Advertisement
2025ರಲ್ಲಿ ಭಾರತ 10 ಟೆಸ್ಟ್ಗಳನ್ನಷ್ಟೇ ಆಡಲಿದೆ. 2024ಕ್ಕೆ ಹೋಲಿಸಿದರೆ 5 ಟೆಸ್ಟ್ ಕಡಿಮೆ. ಇದರಲ್ಲೊಂದು ಟೆಸ್ಟ್ “ಬೋರ್ಡರ್-ಗಾವಸ್ಕರ್ ಟ್ರೋಫಿ’ ಸರಣಿಯ ಸಿಡ್ನಿಯ ನ್ಯೂ ಇಯರ್ ಪಂದ್ಯವಾಗಿದೆ. ಅನಂತರ ಭಾರತ ಟೆಸ್ಟ್ ಆಡುವುದು 6 ತಿಂಗಳ ಬಳಿಕ, ಜೂನ್ನಲ್ಲಿ. ಇದು ಇಂಗ್ಲೆಂಡ್ನಲ್ಲಿ ನಡೆಯುವ 5 ಪಂದ್ಯಗಳ ಸರಣಿ. ಜೂನ್ 11ರಿಂದ ಆಗಸ್ಟ್ 4ರ ತನಕ ಈ ಸರಣಿ ನಡೆಯಲಿದೆ. ಟೆಸ್ಟ್ ಪಂದ್ಯಗಳ ತಾಣಗಳೆಂದರೆ ಹೇಡಿಂಗ್ಲೆ, ಎಜ್ಬಾಸ್ಟನ್, ಲಾರ್ಡ್ಸ್, ಮ್ಯಾಂಚೆಸ್ಟರ್ ಮತ್ತು ಓವಲ್.
Related Articles
Advertisement
ಚಾಂಪಿಯನ್ಸ್ ಟ್ರೋಫಿ
ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಾಕಿಸ್ಥಾ ನದ ಆತಿಥ್ಯದಲ್ಲಿ, ಹೈಬ್ರಿಡ್ ಮಾದರಿ ಯಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಭಾರತವಿಲ್ಲಿ ಬಾಂಗ್ಲಾದೇಶ, ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಲೀಗ್ ಪಂದ್ಯಗಳನ್ನು ಆಡಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್
ಈ ಬಾರಿ ಭಾರತ ವಿಶ್ವ ಟೆಸ್ಟ್ ಚಾಂಪಿ ಯನ್ಶಿಪ್ ಫೈನಲ್ನಲ್ಲಿ ಆಡುವುದು ಖಾತ್ರಿ ಯಾಗಿಲ್ಲ. ಫೈನಲ್ ಹಣಾಹಣಿ ಜೂ. 11ರಿಂದ 15ರ ತನಕ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿದೆ. ಒಂದು ವೇಳೆ ಭಾರತ ಫೈನಲ್ ಪ್ರವೇಶಿಸಿದ್ದೇ ಆದಲ್ಲಿ 2025ರಲ್ಲಿ ಆಡಲಿರುವ ಟೆಸ್ಟ್ ಪಂದ್ಯಗಳ ಸಂಖ್ಯೆ 11ಕ್ಕೆ ಏರಲಿದೆ.
ಬಾಂಗ್ಲಾ ಪ್ರವಾಸ
ಆಗಸ್ಟ್ನಲ್ಲಿ ಬಾಂಗ್ಲಾದೇಶ ಪ್ರವಾಸ ತೆರಳುವ ಭಾರತ ತಂಡ, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ. ವರ್ಷಾಂತ್ಯದಲ್ಲಿ ಟಿ20 ಏಷ್ಯಾ ಕಪ್ ಪಂದ್ಯಾವಳಿ; ಆಸ್ಟ್ರೇಲಿಯದಲ್ಲಿ 3 ಏಕದಿನ, 5 ಟಿ20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್ ಜತೆಗೆ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನೂ ಆಡಲಿದೆ.