Advertisement

Victory parade; ಮುಂಬೈ ನಲ್ಲಿ T20 ಚಾಂಪಿಯನ್ನರಿಗೆ ಸಂಭ್ರಮೋಲ್ಲಾಸದ ಸ್ವಾಗತ

08:08 PM Jul 04, 2024 | Team Udayavani |

ಮುಂಬೈ: ಟಿ20 (T20WorldCup2024) ವಿಶ್ವಕಪ್ ಗೆದ್ದು ತವರಿಗೆ ಮರಳಿದ ಟೀಮ್ ಇಂಡಿಯಾಕ್ಕೆ ದೆಹಲಿಯಲ್ಲಿ ಬೆಳಗ್ಗೆ ಭವ್ಯ ಸ್ವಾಗತ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ ಬಳಿಕ ಸಂಜೆ ಮುಂಬೈನಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಗಿದೆ.

Advertisement

ಲಕ್ಷಾಂತರ ಜನರು ಮರೀನ್ ಡ್ರೈವ್ ನಿಂದ ವಾಂಖಡೆ ಕ್ರೀಡಾಂಗಣದ ವರೆಗೆ ಅದ್ದೂರಿ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಟ್ರೋಫಿ ಪರೇಡ್ ನಡೆಸಿದ ಬಳಿಕ ಕ್ರೀಡಾಂಗಣದಲ್ಲಿ ವಿಶ್ವಕಪ್ ವಿಜೇತ ತಂಡಕ್ಕೆ ಬಿಸಿಸಿಐ ಅಭಿನಂದನೆ ಸಲ್ಲಿಸಲಿದೆ.

ತುಂಬಿ ತುಳುಕಿದ ವಾಂಖೆಡೆ

ಕ್ರಿಕೆಟ್ ಅಲ್ಲದ ದಿನದಂದು ಮಳೆ ಸುರಿಯುತ್ತಿದ್ದರೂ ತುಂಬಿದ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶೇಷ ಸಂಭ್ರಮ ಕಂಡು ಬಂದಿದ್ದು, ಸಾವಿರಾರು ಜನರು ಟೀಮ್ ಇಂಡಿಯಾ ಪರ, ಆಟಗಾರರ ಪರ ಜಯಘೋಷಗಳನ್ನು ಮೊಳಗಿಸುತ್ತಿದ್ದಾರೆ. 2007 ರ ಟಿ 20 ವಿಶ್ವಕಪ್‌ನ ವಿಜಯೋತ್ಸವದ ಮೆರವಣಿಗೆ, 2011 ರಲ್ಲಿ ಭಾರತದ ODI ವಿಶ್ವಕಪ್ ವಿಜಯೋತ್ಸವ ನಡೆಸಿದ ಬಳಿಕ ಈಗ T20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಯನ್ನು ಆಚರಿಸುತ್ತಿರುವುದು ಮುಂಬೈಗೆ ಹೊಸ ಉತ್ಸವವಾಗಿ ಪರಿಣಮಿಸಿದೆ.

ಟಿ20 ವಿಶ್ವಕಪ್ ವಿಜೇತ ತಂಡದ ರೋಡ್ ಶೋಗೆ ಮುಂಚಿತವಾಗಿ ಮುಂಬೈ ಪೊಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದ್ದುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

“ನಾರಿಮನ್ ಪಾಯಿಂಟ್ ಮತ್ತು ವಾಂಖೆಡೆ ಸ್ಟೇಡಿಯಂ ನಡುವಿನ ಮರೀನ್ ಡ್ರೈವ್‌ನಲ್ಲಿ ಸಾಕಷ್ಟು ಭದ್ರತೆಯನ್ನು ಕೈಗೊಳ್ಳಲಾಗಿದೆ” ಎಂದು ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಎಚ್ಚರಿಕೆಗಳನ್ನು ನೀಡಲಾಗಿದ್ದು ಭದ್ರತಾ ಸಿಬಂದಿಗಳನ್ನೂ ನಿಯೋಜಿಸಲಾಗಿದೆ.ಹಲವೆಡೆ ಪಾರ್ಕಿಂಗ್ ಮಾಡದಂತೆ ಬೆಳಗ್ಗಿನಿಂದಲೂ ನಿಷೇಧ ಹೇರಲಾಗಿದೆ. ಭಾರೀ ಸಂಖ್ಯೆಯ ಪೊಲೀಸರು ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಆಂಬ್ಯುಲೆನ್ಸ್‌ಗೆ ದಾರಿ
ಜಮಾಯಿಸಿದ ಕ್ರಿಕೆಟ್ ಅಭಿಮಾನಿಗಳು ಆಂಬ್ಯುಲೆನ್ಸ್‌ಗೆ ಭಾರೀ ಜನಸಂದಣಿಯ ಮೂಲಕ ಹಾದುಹೋಗಲು ದಾರಿ ಮಾಡಿಕೊಟ್ಟರು.

ಮುಂಬೈ ವಿಮಾನನಿಲ್ದಾಣದಲ್ಲಿ ಟೀಮ್ ಇಂಡಿಯಾ ಬಂದಿಳಿಯುವ ವೇಳೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಹಾರ್ದಿಕ್ ಪಾಂಡ್ಯ ಅವರು ಟ್ರೋಫಿ ಕೈಯಲ್ಲಿ ಹಿಡಿದುಕೊಂಡು ಬಂದರು.

Advertisement

Udayavani is now on Telegram. Click here to join our channel and stay updated with the latest news.

Next