಗೇರ, ಪ್ರೊ| ಸುನೀಲ ಠಾಣೆದ, ಪ್ರೊ| ದಿಲೀಪ ಸುತ್ರಾವೆ, ಪ್ರೊ| ಶಶಿಕಾಂತ ನಿಂಬಾಳಕರ್, ಪ್ರೊ| ರಫಿಕ್ ಮಾನ್ವಿ, ಪ್ರೊ| ಅಬ್ಟಾಸಲಿ ಬಾಗವಾನ, ಪ್ರೊ| ಅಲ್ತಾಫ್ ಬಾಗವಾನ, ಪ್ರೊ| ಸಮೀರ ಸೇರಿದಂತೆ ಇತರರು ಇದ್ದರು. ಎರಡು ದಿನಗಳ ಕಾಲ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾಡಿದ ಪ್ರೊಜೆಕ್ಟ್ ಪ್ರದರ್ಶನ, ಪ್ರಬಂಧ ಮಂಡನೆ, ಇಂಜಿನ್ ಜೋಡಣೆ ಹಾಗೂ ಮರುಜೋಡಣೆ, ತಾಂತ್ರಿಕ ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ಹಲವಾರು ಸ್ಪರ್ಧೆಗಳು ನಡೆದವು. ಸೊಲ್ಲಾಪುರ, ಬನ್ನಟ್ಟಿ, ಬಾಗಲಕೋಟೆ ಸೇರಿದಂತೆ ವಿವಿಧ ರಾಜ್ಯಗಳಿಂದ ತಾಂತ್ರಿಕ ವಿದ್ಯಾರ್ಥಿಗಳು ಉಪನ್ಯಾಸಕರು ಪಾಲ್ಗೊಂಡಿದ್ದರು.