Advertisement

ಸಚಿನ್ ಧನಪಾಲ್ ನಟನೆಯ ‘ಚಾಂಪಿಯನ್’ಚಿತ್ರದ ಟೀಸರ್ ಬಿಡುಗಡೆ

06:22 PM Aug 17, 2022 | Team Udayavani |

ಗಂಗಾವತಿ: ಕನ್ನಡ ಸಿನೆಮಾಗಳನ್ನು ಟಾಕೀಸ್‌ಗಳಲ್ಲಿ ನೋಡುವ ಮೂಲಕ ಚಿತ್ರಕಲಾವಿರನ್ನು ಪ್ರೋತ್ಸಾಹಿಸುವಂತೆ ಚಿತ್ರನಟ ಸಚಿನ್ ಧನಪಾಲ್ ಮನವಿ ಮಾಡಿದರು. ನಗರದ ಜಗಜೀವನರಾಂ ವೃತ್ತದಲ್ಲಿ ತಾವು ನಟಿಸಿದ ”ಚಾಂಪಿಯನ್” ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.

Advertisement

ಕನ್ನಡ ಚಿತ್ರರಂಗಕ್ಕೆ ತನ್ನದೇ ಆದಂತಹ ಇತಿಹಾಸ ಗೌರವವಿದೆ. ಮೇರು ನಟರಾದ ಡಾ|ರಾಜಕುಮಾರ್, ಅಂಬರೀಶ್ , ವಿಷ್ಣುವರ್ಧನ್ ಸೇರಿ ಅನೇಕ ಹಿರಿಯ ನಟರು ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದಾರೆ. ಇದೇ ಪ್ರಥಮ ಭಾರಿಗೆ ಉತ್ತರ ಕರ್ನಾಟಕದ ಶಿವಾನಂದ ನಿಲಣ್ಣವರ್ ನಿರ್ಮಾಣದ ಚಿತ್ರ ಚಾಂಪಿಯನ್ ಚಿತ್ರದಲ್ಲಿ ಎಲ್ಲಾ ಹಿರಿಯ ನಟರ ಜತೆ ನಾನು ನಟನೆ ಮಾಡಿದ್ದು ಪ್ರತಿಯೊಬ್ಬ ಕನ್ನಡಿಗ ಟಾಕೀಸ್‌ಗೆ ತೆರಳಿ ಸಿನೆಮಾ ನೋಡುವ ಮೂಲಕ ಇತರರಿಗೂ ಹೇಳುವಂತೆ ಮನವಿ ಮಾಡಿದರು.

ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಹೇರೂರು ಮಾತನಾಡಿ, ಕನ್ನಡ ಭಾಷೆಯ ಉಳಿಯಲು ಕನ್ನಡ ಸಿನೆಮಾಗಳಿಗೆ ಪ್ರೋತ್ಸಾಹ ನೀಡಬೇಕು. ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಸಿನೆಮಾಗಳು ಕನ್ನಡದಲ್ಲಿ ತಯಾರಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಚಾಂಪಿಯನ್ ಸಿನೆಮಾ ನೂರು ದಿನ ಪ್ರದರ್ಶನಗೊಳ್ಳಲಿ ಎಂದರು.

ಕಾರ್ಯಕ್ರಮದ ಆಯೋಜಕ ಮುಕ್ತರ್, ಖ್ಯಾತ ಹಾಸ್ಯ ಕಲಾವಿದ ನರಸಿಂಹ ಜೋಶಿ, ಕಸಾಪ ತಾಲೂಕು ಅಧ್ಯಕ್ಚ ಶ್ರೀನಿವಾ ಅಂಗಡಿ,ಲಿಂಗಾರೆಡ್ಡಿ, ಆಲೂರು, ಸದಾನಂದಶೇಟ್, ಖಾಜವಲಿ, ಡಾ|ಶಿವಕುಮಾರ ಮಾಲೀಪಾಟೀಲ್,ಟಿ.ಆಂಜನೇಯ, ನ್ಯಾಯವಾದಿ ಎಚ್.ಎಂ.ಮಂಜುನಾಥ , ಪತ್ರಕರ್ತ ಕೆ.ನಿಂಗಜ್ಜ,ಎ.ಕೆ.ಮಹೇಶಕುಮಾರ ಸೇರಿ ಅನೇಕರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next