ಮುಂಬಯಿ: ಸಮಾಜ ಸೇವಕರಿಗೆ ನಿಂದನೆ, ಅವಮಾನಗಳೇ ಹೆಚ್ಚುತ್ತಿರುವ ಈ ಕಾಲದಲ್ಲಿ ಸೇವ ಕನಿಗೆ ಸಮಾಧಾನಕರ ಸೇವೆ ಶ್ರೇಷ್ಠ ವಾದುದು. ಸಮುದಾಯದ ಸರ್ವೋನ್ನತಿಗಾಗಿ ಪ್ರತೀಯೋರ್ವರ ಸಮಾಜ ಸೇವೆ ಅವಶ್ಯವಾಗಿದೆ. ಮೂಲ ಭೂತ ಸೌಕರ್ಯಗಳೊಂದಿಗೆ ಆರೋಗ್ಯದಾಯಕ ಸಮಾಜದ ನಿರ್ಮಾಣಕ್ಕಾಗಿ ಸೇವಾ ನಿರತ ಈ ಸಂಸ್ಥೆಯೂ ಸಮೂದಾಯದ ಅಭಿವೃದ್ಧಿಗಾಗಿ ಶ್ರಮಿಸಿದೆ. ಬಹು ಚಿಕ್ಕ ಸಮೂದಾಯವೊಂದು ಇಂತಹ ಮಹಾತ್ಕರ್ಯ ಸಾಧಿಸಿ ಇತರ ಸಮಾಜದಂತೆ ತಲೆಯೆತ್ತಿ ನಿಂತಿರು ವುದು ಈ ಸಂಸ್ಥೆಯ ಸ್ಥಾಪಕರ ಶ್ರಮಕ್ಕೆ ಸಂದ ಗೌರವವಾಗಿದೆ. ಇದು ಸಮಗ್ರ ಸಮಾಜಕ್ಕೂ ವರವಾಗಿದೆ ಎಂದು ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್. ಬೆಳ್ಚಡ ಅವರು ತಿಳಿಸಿದರು.
ಸೆ. 23 ರಂದು ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವ ಬಿಲ್ಲವರ ಭವನದ ಕಿರು ಸಭಾಗೃಹದಲ್ಲಿ ನಡೆದ ತೀಯಾ ಸಮಾಜ ಮುಂಬಯಿ ಇದರ 74 ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘಕ್ಕೆ ತಮ್ಮ ಜೀವನ ಮುಡಿಪಾಗಿಸಿಟ್ಟ ಹಿರಿಯರನ್ನು ನೆನಪಿಸುತ್ತಾ, ಸಂಸ್ಥೆಯನ್ನು ಮುನ್ನಡೆಸಿ ವಿಶೇಷವಾಗಿ ಆರೋಗ್ಯನಿಧಿ ಮತ್ತು ವಿದ್ಯಾನಿಧಿಯನ್ನು ಒಗ್ಗೂಡಿಸಿ ಒಂದಿಷ್ಟು ನಿಧಿಯನ್ನು ಕ್ರೋಡೀಕರಿಸಿ ದ್ದನ್ನು ಸಭೆಗೆ ತಿಳಿಸಿದರು. ಮನುಷ್ಯನು ತನ್ನ ಜೀವನದಲ್ಲಿ ಅಹಂಕಾರವನ್ನು ಬಿಟ್ಟು ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬದುಕಿ ಇತರರನ್ನು ಬದುಕಲು ಪ್ರೇರಕರಾಗಬೇಕು. ಅವಾಗ ತಮ್ಮ ಮಕ್ಕಳೂ ಅದೇ ಬದುಕುಶೈಲಿ ಅನುಸರಿಸಿ ಬಾಳಲು ಸಾಧ್ಯವಾಗುವುದು. ಮುಂಬಯಿ ಜನತೆಯ ಒತ್ತಡದ ಜೀವನದ ಮಧ್ಯೆಯೂ ಸಮಾಜ ಬಂಧುಗಳನ್ನು ಒಗ್ಗೂಡಿಸಲು ಸಂಸ್ಥೆಗಳು ಪ್ರಯತ್ನ ಮಾಡುತ್ತಿವೆ. ನಾವೂ ಒಗ್ಗಟ್ಟಿನಿಂದ ಈ ಸಂಸ್ಥೆಯ ಅಮೃತ ಮಹೋತ್ಸವಕ್ಕೆ ಸನ್ನದ್ಧರಾಗಬೇಕು. ಆ ಉತ್ಸಹ ನಿಜವಾಗಿಯೂ ಒಂದು ಮೈಲಿಗಲ್ಲು ಆಗಿ ಭವಿಷ್ಯತ್ತಿನ ಪೀಳಿಗೆಗೆ ಮಾದರಿ ಯಾಗಲಿದೆ ಎಂದರು.
ವಿಶ್ವಸ್ತ ಮಂಡಳಿ ಕಾರ್ಯಾಧ್ಯಕ್ಷ ರೋಹಿದಾಸ್ ಎಸ್. ಬಂಗೇರ, ವಿಶ್ವಸ್ಥ ಸದಸ್ಯ ಶಂಕರ್ ಸಿ. ಸಾಲ್ಯಾನ್, ಉಪಾಧ್ಯಕ್ಷ ಸುಧಾಕರ್ ಉಚ್ಚಿಲ್, ಸಂಸ್ಥೆಯ ಮುಖವಾಣಿ ತೀಯಾ ಬೆಳಕು ಸಂಪಾದಕ ಶ್ರೀಧರ್ ಎಸ್. ಸುವರ್ಣ, ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಬಾಬು ಕೆ. ಕೋಟ್ಯಾನ್, ಮಹಿಳಾಧ್ಯಕ್ಷೆ ಲತಾ ಡಿ. ಉಳ್ಳಾಲ್, ಪೂರ್ವ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಬಿ. ಎಂ, ಮಹಿಳಾಧ್ಯಕ್ಷೆ ಪದ್ಮಿನಿ ಕೆ. ಕೋಟೆಕರ್, ರವೀಂದ್ರ ಎಸ್. ಮಂಜೇಶ್ವರ್, ಮಾಜಿ ಅಧ್ಯಕ್ಷ ಕೆ. ಪಿ. ಅರವಿಂದ್ ವೇದಿಕೆಯಲ್ಲಿದ್ದರು.
ಶ್ರೀಧರ್ ಎಸ್. ಸುವರ್ಣ ಪ್ರಾಯೋಜಕತ್ವದ ಸುಂದರ್ ಸುವರ್ಣ ಸ್ಮಾರಣಾರ್ಥ ರೋಲಿಂಗ್ ಟ್ರೋಫಿಯನ್ನು ಎಸ್‌ಎಸ್‌ಸಿ ಅತ್ಯಧಿಕ ಅಂಕಗಳಿಸಿದ ಮಾ| ಜತೀನ್ ತಾರನಾಥ್ ಕರ್ಕೇರ, ಚಂದ್ರಶೇಖರ್ ಆರ್. ಬೆಳ್ಚಡ ಪ್ರಾಯೋಜಕತ್ವದ ಕಟೀಲು ರಾಮ ಬೆಳ್ಚಡ ಸ್ಮಾರಣಾರ್ಥ ರೋಲಿಂಗ್ ಟ್ರೋಪಿಯನ್ನು ಎಚ್‌ಎಸ್‌ಸಿ ಪ್ರತಿಭೆ ಕು| ಶೃತಿ ಪಿ. ಉಳ್ಳಾಲ್, ಸ್ವರ್ಣ ಪದಕ ಸಹಿತ ಮತ್ತು ರಾಜೇಶ್ ಎಸ್. ಸುವರ್ಣ ಪ್ರಾಯೋಜಕತ್ವದ ಎಸ್. ಟಿ. ಸುವರ್ಣ ಭಾಂಡೂಪ್ ಸ್ಮಾರಣಾರ್ಥ ರೋಲಿಂಗ್ ಟ್ರೋಫಿ ಯನ್ನು ಬಿಇ ಕಂಪ್ಯೂಟರ್ ಪ್ರತಿಭೆ ಐಶ್ವರ್ಯ ಪಿ.ಬಂಗೇರ ಅವರಿಗೆ ಪ್ರದಾನಿಸಲಾುತು. ಸದಸ್ಯರ ಪ್ರತಿಭಾನ್ವಿತ ಮಕ್ಕನ್ನು ಗೌರವಿಸಲಾಯಿತು.
ಗ್ಲೋಬಲ್ ಪೀಸ್ ಫೌಂಡೇಶನ್ ಸಂಸ್ಥೆ ಮತ್ತು ಇಂಟರ್‌ನೆàಶನಲ್ ಕಲ್ಚರಲ್ ಫೆಸ್ಟ್ (ಐಸಿಎಫ್) ಸಂಸ್ಥೆಗಳಿಂದ ವಾಂಟನ್‌ನಲ್ಲಿ ಇಂಟರ್‌ನೆàಶನಲ್ ಮ್ಯಾನ್ ಆಫ್ ದ ಈಯರ್ ಪ್ರಶಸ್ತಿಗೆ ಭಾಜನರಾದ ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್. ಬೆಳ್ಚಡ ಮತ್ತು ದಿವಿಜಾ ಚಂದ್ರಶೇಖರ್ ದಂಪತಿಯನ್ನು ಪದಾಧಿಕಾರಿಗಳು ಅಭಿನಂದಿಸಿ ಗೌರವಿಸಿದರು.
ಸಭೆಯಲ್ಲಿ ವಿಶ್ವಸ್ತ ಸದಸ್ಯರು, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಜರಿದ್ದರು. ರೂಪೇಶ್ ವೈ. ರಾವ್, ಸಾಗರ್ ಕಟೀಲ್, ಬಾಬು ಕೆ. ಬೆಳ್ಚಡ, ಉಮೇಶ್ ಮಂಜೇಶ್ವರ್, ಪದ್ಮಿನಿ ಕೆ. ಕೋಟೆಕರ್, ರಮೇಶ್ ಎನ್. ಉಳ್ಳಾಲ್, ಮೋಹನ್ ಬಿ.ಎಂ, ದಿವಿಜಾ ಚಂದ್ರಶೇಖರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕು| ಪವಿ ಪ್ರಕಾಶ್ ಕೋಟ್ಯಾನ್ ಮತ್ತು ಕು| ವಿಭಾ ಬಾಲಕೃಷ್ಣ ಕೋಟ್ಯಾನ್ ಪ್ರಾರ್ಥನೆಗೈದರು. ಗೌರವ ಕೋಶಾಧಿಕಾರಿ ರಮೇಶ್ ಎನ್. ಉಳ್ಳಾಲ್ ರ್ವಾಕ ಲೆಕ್ಕಪತ್ರ ಮಂಡಿಸಿದರು. ಗೌ| ಪ್ರ| ಈಶ್ವರ್ ಎಂ.ಐಲ್ ಸ್ವಾಗತಿಸಿ ಗತ ಮಹಾಸಭೆ ವರದಿ ವಾಚಿಸಿ ವಂದಿಸಿದರು.
ಚಿತ್ರ- ವರದಿ : ರೋನ್ಸ್ ಬಂಟ್ವಾಳ್