ಮುಂಬಯಿ: “ನಾನು ಪ್ರಾಮಾಣಿಕವಾಗಿ ಹೇಳುವುದಾದರೆ ದಕ್ಷಿಣ ಆಫ್ರಿಕಾ ತಂಡ ಈಗ ನನ್ನ ನಿರೀಕ್ಷೆಗಳನ್ನು ಮೀರಿ ಆಡುತ್ತಿದೆ” ಎಂದು ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.
”ಮುಂಬರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಹಣಹಣಿಗೂ ಮುನ್ನ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸ್ಮಿತ್, ನಮ್ಮ ತಂಡದಲ್ಲಿ ಕೆಲವು ಗುಣಮಟ್ಟದ ಆಟಗಾರರಿದ್ದಾರೆ ಎಂದು ನನಗೆ ತಿಳಿದಿದೆ ಮತ್ತು ಆ ಎಲ್ಲಾ ಅಗ್ರ ಆಟಗಾರರು ಪಂದ್ಯಾವಳಿಯಲ್ಲಿ ಫಾರ್ಮ್ ಕಂಡುಕೊಂಡಿದ್ದಾರೆ, ಅದನ್ನು ನೋಡುವುದು ಅದ್ಭುತವಾಗಿದೆ” ಎಂದರು.
”ನಮ್ಮ ತಂಡ ಸೆಮಿಫೈನಲ್‌ಗೆ ಬಹುಮಟ್ಟಿಗೆ ಅರ್ಹತೆ ಪಡೆದಿದೆ, ಆಶಾದಾಯಕವಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಅಂಕಪಟ್ಟಿಯ ಅಗ್ರ 2 ಸ್ಥಾನದ ಹಣಾಹಣಿಯಾಗಲಿದೆ” ಎಂದರು.
”ತವರಿನಲ್ಲಿ ಭಾರತ ಯಾವಾಗಲೂ ಬಲಿಷ್ಠವಾಗಿದೆ. ಆದರೆ ವಿಶ್ವಕಪ್‌ನಲ್ಲಿ ಹೆಚ್ಚುವರಿ ಒತ್ತಡ, ಹೆಚ್ಚುವರಿ ನಿರೀಕ್ಷೆ-ಅದು ಅವರ ಮೇಲೆ ಪರಿಣಾಮ ಬೀರಿರುವಂತೆ ಕಾಣುತ್ತಿಲ್ಲ. ದೊಡ್ಡ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಗೆ ಗಾಯವಾಗಿರುವುದು ಸದ್ಯಕ್ಕೆ ಅವರಿಗಿರುವ ಏಕೈಕ ಕೊರತೆ ಎಂದು ನಾನು ಭಾವಿಸುತ್ತೇನೆ. ಆದರೆ ಹೆಚ್ಚುವರಿ ಬೌಲರ್ ಅನ್ನು ಆಯ್ಕೆ ಮಾಡಿರುವುದು ಚೆನ್ನಾಗಿ ಕೆಲಸ ಮಾಡಿದೆ.ನಿರೀಕ್ಷೆಯಂತೆ ಭಾರತ ಪ್ರಬಲ ತಂಡವಾಗಿದೆ” ಎಂದರು.
ನವೆಂಬರ್ 5 ರಂದು ಭಾರತ – ದಕ್ಷಿಣ ಆಫ್ರಿಕಾ ಪಂದ್ಯ ನಡೆಯಲಿದೆ.