Advertisement

ಇಂಗ್ಲೆಂಡ್ ನಲ್ಲಿ ಮೋಜು ಮಸ್ತಿಯಲ್ಲಿ ಟೀಮ್ ಇಂಡಿಯಾ

01:12 PM Jun 01, 2019 | keerthan |

ಲಂಡನ್: ವಿಶ್ವಕಪ್ ಕೂಟಕ್ಕಾಗಿ ಇಂಗ್ಲೆಂಡ್ ಗೆ ತೆರಳಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಮೊದಲ ಪಂದ್ಯವನ್ನು ಜೂನ್ ಐದರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಪಂದ್ಯಕ್ಕೂ ಮೊದಲು ಭಾರತ ತಂಡ ಇಂಗ್ಲೆಂಡ್ ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದೆ.

Advertisement

ಟೀಮ್ ಇಂಡಿಯಾ ಹುಡುಗರು ಪೈಂಟ್ ಬಾಲ್ ಆಟ ಆಡುತ್ತಿದ್ದು, ವಿಶ್ವಕಪ್ ಪಂದ್ಯಾಟಕ್ಕೂ ಮುನ್ನ ಮೋಜು ಮಾಡುತ್ತಿದ್ದಾರೆ. ಕೆ.ಎಲ್. ರಾಹುಲ್, ಶಿಖರ್ ಧವನ್, ಕುಲದೀಪ್ ಯಾದವ್, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್ ಜೊತೆ ಕೊಹ್ಲಿ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಹಾಕಿದ್ದಾರೆ.

ಬಿಸಿಸಿಐ ಕೂಡಾ ತನ್ನ ಟ್ವಿಟ್ಟರ್ ನಲ್ಲಿ ಟೀಂ ಇಂಡಿಯಾ ಆಟಗಾರರ ವಿಹಾರದ ಚಿತ್ರಗಳನ್ನು ಅಪ್ಲೋಡ್ ಮಾಡಿದೆ. ಕಾಡಿನ ಮರಗಳ ನಡುವಿನ ಒಂದು ಸುಂದರ ಸ್ಥಳದಲ್ಲಿ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಕೇದಾರ್ ಜಾಧವ್ ಕುಳಿತಿರುವ ಫೋಟೋದೊಂದಿಗೆ ಕಾಡಿನಲ್ಲಿ ಒಂದು ದಿನದ ಮೋಜು ಎಂಬರ್ಥದಲ್ಲಿ ಬಿಸಿಸಿಐ ಫೋಟೋ ಹರಿಯಬಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next