Advertisement

ತಾಂತ್ರಿಕ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ

12:03 PM May 18, 2018 | Team Udayavani |

ಕೆ.ಆರ್‌.ಪುರ: ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅನಾವರಣಗೊಳಿಸಲು ಕೆಆರ್‌ಪುರದ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯ ಉತ್ತಮ ವೇದಿಕೆ ನಿರ್ಮಿಸಿಕೊಟ್ಟಿದ್ದು, ಎಂಜಿನಿಯರಿಂಗ್‌, ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿಗಳು ತಯಾರಿಸಿರುವ ಶೈಕ್ಷಣಿಕ ಯೋಜನೆಗಳ ಪ್ರಾತ್ಯಕ್ಷಿಕೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Advertisement

ತಿಂಗಳಿನಿಂದ ಕಷ್ಟಪಟ್ಟ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ದೊರಕಿದ್ದರಿಂದ ತಮ್ಮ ಪ್ರಾತ್ಯಕ್ಷಿಕೆಗಳಾದ ಸೋಲಾರ್‌ ಲೈಟ್‌, ರೈತರ ಪರಿಕರಗಳ ಪ್ರಾತ್ಯಕ್ಷಿಕೆ, ತಂತ್ರಜಾnನ ಪಾರ್ಕಿಂಗ್‌ ವ್ಯವಸ್ಥೆ, ಮಳೆ ನೀರಿನ ಕೊಯ್ಲು, ಕಸದಿಂದ ರಸ, ರೋಬಟ್‌ ಮೋಟರ್‌ಗಳು ಸೇರಿದಂತೆ ನಗರದಲ್ಲಿನ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಕಲ್ಪಿಸುವ ವಿವಿಧ ಬಗೆಯ ಸಮಾಜಕ್ಕೆ ಅಗತ್ಯವಿರುವ ಪ್ರಾಜೆಕ್ಟ್ಗಳ ಪ್ರದರ್ಶಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್‌ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿನ ರೈತರ ಅಭಿವೃದ್ಧಿಗಾಗಿ ಹಾಗೂ ಆಧುನಿಕ ತಂತ್ರಜಾnನ ಬಳಸಿ ವ್ಯವಸಾಯ ಉತ್ತೇಜನಕ್ಕಾಗಿ ವಿದ್ಯಾರ್ಥಿಗಳು ಉತ್ತಮ ಪ್ರಾಜೆಕ್ಟ್ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳು ನಿರ್ಮಾಣ ಮಾಡಿರುವ ಪ್ರಾಜೆಕ್ಟ್ಗಳಲ್ಲಿ ಉತ್ತಮವಾದ ಪ್ರಾಜೆಕ್ಟ್ ಆಯ್ಕೆ ಮಾಡಿ ಮುಂದಿನ ಹಂತಕ್ಕೆ ಕಳುಹಿಸಿಕೊಡಲಾಗುವುದು. ಅಲ್ಲಿ ನಮ್ಮ ವಿದ್ಯಾರ್ಥಿಗಳ ಪ್ರಾಜೆಕ್ಟಗಳನ್ನು ಕಂಪನಿಗಳು ಆಯ್ಕೆಮಾಡಿಕೊಂಡು ಸಮಾಜದ ಒಳತಿಗಾಗಿ ಬಳಸಲಿವೆ.

ಮೊದಲನೇ ಸೆಮಿಸ್ಟರ್‌ನಿಂದ 6ನೇ ಸೆಮಿಸ್ಟರ್‌ ವರೆಗೆ ಮಿನಿ ಪ್ರಾಜೆಕ್ಟ್ 8 ನೇ ಸೆಮಿಸ್ಟರ್‌ ನಲ್ಲಿ ಮೇಜರ್‌ ಪ್ರಾಜೆಕ್ಟ್ ಮಾಡಲಾಗುತ್ತದೆ. ಸಮಾಜಕ್ಕೆ ಬೇಕಿರುವುದರ ಬಗ್ಗೆ ಪ್ರಾಜೆಕ್ಟ್ಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಗುತ್ತದೆ ಎಂದರು. 

Advertisement

ನಮ್ಮಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಕೇಂಬ್ರಿಡ್ಜ್ ಕಾಲೇಜು ಮಾಡುತ್ತಿದ್ದು, ಇದರಿಂದಾಗಿ ಮತ್ತಷ್ಟು ಸಾಧನೆ ಮಾಡುವ ಉತ್ಸಾಹ ನಮ್ಮಲ್ಲಿ ತುಂಬುತ್ತಿದೆ ಎಂದು ವಿದ್ಯಾರ್ಥಿನಿ ಅಶ್ವಿ‌ನಿ ಸಂತಸ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next