Advertisement
ಸಾಮಾಜಿಕ ಕೌಶಲ್ಯಗಳ ಅನಾವರಣ ನವನವೀನ ಯೋಚನೆಗಳು ಕಾರ್ಯ ರೂಪಕ್ಕೆ ಬರಲು ಟೀಂ ವರ್ಕ್ ಸಹಕಾರಿ. ಒಬ್ಬರಿಂದ ಇನ್ನೊಬ್ಬರು ಏಕಾಗ್ರತೆಯಿಂದ ಆಲಿಸಲೂಬಹುದು, ಒಗ್ಗಟ್ಟಾಗಿ ಕೆಲಸ ನಿರ್ವಹಿಸುವುದರಿಂದ ಒಬ್ಬರಿಗೊಬ್ಬರು ಸಹಾಯಕ್ಕೆ ಉತ್ತಮ ವೇದಿಕೆಯಾಗಿದೆ.
ಒಬ್ಬರೆ ಕೆಲಸ ಮಾಡುವುದಕ್ಕೂ ಎಲ್ಲರೂ ಸೇರಿ ಕೆಲಸ ನಿರ್ವಹಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮ ಶಾಲಾ ಜೀವನದಲ್ಲಿ ಇದು ಯಾವುದೇ ಕಾರ್ಯಕ್ರಮಗಳನ್ನು ಆಯೋಜನೇ ಮಾಡುವಾಗ ಅತ್ಯಂತ ಸಹಕಾರಿಯಾಗಿದೆ. ಶಾಲೆಗಳಲ್ಲಿ ಯಾವುದೇ ಒಂದು ಸಭೆ ಸಮಾರಂಭ ಇದ್ದಾಗ ಎಲ್ಲರೂ ಒಟ್ಟಾಗಿ ಒಂದೊಂದು ಕೆಲಸವನ್ನು ಹಂಚಿಕೊಂಡು ನಿರ್ವಹಿಸಿದಾಗ ಒಂದು ಸಮಾರಂಭವನ್ನು ಹೇಗೆ ನಿರ್ವಹಿಸುವ ಕೌಶಲ ಕಲಿಯಲು ಇದು ಸಹಕಾರಿ. ಸ್ಟೇಜ್ ಫಿಯರ್ ಈಗ ಕ್ಲಿಯರ್
ಕೆಲ ಮಕ್ಕಳಲ್ಲಿ ವೇದಿಕೆ ಹತ್ತುಲು ಭಯ ಇರುತ್ತದೆ. ಅಂತವರಿಗೆ ಗುಂಪು ಚರ್ಚೆಗಳಲ್ಲಿ ತೊಡಗಿದಾಗ ಮತ್ತು ಟೀಂ ವರ್ಕ್ ಆಗಿ ಕೆಲಸ ನಿರ್ವಹಿಸಿದಾಗ ಭಯ ಹೋಗಲಾಡಿಸಲು ಸಾಧ್ಯ. ನಿಮಗೆ ಒಬ್ಬರಿಗೆ ವೇದಿಕೆ ಮೇಲೆ ಹೋಗಿ ಹಾಡುವುದಕ್ಕೆ, ಕುಣಿಯುವುದಕ್ಕೆ ಭಯವಿದ್ದರೆ ಗಾಯನ, ನೃತ್ಯಗಳಲ್ಲಿ ಪಾಲ್ಗೊಳ್ಳಿ ಇದು ಕ್ರಮೇಣ ನಿಮ್ಮಲ್ಲಿರುವ ಸ್ಟೇಜ್ ಫಿಯರ್ ಅನ್ನು ದೂರ ಮಾಡುತ್ತದೆ. ಇಷ್ಟೆಲ್ಲದಕ್ಕೂ ಮೀರಿ ಗುಂಪಿನೊದಿಗೆ ಬೆರೆಯುವುದರಿಂದ ಇತರರೊಂದಿಗೆ ಬೆರಯುವ, ಸ್ನೇಹ ಸಂಬಂಧಗಳ ಮೌಲ್ಯಗಳ ಸೂಕ್ಷತೆಯ ಅರಿವು ನಮಗಾಗುತ್ತದೆ. ಹೊರ ಜಗತ್ತಿಗೆ ನಮ್ಮನ್ನು ನಾವು ತೆರೆದುಕೊಳ್ಳುವುದಕ್ಕೆ ಗುಂಪಿನಲ್ಲಿ ಬೆರೆಯಲೇಬೇಕು. ಗುಂಪಿನೊದಿಗೆ ಬೆರೆಯುವುದರಿಂದ ನಮ್ಮೊಂದಿಗೆ ಅನೇಕ ಜನರನ್ನು ಧನಾತ್ಮಕ ಭಾವನೆಯು ನಿಮ್ಮಲ್ಲಿ ಬೆಳೆಯುತ್ತದೆ.
Related Articles
ಇಲ್ಲಿ ವೈಯುಕ್ತಿಕ ಯೋಚನೆಗಳಿಗೂ ಅವಕಾಶವಿರುತವೆ. ನಮ್ಮಲ್ಲಿರುವ ಅನೇಕ ವಿಷಯಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆಯಾಗಿದೆ. ಕೆಲಸ ಕಾರ್ಯಗಳಲ್ಲಿ ಏಕತೆಯನ್ನು ಕಾಪಾಡಲು ಟೀಂ ವರ್ಕ್ ಸಹಕಾರಿ. ಜತೆಗೆ ಉತ್ತಮ ಸ್ನೇಹವನ್ನು ಏರ್ಪಡಿಸುತ್ತದೆ. ಬಂದಂತಹ ಕಷ್ಟಗಳನ್ನು ಒಟ್ಟಾಗಿ ಎದುರಿಸುವ ಮಾರ್ಗೋಪಾಯ ಅರಿಯಲು ಸಹಕರಿಸುತ್ತದೆ. ಟೀಂ ವರ್ಕ್ ಉತ್ತಮ ಕಲಿಕೆಯನ್ನು ಒದಗಿಸುತ್ತದೆ. ಇದರಿಂದ ಮುಂಬರುವ ಸಮಸ್ಯೆಗಳನ್ನು ಎದುರಿಸಲು ಸಹಾಯವಾಗುತ್ತದೆ. ಹಾಗೆಯೇ ಹೊಸ ವಿಷಯಗಳನ್ನು ಕಲಿಕೆಗೆ ಇದು ಉತ್ತಮ ವೇದಿಕೆಯಾಗಿದೆ.
Advertisement
- ವಿಶು, ಅಮೀನ್