Advertisement

ಅನಿರ್ಧರಿತ ಮತದಾರರ ಮತಕ್ಕೆ ಕಸರತ್ತು

01:01 AM Dec 05, 2019 | Team Udayavani |

ಬೆಂಗಳೂರು: ಅನರ್ಹ 13 ಶಾಸಕರ ರಾಜಕೀಯ ಭವಿಷ್ಯ ಹಾಗೂ ರಾಜ್ಯ ಬಿಜೆಪಿ ಸರ್ಕಾರದ  ಅಳಿವು, ಉಳಿವಿಗೆ ಉಪಚುನಾವಣೆ ನಿರ್ಣಾಯಕವೆನಿಸಿದೆ. ಅಭ್ಯರ್ಥಿಗಳ ಗೆಲುವಿನಲ್ಲಿ ಮಹತ್ವದ ಪಾತ್ರ
ವಹಿಸಲಿದ್ದಾರೆ ಎನ್ನಲಾದ “ಅನಿರ್ಧರಿತ ಮತದಾರರ’ ವಿಶ್ವಾಸ ಗಳಿಸಲು ಬಿಜೆಪಿ ಕೊನೆಯ ಕ್ಷಣ‌ವರೆಗೆ
ಇನ್ನಿಲ್ಲದ ಕಸರತ್ತು ನಡೆಸಿದ್ದು, ಎಷ್ಟರ ಮಟ್ಟಿಗೆ ನೀಡಲಿದೆ ಎಂಬುದನ್ನು ಕಾನೋಡಬೇಕಿದೆ. ಪ್ರತಿ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳನ್ನು ಬೆಂಬಲಿಸಲಿದ್ದಾರೆ ಎಂದು ಗುರುತಿಸಲಾಮತದಾರರನ್ನು ಹೊರತುಪಡಿಸಿ ತಟಸ್ಥವಾಗಿರುವಂತೆ ಕಂಡರೂ ಕೊನೆಕ್ಷಣದಲ್ಲಿ ಅಳೆದು ತೂಗಿ ಮತದಾನ ಮಾಡುವ
“ಅನಿರ್ಧರಿತ ಮತದಾರರು’ ಅಭ್ಯರ್ಥಿಗಳ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬ ಮಾತಿದೆ.

Advertisement

ಹಾಗಾಗಿ, ಈ ಮತದಾರರನ್ನು ಸೆಳೆದು ಗೆಲುವಿನ ಹಾದಿ ಸುಗಮಗೊಳಿಸಿಕೊಳ್ಳಲು ಬಿಜೆಪಿ ನಾಲ್ಕು ದಿನದಿಂದ ಕಸರತ್ತು ನಡೆಸಿದೆ. ಉಪಚುನಾವಣೆಯಲ್ಲಿ 13 ಅನರ್ಹ ಶಾಸಕರು ಬಿಜೆಪಿಯಿಂದ  ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ 15 ಕ್ಷೇತ್ರಗಳಲ್ಲೂ ರಾಜಕೀಯ ಚಿತ್ರಣ ಬದಲಾಗಿದೆ. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಅನರ್ಹಗೊಂಡ ಶಾಸಕರ ಪೈಕಿ 10 ಮಂದಿ ಬಿಜೆಪಿಯಿಂದ ಉಪಚುನಾವಣೆಗೆ ಸ್ಪರ್ಧಿಸಿದ್ದಾರೆ. ಜೆಡಿಎಸ್‌ನ ಮೂವರು ಅನರ್ಹ ಶಾಸಕರು ಇದೀಗ ಬಿಜೆಪಿಯಿಂದದೇ ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ.

ಜೆಪಿಯಿಂದ ಗೆದ್ದು ಅನರ್ಹಗೊಂಡಿರುವ ಆರ್‌.ಶಂಕರ್‌ ರಾಣೆಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಿಲ್ಲ. ಹಾಗೆಯೇ, ಕಾಂಗ್ರೆಸ್‌ನ ಅನರ್ಹ ಶಾಸಕ ಆರ್‌.ರೋಷನ್‌ ಬೇಗ್‌ ಶಿವಾಜಿನಗರ ಕ್ಷೇತ್ರದಲ್ಲಿ ಕಣ ಕ್ಕಿಳಿದಿಲ್ಲ. ಹೀಗೆ, ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು, ಪಕ್ಷಗಳು ಅದಲು- ಬದಲಾಗಿದ್ದು, ಮತದಾರರಲ್ಲಿ ಗೊಂದಲ ಮೂಡಿಸಿರುವ ಸಾಧ್ಯತೆ ಇದೆ.

ಪಕ್ಷವಾರು ಬೆಂಬಲಿಗರ ವರ್ಗೀಕರಣ: ಉಪಚುನಾವಣೆ ನಡೆದಿರುವ 15 ಕ್ಷೇತ್ರಗಳಲ್ಲೂ ಪಕ್ಷಾವಾರು
ಸಂಭಾವ್ಯ ಮತದಾನ ಪ್ರಮಾಣವನ್ನು ಎ, ಬಿ, ಸಿ, ಡಿ ಎಂದು ವರ್ಗೀಕರಣ ಮಾಡಲಾಗಿದೆ. ಎ- ಬಿಜೆಪಿ
ಬೆಂಬಲ ಸಾಧ್ಯತೆ, ಬಿ- ಅನಿರ್ಧರಿತ ಮತದಾರರು (ಯಾರಿಗೆ ಮತ ಹಾಕಬೇಕು ಎಂಬುದನ್ನು ಕೊನೆಯ
ಕ್ಷಣದಲ್ಲಿ ನಿರ್ಧರಿಸುವವರು), ಸಿ- ಕಾಂಗ್ರೆಸ್‌ಗೆ ಬೆಂಬಲ ಸಂಭವ ಹಾಗೂ ಡಿ- ಜೆಡಿಎಸ್‌ಗೆ ಬೆಂಬಲ
ಸಂಭವ ಎಂಬುದಾಗಿ ವರ್ಗೀಕರಿಸಲಾಗುತ್ತದೆ. ಕಾಂಗ್ರೆಸ್‌, ಜೆಡಿಎಸ್‌ ಅನರ್ಹ ಶಾಸಕರು ಇದೀಗ
ಬಿಜೆಪಿಗೆಯಿಂದ ಸ್ಪರ್ಧಿಸಿದ್ದು, ಪಕ್ಷವಾರು ವರ್ಗೀಕರಣವೂ ಸವಾಲೆನಿಸಿತ್ತು. ಆದರೂ ಪ್ರಚಾರ,
ಕಾರ್ಯಕರ್ತರ ಸಭೆ, ಸಾರ್ವಜನಿಕ ಸಭೆ ಹಾಗೂ ಆಂತರಿಕ ಸಮೀಕ್ಷೆಗಳ ಮಾಹಿತಿ ಆಧರಿಸಿ ವರ್ಗೀಕರಣ ಮಾಡಲಾಗಿದೆ. ಬಿಜೆಪಿ ಬೆಂಬಲಿಸಲಿದ್ದಾರೆ ಎನ್ನಲಾದ ಮತದಾರರ ಪ್ರಮಾಣ ಹಾಗೂ ಇತರ ಪಕ್ಷಗಳನ್ನು ಬೆಂಬಲಿಸುವ ಮತದಾರರ ಪ್ರಮಾಣವನ್ನು ಹೋಲಿಸಲಾಯಿತು. ನಂತರ “ಅನಿರ್ಧರಿತ ಮತದಾರರ’ ಬುಟ್ಟಿಯಿಂದ ಹೆಚ್ಚು ಮತ ಪಡೆಯುವ ಕಾರ್ಯಕ್ಕೆ ಒತ್ತು ನೀಡಲಾಯಿತು ಎಂದು ಬಿಜೆಪಿ ಮೂಲಗಳು ಹೇಳಿವೆ.

ಅನಿರ್ಧರಿತ ಮತದಾರರು ನಿರ್ಣಾಯಕ: ಪ್ರತಿ ಕ್ಷೇತ್ರದಲ್ಲೂ ಶೇ.25ರಿಂದ ಶೇ.30ರಷ್ಟು ಮಂದಿ
ಅನಿರ್ಧರಿತ ಮತದಾರರಿದ್ದಾರೆ ಎಂಬ ಅಂದಾಜು ಇದೆ. ಇದರಲ್ಲಿ ಕೊನೆಯ ಕ್ಷಣದ ಆಮಿಷಗಳಿಗೆ ಒಳ
ಗಾಗಿ ಮತ ಹಾಕುವವರ ಸಂಖ್ಯೆಯೂ ಗಣನೀಯವಾಗಿದೆ. ಉಳಿದಂತೆ ಚುನಾವಣೆ ವಿಚಾರ, ಟ್ರೆಂಡ್‌,
ಪ್ರಚಾರ ವೈಖರಿ, ಅಭ್ಯರ್ಥಿಗಳ ಪೂರ್ವಾಪರ, ನನ್ನ ಮತವನ್ನು ಯಾರಿಗೆ ಚಲಾಯಿಸಿದರೆ ನಷ್ಟವಾಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಅಂದಾಜಿಸಲಾಗುತ್ತದೆ. ಹಾಗಾಗಿ, ಈ ಮತದಾರರ ವಿಶ್ವಾಸ ಗಳಿಸಿದರೆ ಹೆಚ್ಚು ಮತ ಪಡೆಯಲು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಮಾಡಲಾಗಿದೆ. ಹಾಗಾಗಿ, ಈ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ನಾಲ್ಕು ದಿನದಿಂದ ಸತತ ಪ್ರಯತ್ನ: ಅನಿರ್ಧರಿತ ಮತದಾರರೆಂದು ಗುರುತಿಸಿದವರ ಪೈಕಿ ಬಹುಪಾಲು
ಮಂದಿ ಮತದಾನ ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಈ ಮತದಾರರನ್ನು
ಭೇಟಿಯಾಗಿ ವಿಶ್ವಾಸ ಗಳಿಸುವ, ಬೆಂಬಲಿಸುವಂತೆ ಮನವಿ ಮಾಡುವ ಪ್ರಯತ್ನವನ್ನು ಬಹುತೇಕ ಕಡೆ
ವ್ಯವಸ್ಥಿತವಾಗಿ ಮಾಡಲಾಗಿದೆ. ಏಕೆಂದರೆ ಈ ಮತದಾರರ ವಿಶ್ವಾಸ ಗಳಿಸಿದರೆ ಅವರು ನಿರಂತರವಾಗಿ
ಪಕ್ಷ ಬೆಂಬಲಿಸುವ ವಿಶ್ವಾಸ ಮೂಡಲಿದ್ದು, ಪಕ್ಷದ ಕಾಯಂ ಮತಬ್ಯಾಂಕ್‌ ಆಗಿ ಉಳಿಯಲು
ಅನುಕೂಲವಾಗಿದೆ ಎಂದು ಅಂದಾಜಿಸಲಾಗಿದೆ.

ವಿಶ್ವಾಸ ಗಳಿಸುವ ಪ್ರಯತ್ನ
ಬಹಳಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನಲ್ಲಿ “ಅನಿರ್ಧರಿತ ಮತದಾರರೇ’ ನಿರ್ಣಾಯಕ
ಪಾತ್ರ ವಹಿಸಲಿದ್ದಾರೆ. ಹಾಗಾಗಿ, ಬಿಜೆಪಿ ಬೆಂಬಲಿಸುವ ಮತಬ್ಯಾಂಕ್‌ನ್ನು ಸಕ್ರಿಯಗೊಳಿಸುವುದರ ಜತೆಗೆ ಅನಿರ್ಧರಿತ ಮತದಾರರ ವಿಶ್ವಾಸ ಗಳಿಸುವ ಪ್ರಯತ್ನವನ್ನು ನಾಲ್ಕು ದಿನದಿಂದ ನಿರಂತರವಾಗಿ ಮಾಡಲಾಗಿದೆ. ಸಾಧ್ಯವಾದಷ್ಟು ಕಡೆ ನೇರವಾಗಿ ಭೇಟಿಯಾಗಿ ಮನವಿ ಮಾಡಲಾಗಿದೆ. ಇದರಿಂದ ಅಭ್ಯರ್ಥಿ, ಪಕ್ಷದ ಚಿಹ್ನೆ ಬಗ್ಗೆ ಮತ್ತೂಮ್ಮೆ ಮನವರಿಕೆ ಮಾಡುವ ಕಾರ್ಯವೂ ಮುಗಿದಂತಾಗಿದ್ದು, ಪಕ್ಷಕ್ಕೆ
ಅನುಕೂಲವಾಗುವ ನಿರೀಕ್ಷೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next