Advertisement

ಅಂತಿಮ ಪಂದ್ಯದಲ್ಲೂ ಟಿಂ ಇಂಡಿಯಾ ಕಮಾಲ್: ಐತಿಹಾಸಿಕ ಕ್ಲೀನ್ ಸ್ವೀಪ್

09:54 AM Feb 03, 2020 | keerthan |

ಮೌಂಟ್ ಮೌಂಗನಿ: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20 ಪಂದ್ಯ ಗೆದ್ದ ಟೀಂ ಇಂಡಿಯಾ ಐತಿಹಾಸಿಕ ಸರಣಿ ಗೆದ್ದು ಬೀಗಿದೆ.

Advertisement

ಅಂತಿಮ ಪಂದ್ಯವನ್ನು 7 ರನ್ ಅಂತರದಿಂದ ಗೆದ್ದ ಟೀಂ ಇಂಡಿಯಾ 5-0 ಅಂತರದಿಂದ ಸರಣಿಯನ್ನು ಜಯಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ163 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಕಿವೀಸ್ 9 ವಿಕೆಟ್ ಕಳೆದುಕೊಂಡು 156 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತ ಇಂದು ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದ ಕಾರಣ ರೋಹಿತ್ ಶರ್ಮಾ ನಾಯಕತ್ವ ವಹಿಸಿದರು. ಆರಂಭಿಕರಾಗಿ ಸಂಜು ಸ್ಯಾಮ್ಸನ್ ಮತ್ತು ರಾಹುಲ್ ಕಣಕ್ಕಿಳಿದರು. ಸಂಜು ಮತ್ತೊಂದು ಅವಕಾಶವನ್ನು ವ್ಯರ್ಥ ಮಾಡಿದರೆ, ರಾಹುಲ್ 45 ರನ್ ಗಳಿಸಿದರು.

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರೋಹಿತ್ 60 ರನ್ ಗಳಿಸಿದರು. ಈ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದ ಅವರು ಮೈದಾನ ತೆರೆದರು. ಅಂತಿಮವಾಗಿ ಅಯ್ಯರ್ 33 ರನ್ ಮತ್ತು ಮನೀಷ್ ಪಾಂಡೆ ನಾಲ್ಕು ಎಸೆತದಲ್ಲಿ 11 ರನ್ ಬಾರಿಸಿದರು.

Advertisement

ಸಾಧಾರಣ ಗುರಿಯನ್ನು ಬೆನ್ನತ್ತಿದ ಕಿವೀಸ್ ಆರಂಭದಲ್ಲಿಯೇ ಆಘಾತ ಅನುಭವಿಸಿತು. ತಂಡ ಮೊತ್ತ 17 ರನ್ ಆಗುವಷ್ಟರಲ್ಲಿ ಮೂವರು ಔಟ್ ಆಗಿದ್ದರು. ನಂತರ ಜೊತೆಯಾಟವಾಡಿದ ಟೇಲರ್ ಮತ್ತು ಟಿಮ್ ಸೀಫರ್ಟ್ 99 ರನ್ ಜೊತೆಯಾಟವಾಡಿದರು. ಇಬ್ಬರೂ ತಲಾ ಅರ್ಧಶತಕ ಬಾರಿಸಿದರು. ಒಂದು ಹಂತದಲ್ಲಿ ಕಿವೀಸ್ ಸುಲಭ ಜಯದತ್ತ ಹೆಜ್ಜೆ ಹಾಕಿತ್ತು.

50 ರನ್ ಗಳಿಸಿದ್ದ ಸೀಫರ್ಟ್ ಸೈನಿ ಬಲೆಗೆ ಬೀಳುವುದರೊಂದಿಗೆ ಕಿವೀಸ್ ಕೊಲ್ಯಾಪ್ಸ್ ಆರಂಭವಾಯಿತು. ಟೇಲರ್ ಕೂಡಾ 53 ರನ್ ಗಳಿಸಿ ಔಟಾದರು. ಭಾರತೀಯ ಬೌಲರ್ ಗಳ ಕರಾರುವಾಕ್ ದಾಳಿಗೆ ನಲುಗಿದ ಕಿವೀಸ್ ಅಂತಿಮವಾಗಿ 156 ರನ್ ಅಷ್ಟೇ ಗಳಿಸಿತು.

ಭಾರತದ ಪರ ಬುಮ್ರಾ ಮೂರು ವಿಕೆಟ್ ಪಡೆದರೆ, ಸೈನಿ ಮತ್ತು ಶಾರ್ದೂಲ್ ತಲಾ ಎರಡು ವಿಕೆಟ್ ಪಡೆದರು. ಬುಮ್ರಾ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರೆ, ಕೆ ಎಲ್ ರಾಹುಲ್ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

ರಾಹುಲ್ ಗೆ ನಾಯಕತ್ವ

ರೋಹಿತ್ ಗಾಯದಿಂದ ಮೈದಾನ ತೊರೆದ ಕಾರಣ ಫೀಲ್ಡಿಂಗ್ ವೇಳೆ ಕನ್ನಡಿಗ ಕೆ ಎಲ್ ರಾಹುಲ್ ನಾಯಕತ್ವದ ಹೊಣೆ ಹೊತ್ತರು. ಅದೃಷ್ಟವೆಂದರೆ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡರು ಕೂಡ.

Advertisement

Udayavani is now on Telegram. Click here to join our channel and stay updated with the latest news.

Next