Advertisement

T20 Cricket; 2026ರ ಟಿ20 ವಿಶ್ವಕಪ್‌ ತನಕ ಭಾರತ ಆಡಲಿದೆ 34 ಪಂದ್ಯ

11:34 PM Jul 02, 2024 | Team Udayavani |

ಹೊಸದಿಲ್ಲಿ: ಭಾರತ ಎರಡನೇ ಸಲ ಟಿ20 ವಿಶ್ವಕಪ್‌ ಗೆದ್ದು ಬೀಗಿದೆ. ಈ ಸಾಧನೆಗೈದ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ಸಾಲಿನಲ್ಲಿ ವಿರಾಜಮಾನವಾಗಿದೆ.

Advertisement

ಮುಂದಿನ ಟಿ20 ವಿಶ್ವಕಪ್‌ ನಡೆಯುವುದು 2026ರಲ್ಲಿ. ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಈ ಪಂದ್ಯಾವಳಿ ಸಾಗಲಿದೆ. ಐಸಿಸಿ ವೇಳಾಪಟ್ಟಿಯಂತೆ, ಈ 2 ವರ್ಷಗಳಲ್ಲಿ ವಿಶ್ವವಿಜೇತ ಭಾರತ ತಂಡ 34 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಒಟ್ಟು 8 ಸರಣಿಗಳಿದ್ದು, ನಾಲ್ಕನ್ನು ತವರಲ್ಲಿ 4 ಆಡಲಿದೆ.

ಭಾರತದ ನೂತನ ಟಿ20 ಋತು ಇನ್ನು ನಾಲ್ಕೇ ದಿನಗಳಲ್ಲಿ ಜಿಂಬಾಬ್ವೆಯಲ್ಲಿ ಆರಂಭವಾಗಲಿದೆ. ಇದು 5 ಪಂದ್ಯಗಳ ಸರಣಿ. ಅಲ್ಲಿಂದ ಮರಳಿದ ಬೆನ್ನಲ್ಲೇ, ಜುಲೈಯಲ್ಲೇ ಶ್ರೀಲಂಕಾ ಪ್ರವಾಸಗೈದು 3 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಭಾರತ ತನ್ನ ತವರಿನ ಮೊದಲ ಸರಣಿಯನ್ನಾಡು ವುದು ಬಾಂಗ್ಲಾದೇಶ ವಿರುದ್ಧ. ಇದು ಸೆಪ್ಟಂಬರ್‌ನಲ್ಲಿ ನಡೆಯಲಿದೆ. ಪಂದ್ಯಗಳ ಸಂಖ್ಯೆ 3.

2025ರಲ್ಲಿ ಭಾರತ 4 ಸರಣಿಗಳನ್ನು ಆಡಬೇಕಿದೆ. ಮೊದಲು ಪ್ರವಾಸಿ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯದಲ್ಲಿ ಕ್ರಮವಾಗಿ 3 ಮತ್ತು 5 ಪಂದ್ಯಗಳ ಸರಣಿ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ತವರಲ್ಲಿ 5 ಪಂದ್ಯಗಳ ಸರಣಿಯನ್ನಾಡಲಿದೆ. 2026ರ ಆರಂಭದಲ್ಲಿ ನ್ಯೂಜಿಲ್ಯಾಂಡ್‌ ತಂಡ 5 ಟಿ20 ಪಂದ್ಯಗಳಿಗಾಗಿ ಭಾರತಕ್ಕೆ ಆಗಮಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next