ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದ ಕಾರಣದಿಂದ ರನ್ ವೇ ಲೈಟಿಂಗ್ನಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ರವಿವಾರ ರಾತ್ರಿ ಕೆಲ ಹೊತ್ತು ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.
ರಾತ್ರಿ 7:45ರ ವೇಳೆಗೆ ಸಮಸ್ಯೆ ಗಮನಕ್ಕೆ ಬಂದಿದ್ದು, 9:30ರ ವೇಳೆಗೆ ಸರಿಪಡಿಸಲಾಗಿದ್ದು, ವಿಮಾನ ಹಾರಾಟ ಪುನರಾರಂಭಗೊಂಡಿದೆ. ಎಂಜಿನಿಯರಿಂಗ್ ತಂಡ ಯಶಸ್ವಿಯಾಗಿ ಸಮಸ್ಯೆಯನ್ನು ಸರಿಪಡಿಸಿದೆ.
ಮುಂಬಯಿನಿಂದ ಆಗಮಿಸಿ ಮಂಗಳೂರಿನಲ್ಲಿ ಇಳಿಯಬೇಕಾಗಿದ್ದ ವಿಮಾನವನ್ನು ಎಟಿಸಿ ಸೂಚನೆ ಮೇರೆಗೆ ಕಣ್ಣೂರು ನಿಲ್ದಾಣಕ್ಕೆ ಕಳುಹಿಸಲಾಗಿದೆ. 8.05ಕ್ಕೆ ಬಹ್ರೈನ್ಗೆ ತೆರಳಬೇಕಾಗಿದ್ದ ವಿಮಾನವನ್ನು ಕೆಲಹೊತ್ತು ತಡೆಹಿಡಿಯಲಾಗಿತ್ತು. ಚೆನ್ನೈ ಮತ್ತು ಬೆಂಗಳೂರಿನಿಂದ ಆಗಮಿಸಬೇಕಾದ ವಿಮಾನ ತಡವಾಗಿದೆ.
ಇದನ್ನೂ ಓದಿ: ಕಟಪಾಡಿ – ಕಾಪು: ಮಟ್ಕಾ ಅಡ್ಡೆಗೆ ದಾಳಿ