Advertisement

ಮೆಲ್ಬರ್ನ್ ಅಂಗಳದಲ್ಲಿ ಮೆರೆದಾಡಿದ ಭಾರತ: ಎಂಟು ವಿಕೆಟ್ ಜಯ, ಸರಣಿ ಸಮಬಲ

09:23 AM Dec 29, 2020 | keerthan |

ಮೆಲ್ಬರ್ನ್: ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದೆ. ಮೆಲ್ಬರ್ನ್ ಅಂಗಳದಲ್ಲಿ ಎಂಟು ವಿಕೆಟ್ ಅಂತರದ ಗೆಲವು ಸಾಧಿಸಿದ ರಹಾನೆ ಪಡೆ ಸರಣಿಯಲ್ಲಿ ಸಮಬಲ ಸಾಧಿಸಿದೆ.

Advertisement

ಗೆಲುವಿಗೆ 70 ರನ್ ಗುರಿ ಪಡೆದ ಟೀಂ ಇಂಡಿಯಾ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭದಲ್ಲೇ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ ಪೂಜಾರ ವಿಕೆಟ್ ಕಳೆದುಕೊಂಡ ಭಾರತಕ್ಕೆ ಶುಭ್ಮನ್ ಗಿಲ್ (35 ರನ್ ) ಮತ್ತು ನಾಯಕ ಅಜಿಂಕ್ಯ ರಹಾನೆ ( 27 ರನ್) ಆಧರಿಸಿದರು.

70 ರನ್ ಗುರಿ

ಆರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದ್ದಲ್ಲಿಂದ ನಾಲ್ಕನೇ ದಿನದಾಟ ಆರಂಭಿಸಿದ ಆಸೀಸ್ ಗೆ ಗ್ರೀನ್ ಮತ್ತು ಕಮಿನ್ಸ್ ನೆರವಾದರು. ಗ್ರೀನ್ 45 ರನ್ ಮತ್ತು ಕಮಿನ್ಸ್ ಉಪಯುಕ್ತ 22 ರನ್ ಗಳಿಸಿದರು. ಸ್ಟಾರ್ಕ್ 14 ಮತ್ತು ಹ್ಯಾಜಲ್ ವುಡ್ 10 ರನ್ ಗಳಿಸಿದರು.

ಪೇನ್ ಪಡೆ 200 ರನ್ ಗೆ ಆಲ್ ಔಟ್ ಆಯಿತು. ಭಾರತಕ್ಕೆ 70 ರನ್ ಗುರಿ ನೀಡಿತು. ಸಿರಾಜ್ ಮೂರು ವಿಕೆಟ್, ಬುಮ್ರಾ, ಅಶ್ವಿನ್, ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ಉಮೇಶ್ ಯಾದವ್ ಪಡೆದರು.

Advertisement

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 195 ರನ್ ಗಳಿಸಿತ್ತು. ಅಜಿಂಕ್ಯ ರಹಾನೆ ಶತಕದ ನೆರವಿನಿಂದ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 326 ರನ್ ಗಳಿಸಿತ್ತು. ದ್ವಿತೀಯ ಇನ್ನಿಂಗ್ಸ್ ನಲ್ಲಿ 200 ರನ್ ಗಳಿಸಿದ ಆಸೀಸ್ ಭಾರತಕ್ಕೆ 70 ರನ್ ಗುರಿ ನೀಡಿತ್ತು. ಟೀಂ ಇಂಡಿಯಾ ಈ ಗುರಿಯನ್ನು ಎರಡು ವಿಕೆಟ್ ಕಳೆದುಕೊಂಡು ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next